Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಹಳ್ಳಿ ಹಳ್ಳಿಗೂ ಎಲೆಕ್ಟ್ರಿಕ್ ಬಸ್ ಓಡಿಸಲು KSRTC ಸಿದ್ಧತೆ?
ಕರ್ನಾಟಕಪ್ರಮುಖ

ಇನ್ಮುಂದೆ ಹಳ್ಳಿ ಹಳ್ಳಿಗೂ ಎಲೆಕ್ಟ್ರಿಕ್ ಬಸ್ ಓಡಿಸಲು KSRTC ಸಿದ್ಧತೆ?

Share
3 Min Read
SHARE

newsics.com

ಸುಸ್ಥಿರ ಸಾರಿಗೆ ಸೇವೆ ನೀಡಲು ಮುಂದಾಗಿರುವ ಕರ್ನಾಟಕ, ರಾಜ್ಯ ಸಾರಿಗೆ ಸಂಸ್ಥೆ ಗ್ರಾಮೀಣ ಭಾಗಗಳಲ್ಲೂ ಎಲೆಕ್ಟ್ರಿಕ್‌ ಬಸ್‌ ಓಡಿಸಲು ಸಿದ್ಧತೆ ಆರಂಭಿಸಿದೆ.

ಕರ್ನಾಟಕದಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿರುವ ಸರ್ಕಾರದ ಗ್ಯಾರಂಟಿ ಸ್ಕೀಂನ ಮಹಿಳೆಯರ ‘ಶಕ್ತಿ’ ಉಚಿತ ಬಸ್‌ ಪ್ರಯಾಣ ಯೋಜನೆಗೆ ಇನ್ನಷ್ಟು ಸಹಕಾರಿ ಆಗುವ ದಿಶೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇ- ಬಸ್‌ ಯೋಜನೆಯ ಮಾದರಿಯಲ್ಲೇ ರಾಜ್ಯ ಸರ್ಕಾರ ಕೂಡ ಕರ್ನಾಟಕ ಎಲೆಕ್ಟ್ರಿಕಲ್‌ ಬಸ್‌ ಪ್ರೋಗ್ರಾಮ್‌(ಕೆಇಬಿಪಿ) ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಚಿಂತನೆ ನಡೆಸಿದೆ.
ಏನಿದು ಯೋಚನೆ?:
ಈಗಿನ ಚಿಂತನೆ ಪ್ರಕಾರ ಇಡೀ ರಾಜ್ಯದಲ್ಲಿ ಮೊದಲ ಹಂತದಲ್ಲಿ 1,950 ಎಲೆಕ್ಟ್ರಿಕಲ್‌ ಬಸ್‌ಗಳನ್ನು ಹಂಚಿಕೆ ಮಾಡಲು ಯೋಚನೆ ನಡೆಸಲಾಗಿದೆ. ಈ ಮೂಲಕ ಗ್ರಾಮೀಣ ಭಾಗಗಳಲ್ಲೂ ಇ ಬಸ್‌ ಸಂಚಾರ ಏರ್ಪಡಿಸುವ ಇದರ ಉದ್ದೇಶಗಳಲ್ಲೊಂದು.
ಆರಂಭಿಕ ಚಿಂತನೆ ಪ್ರಕಾರ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ಕನಿಷ್ಠ ಒಂದು ಎಕರೆಯಲ್ಲಿ ಇ-ಬಸ್‌ ನಿಲ್ದಾಣಕ್ಕೆ ಜಾಗ ನಿಗದಿಪಡಿಸಬೇಕು. ಅಲ್ಲಿ ‘ಹಸಿರು ಘಟಕ’ ಸ್ಥಾಪಿಸಬೇಕು. ಅಂದರೆ ಇ-ಬಸ್‌ ಚಾರ್ಜಿಂಗ್‌ ಮತ್ತು ಸರ್ವಿಸ್‌ ಸ್ಟೇಷನ್‌ ರಚಿಸುವುದು ಈಗಿನ ಚಿಂತನೆ.
ಕನಿಷ್ಠ ಒಂದು ಎಕರೆ ಜಾಗ ನೀಡಿದರೆ ಅಲ್ಲಿಗೆ 20 ಇ- ಬಸ್‌ ಒದಗಿಸುವುದು. ಕನಿಷ್ಠ 2-3 ಎಕರೆ ನೀಡಿದರೆ ತಲಾ 20ರಂತೆ 60 ಬಸ್‌ ಸಿಗುತ್ತದೆ. ಈ ಬಸ್‌ಗಳನ್ನು ಆಯಾ ಹಸಿರು ಘಟಕಗಳಿಂದಲೇ ಕಾರ್ಯಾಚರಣೆ ನಡೆಸುವಂತೆ ನೋಡಿಕೊಳ್ಳುವುದು. ಆಗ ಸ್ಥಳೀಯವಾಗಿ ಇ- ಬಸ್‌ಗಳನ್ನು ಇನ್ನಷ್ಟು ಗ್ರಾಮೀಣ ಪ್ರದೇಶಗಳನ್ನು ತಲುಪಲು ಸಾಧ್ಯವಿದೆ.
ಅಲ್ಲದೆ ಕೇವಲ ಗ್ರಾಮೀಣ ಮಾತ್ರವಲ್ಲ ನಗರ, ತಾಲೂಕು, ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಗಳಲ್ಲೂ ಇ- ಸಾರಿಗೆ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶ ಇದೆ. ಈಗಾಗಲೇ ಕೆಎಸ್‌ಆರ್‌ಟಿಸಿಯ ಸ್ವಂತ ಜಾಗವಿದ್ದರೆ ಅಲ್ಲಿಯೇ ಇ- ಬಸ್‌ಗೆ ಹಸಿರು ಘಟಕ ಸ್ಥಾಪಿಸುವುದು ಸುಲಭವಾಗಲಿದೆ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ.
ಡೀಸಿ, ಶಾಸಕರ ಮುತುವರ್ಜಿ ಅಗತ್ಯ
ಶಕ್ತಿ ಯೋಜನೆ ಜಾರಿ ಬಳಿಕ ಬಹುತೇಕ ಎಲ್ಲ ಕಡೆಗಳಲ್ಲೂ ಬಸ್‌ಗಳ ಕೊರತೆ ಉಂಟಾಗುತ್ತಿದೆ. ಪ್ರತಿ ದಿನವೂ ಪ್ರಯಾಣಿಕರ ದಟ್ಟಣೆಯಿಂದಾಗಿ ಇನ್ನಷ್ಟು ಬಸ್‌ಗಳಿಗೆ ಬೇಡಿಕೆ ಉಂಟಾಗಿದ್ದು, ಅದನ್ನು ಪೂರೈಸಲು ಸಾರಿಗೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಈ ಯೋಜನೆಗೆ ಆಯಾ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಜಾಗ ಒದಗಿಸುವಲ್ಲಿ ಸಹಕರಿಸಿದರೆ ಸುಲಭದಲ್ಲಿ ಊರಿಗೊಂದು ಎಲೆಕ್ಟ್ರಿಕಲ್‌ ಬಸ್‌ ಸೌಲಭ್ಯ ಸಾಧ್ಯ ಎನ್ನುವುದು ಅಧಿಕಾರಿಗಳ ಅಂಬೋಣ.
ಶೀಘ್ರ ಪಿಎಂ ಇ-ಬಸ್‌ ಯೋಜನೆ
ಪಿಎಂ(ಪ್ರಧಾನ ಮಂತ್ರಿ) ಇ- ಬಸ್‌ ಯೋಜನೆಯಲ್ಲಿ ಕೇವಲ ನಗರ ಪ್ರದೇಶದಲ್ಲಿ ಮಾತ್ರ ಸಿಟಿ ಬಸ್‌ ಸಂಚಾರಕ್ಕೆ ಅವಕಾಶವಿದೆ. ದೇಶದ ಎಲ್ಲ ನಗರಗಳಿಗೆ ಇ- ಬಸ್‌ ಯೋಜನೆ ಕಾರ್ಯಗತಗೊಳ್ಳಲಿದ್ದು, ಒಂದು ನಗರಕ್ಕೆ 100 ಸಿಟಿ ಬಸ್‌ಗಳನ್ನು ಪೂರೈಸಲಿದೆ. ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು, ಮಂಗಳೂರು, ಬೆಳಗಾವಿಗಳಿಗೆ ತಲಾ 100 ಬಸ್‌, ತುಮಕೂರು, ದಾವಣಗೆರೆಗೆ ತಲಾ 50 ಬಸ್‌ ಸಿಗಲಿದೆ. ಈಗಾಗಲೇ ಚಾರ್ಜಿಂಗ್‌ ಸ್ಟೇಷನ್‌ ನಿರ್ಮಾಣ ಪ್ರಕ್ರಿಯೆಗಳು ಆರಂಭಗೊಂಡಿವೆ.

ಪ್ರಸಕ್ತ ಜಾಗತಿಕವಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧಾತಂಕದ ನಡುವೆಯೇ ಭವಿಷ್ಯದ ದಿನಗಳಲ್ಲಿ ಪೆಟ್ರೋಲಿಯಂ ಇಂಧನ ಬದಲು ಎಲೆಕ್ಟ್ರಿಕಲ್‌ ಸಾರಿಗೆಗೆ ಒತ್ತು ನೀಡುವ ದಿಶೆಯಲ್ಲಿ ಇದು ಮಹತ್ವದ ಹೆಜ್ಜೆಯಾಗುವ ಸಾಧ್ಯತೆ ಇದೆ.
ಈ ಯೋಜನೆ ಆರಂಭಿಕ ಹಂತದಲ್ಲಷ್ಟೇ ಇದ್ದು, ಇನ್ನೂ ಅಂತಿಮ ರೂಪ ಪಡೆದಿಲ್ಲ. ಆದರೂ ಕೆಲವೇ ದಿನಗಳಲ್ಲಿ ಮೂರ್ತರೂಪ ಪಡೆದುಕೊಂಡು ಜನಪ್ರಿಯ ಯೋಜನೆಯಾಗಿ ಇದನ್ನು ಕಾರ್ಯಗತಗೊಳಿಸಲು ರಸ್ತೆ ಸಾರಿಗೆ ನಿಗಮ ಚಿಂತನೆ ನಡೆಸುತ್ತಿದೆ. ಸಣ್ಣಪುಟ್ಟ ಬದಲಾವಣೆಯೊಂದಿಗೆ ಈ ಯೋಜನೆ ಜಾರಿಗೊಂಡರೆ ಗ್ರಾಮೀಣ ಭಾಗಗಳಲ್ಲೂ ಎಲೆಕ್ಟ್ರಿಕಲ್‌ ಬಸ್‌ ಓಡಿಸುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಲಿದೆ.

ಈಗ ಅಮೆರಿಕದ ಗುರಿ ಯಾವ ದೇಶ?; ಟ್ರಂಪ್ ಹೇಳಿದ್ದೇನು?

TAGGED:Is KSRTC preparing to run electric buses from village to village?
Share This Article
Facebook Twitter Copy Link Print
Previous Article ಬಾಲಕಿಯ ಎದೆಯನ್ನು ಬಟ್ಟೆಯ ಮೇಲೆ ಮುಟ್ಟುವುದು ಪೋಕ್ಸೋ ಕಾಯ್ದೆಯಡಿ ಗಂಭೀರ ಅಪರಾಧ: ಹೈಕೋರ್ಟ್ ತೀರ್ಪು
Next Article ಸುಂದರ್ ಪಿಚೈ ವೇತನದಲ್ಲಿ ಮತ್ತೆ ಏರಿಕೆ ; ತಿಂಗಳಿಗೆ 159 ಕೋಟಿ ಸಂಬಳ!

Popular Posts

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Modi and DK ಮುಖ್ಯಮಂತ್ರಿಯಾದ ಬಳಿಕ ಮೊದಲ‌ ಬಾರಿ ಮೋದಿ ಭೇಟಿಯಾದ ಡಿಕೆ: ಪ್ರಧಾನಿ ಜತೆ ಚರ್ಚಿಸಿದ್ದೇನು?

1 Min Read

Burude case ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್! ಕೇರಳದಿಂದ 200 ಕೋಟಿ ಫಂಡಿಂಗ್, ಚಿನ್ನಯ್ಯ ಹೇಳಿದ್ದೇನು?

4 Min Read

ಸಾಗರದಲ್ಲಿ ಪೆಟ್ರೋಲ್ ಕದಿಯೋ ಗ್ಯಾಂಗ್: ಬಸ್, ರೈಲ್ವೆ ನಿಲ್ದಾಣದ ಬೈಕ್ ಗಳೇ ಕಳ್ಳರ ಟಾರ್ಗೆಟ್!

1 Min Read

You Might Also Like

ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ದೇಶಪ್ರಮುಖ

ಸೊಸೆ ಮೇಲೆ ಮಾವನಿಂದಲೇ ಪದೇ ಪದೇ ಅತ್ಯಾಚಾರ: ಫೋನ್ ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ

2 Min Read
ಕರ್ನಾಟಕಪ್ರಮುಖ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ : ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ

1 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?