Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 16 ವರ್ಷದ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಅನುಷ್ಠಾನ ಹೇಗೆ?
ಕರ್ನಾಟಕಪ್ರಮುಖ

16 ವರ್ಷದ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಅನುಷ್ಠಾನ ಹೇಗೆ?

Share
3 Min Read
SHARE

https://youtube.com/shorts/I7q3Ny48oOg?si=RFP8giogzKefv9jC

newsics.com

ಕರ್ನಾಟಕದಲ್ಲಿ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಗೆ ಸರ್ಕಾರ ಅಂಕುಶ ಹಾಕಿದೆ. ರಾಜ್ಯದ 2026-27ನೇ ಸಾಲಿನ ಬಜೆಟ್’ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾವನೆಯನ್ನು ಮಾಡಿದ್ದಾರೆ. ಇದನ್ನು ಯಾವ ರೀತಿಯಲ್ಲಿ ಜಾರಿಗೆ ತರಲಾಗುತ್ತದೆ ಎನ್ನುವ ಮಾರ್ಗಸೂಚಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ಸೋಶಿಯಲ್ ಮೀಡಿಯಾ ಬ್ಯಾನ್ ಕಾಯಿದೆ ಜಾರಿಗೆ ತರಬಹುದೇ?
ಕರ್ನಾಟಕ ಸರ್ಕಾರವು ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ನಿರ್ದಿಷ್ಟ ಮಾಧ್ಯಮ ವೇದಿಕೆಗಳನ್ನು ಬಳಸುವುದಕ್ಕೆ ಕಾನೂನು ಮೂಲಕ ಆದೇಶ ಹೊರಡಿಸಬಹುದು. ಇದಕ್ಕಾಗಿ ಐಟಿ ಕಾಯಿದೆಯನ್ನು ರೂಪಿಸುವ ಮೂಲಕ, ಇದನ್ನು ಕಾನೂನಾತ್ಮಕವಾಗಿಯೇ ಜಾರಿಗೆ ತರುವ ಅವಕಾಶವಿದೆ.
ವಯಸ್ಸಿನ ಪರಿಶೀಲನೆ ಹೇಗೆ?
ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಯಾವುದೇ ಅಂತರ್ಜಾಲದ ವೇದಿಕೆಯನ್ನು ಬಳಸುವ ಮುನ್ನ ವಯಸ್ಸನ್ನು ಖಚಿತ ಪಡಿಸಿಕೊಳ್ಳಲು ಕಟ್ಟುನಿಟ್ಟಾದ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬಹುದು. ಇದಕ್ಕಾಗಿ, ಸರ್ಕಾರೀ ಗುರುತಿನ ಚೀಟಿಗಳು (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್) ಅಥವಾ ಡಿಜಿಲಾಕರ್ ಅಂತಹ ಡಿಜಿಟಲ್ ಸೇವೆಗಳ ಮೂಲಕ ಮಾತ್ರ, ಬಳಕೆಗೆ ಅವಕಾಶವನ್ನು ನೀಡಬಹುದು.
ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಜವಾಬ್ದಾರಿ ಹೇಗೆ?
ಅಪ್ರಾಪ್ತ ವಯಸ್ಕರು ವೇದಿಕೆಯನ್ನು ಬಳಸದಂತೆ ನಿರ್ಬಂಧಿಸುವ ಜವಾಬ್ದಾರಿಯನ್ನು ಸರ್ಕಾರವು, ಸಾಮಾಜಿಕ ಮಾಧ್ಯಮ ಕಂಪೆನಿಗಳ ಮೇಲೆ ಹೊರಿಸುವ ಸಾಧ್ಯತೆಯಿದೆ. ಮಕ್ಕಳಿಗೆ ಸೋಶಿಯಲ್ ಮೀಡಿಯಾದ ವ್ಯಸನವನ್ನು ಹೆಚ್ಚು ಮಾಡುವಂತಹ ಇಂಟರ್ನಲ್ ಟೂಲ್’ಗಳು/ಆಟೋಪ್ಲೇಗಳಂತಹ ಫೀಚರ್’ಗಳನ್ನು ತೆಗೆದುಹಾಕುವಂತೆ ಸೂಚಿಸಬಹುದು. ಸರ್ಕಾರದ ಆದೇಶವನ್ನು ಮೀರಿದರೆ, ಕಾನೂನಡಿಯಲಿ ಕ್ರಮದ ಎಚ್ಚರಿಕೆಯನ್ನು ನೀಡಬಹುದು. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ (DPDP) ಕಾಯ್ದೆ, 2023 ಜಾರಿಗೆ ತರುವ ಮೂಲಕ, ಕಟ್ಟುನಿಟ್ಟಾಗಿ ಇದನ್ನು ಜಾರಿಗೆ ತರಬಹುದು.
ಮಧ್ಯವರ್ತಿಗಳನ್ನು ಬಳಸಿಕೊಂಡು ಜಾರಿಗೆ ತರುವ ಪದ್ದತಿ ಹೇಗೆ?
ಮಾಹಿತಿ ತಂತ್ರಜ್ಞಾನ ಐಟಿ ಕಾಯಿದೆ 2000 ಮತ್ತು 2021ರ ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ಮಧ್ಯವರ್ತಿಗಳನ್ನು ಬಳಸಿಕೊಂಡು, ಸರ್ಕಾರ ಈ ಕಾನೂನು ಅನುಷ್ಠಾನಕ್ಕೆ ತರಬಹುದು. ಅಂದರೆ, ಸಾಮಾಜಿಕ ಮಾಧ್ಯಮ ಕಂಪೆನಿಗಳು ಮತ್ತು ಸರ್ಕಾರದ ಕಾನೂನು ಜಾರಿಗೆ ತರುವಲ್ಲಿ ಇವರು ಮಿಡ್ಲ್’ಮ್ಯಾನ್ ಆಗಿ ಇಂತಹ ಸಂಸ್ಥೆಗಳು ಕೆಲಸ ನಿರ್ವಹಿಸಲಿದೆ. ಮಧ್ಯವರ್ತಿ ಸಂಸ್ಥೆಗಳು, ಸರ್ಕಾರಕ್ಕೆ ಸಹಾಯ ಮಾಡುವುದನ್ನು ಕಡ್ದಾಯ ಮಾಡಬಹುದು.
ಸಾಮಾಜಿಕ ಜಾಲತಾಣ ಬಳಕೆ ನಿಷೇಧಕ್ಕೆ ಕಾಲಮಿತಿ ಯಾವುದು?
ಸಿದ್ದರಾಮಯ್ಯನವರು, ಬಜೆಟ್’ನಲ್ಲಿ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯ ಮೇಲೆ ನಿಷೇಧ ಹೇರುವ ಸರ್ಕಾರದ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ. ಆದರೆ, ಇದಕ್ಕೆ ನಿರ್ದಿಷ್ಟ ಕಾಲಮಿತಿಯನ್ನು ಇನ್ನೂ ನಿಗದಿ ಪಡಿಸಬೇಕಷ್ಟೇ. ಆಂಧ್ರ ಪ್ರದೇಶದಲ್ಲಿ ತೊಂಬತ್ತು ದಿನಗಳ ಕಾಲಮಿತಿಯನ್ನು ನಿಗದಿ ಪಡಿಸಲಾಗಿದೆ.
ಸಾಮಾಜಿಕ ಜಾಲತಾಣ ಬಳಕೆ ನಿಷೇಧಕ್ಕೆ ಇರುವ ಸವಾಲುಗಳೇನು?

  • ಚಾಪೆ ಕೆಳಗೆ ತೂರಿದರೆ, ರಂಗೋಲಿ ಒಳಗೆ ತೂರುತ್ತಾರೆ ಎನ್ನುವ ಹಾಗೇ, ಹದಿನಾರು ವರ್ಷದೊಳಗಿನ ಮಕ್ಕಳಿಗೆ ಇದನ್ನು ಜಾರಿಗೆ ತರುವುದು ತಾಂತ್ರಿಕವಾಗಿ ದೊಡ್ಡ ಸವಾಲಾಗಿದೆ. ಈ ಸಂಬಂಧ ಲೇಟೆಸ್ಟ್ ಟೆಕ್ನಾಲಜಿಯ ಬಳಕೆ ಆಗಬೇಕಿದೆ. ವಿಪಿಎನ್ ಬಳಸಿ ನಿಷೇಧವನ್ನು ಮೀರುವುದು ಮತ್ತು ಬಳಕೆದಾರರ ಗೌಪ್ಯತೆಯ ಕುರಿತಾದ ಪ್ರಶ್ನೆಗಳು, ನಿಷೇಧವನ್ನು ಜಾರಿಗೆ ತರುವಲ್ಲಿ ಪ್ರಮುಖ ಸವಾಲಾಗಲಿದೆ.
  • ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿ ಸಾಮಾಜಿಕ ಜಾಲತಾಣವನ್ನು ಬಳಸಬೇಕಾಗುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಹಿತಿಗಳು ಇದರಿಂದಾಗಿ ಸೋರಿಕೆಯಾಗಬಹುದು ಎನ್ನುವ ಅಂಶ ಇದರಲ್ಲಿ ಪ್ರಮುಖವಾಗಿದೆ.
  • ಭೌಗೋಳಿಕವಾಗಿ ಸಾಮಾಜಿಕ ಜಾಲತಾಣವನ್ನು ನಿಷೇಧಿಸುವುದು ಯಾವುದೇ ಸರ್ಕಾರಕ್ಕೆ ಸವಾಲಾಗಿದೆ. ಯಾಕೆಂದರೆ, ಗಡಿ ಪ್ರದೇಶಗಳಲ್ಲಿ ಇದರ ಮಾಹಿತಿ ಕರಾರುವಕ್ಕಾಗಿ ಇಲ್ಲದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ವಿಪಿಎನ್ ಬಳಸಿ, ಸಾಮಾಜಿಕ ಜಾಲತಾಣವನ್ನು ಬಳಸುವ ಟೆಕ್ನಾಲಜಿ ಕೂಡಾ ಇದೆ, ಇದಕ್ಕೂ ನಿಯಂತ್ರಣ ಹೇರಬೇಕಿದೆ.
  • ಹದಿಮೂರರಿಂದ ಹದಿನಾರರ ವಯಸ್ಸಿನವರು, ಆನ್ಲೈನ್ ಪ್ರಪಂಚವನ್ನು ಹೇಗೆ ನಿರ್ವಹಿಸಬೇಕು ಎನ್ನುವ ಕಾತುರದಲ್ಲಿರುತ್ತಾರೆ. ಆನ್ಲೈನ್ ಮೂಲಕ ಕಂಡುಕೊಳ್ಳುವ ಅಥವಾ ಕಲಿಯುವ ಮಕ್ಕಳ ಮೇಲೆ ಇದರ ಪ್ರಭಾವ ಬೀರುವ ಸಾಧ್ಯತೆಯಿರುತ್ತದೆ. ಸರ್ಕಾರ, ನಿರ್ದಿಷ್ಟ ಸಾಮಾಜಿಕ ಜಾಲತಾಣವನ್ನು ಮಾತ್ರ ನಿಷೇಧಿಸುವತ್ತ ಗಮನಹರಿಸಬೇಕಿದೆ.
  • ಭಾರತದಂತಹ ದೇಶಗಳಲ್ಲಿ ಈ ವಯಸ್ಸಿನ ಎಲ್ಲಾ ಮಕ್ಕಳಲ್ಲಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಅವರೆಲ್ಲರೂ ತಮ್ಮ ಪೋಷಕರ ಫೋನ್ ಬಳಸುತ್ತಾರೆ. ಇಂತಹ ಸಂದರ್ಭಗಳಲ್ಲಿ shared device ಗಳಲ್ಲಿ ಒನ್ ಟೈಮ್ ಯೂಸರ್ ವೆರಿಫಿಕೇಶನ್ ಮಾತ್ರ ಬಳಸಬೇಕಿರುತ್ತದೆ. ಹೀಗಿರುವಾಗ, ಹದಿನಾರು ವರ್ಷ ವಯಸ್ಸಿನ ಮಕ್ಕಳು, ಯಾವುದೇ ತೊಂದರೆಯಿಲ್ಲದೇ ಸಾಮಾಜಿಕ ಜಾಲತಾಣ ಬಳಸಬಹುದಾಗಿದೆ. ಸರ್ಕಾರ ಈ ಸಂಬಂಧವೂ ಗಮನಹರಿಸಬೇಕಿದೆ.

Scorching hot ರಾಜ್ಯದೆಲ್ಲೆಡೆ ಉರಿ ಉರಿ ಬಿಸಿಲು, ಕಲಬುರಗಿಯಲ್ಲಿ 39 ಡಿಗ್ರಿ ಸೆ.

TAGGED:Social media ban for 16-year-olds: How will it be implemented?
Share This Article
Facebook Twitter Copy Link Print
Previous Article ಅಮೆರಿಕ-ಇರಾನ್ ಸಂಘರ್ಷ: 93 ಡಾಲರ್ ಮುಟ್ಟಿದ ಕಚ್ಚಾ ತೈಲ
Next Article ಇಸ್ರೇಲ್‌ನ್ನು ನಡುಗಿಸಿದೆ ಇರಾನ್‌ನ ಈ ಆಯುಧ; ಕ್ಲಸ್ಟರ್ ಬಾಂಬ್‌ಗಳು ಎಂದರೇನು?

Popular Posts

ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯ? ಟ್ರಂಪ್–ಇರಾನ್ ಅಧ್ಯಕ್ಷರ ಐತಿಹಾಸಿಕ ಒಪ್ಪಂದ – Newsics

1 Min Read

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

ಫಿಫಾ ವಿಶ್ವಕಪ್: ಎಂಬಾಪೆ ದಾಖಲೆಯ ಬೇಟೆ, ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ ಭರ್ಜರಿ ಜಯ – Newsics

1 Min Read

ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ; ಇಂದಿನ ಬೆಲೆ ಎಷ್ಟು?

1 Min Read

You Might Also Like

ಪ್ರಮುಖ

ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

1 Min Read
ಪ್ರಮುಖಮನರಂಜನೆ

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

2 Min Read
ಪ್ರಮುಖ

ತತ್ಕಾಲ್ ಟಿಕೆಟ್ ಕೇವಲ 1 ನಿಮಿಷದಲ್ಲಿ ಕನ್‌ಫರ್ಮ್ ಆಗಬೇಕಾ?! ಈ 4 ಸೀಕ್ರೆಟ್ ಟ್ರಿಕ್ಸ್ ಫಾಲೋ ಮಾಡಿ

3 Min Read
ಪ್ರಮುಖ

ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?