Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Costly Bengaluru ಇಲ್ಲಿ ನವದಂಪತಿ‌ಗಳು ಬದುಕೋದೇ‌ ಕಷ್ಟ, ಮತ್ತೊಮ್ಮೆ ಶುರುವಾಯ್ತು ದುಬಾರಿ ಬೆಂಗಳೂರು ಚರ್ಚೆ!
ಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್

Costly Bengaluru ಇಲ್ಲಿ ನವದಂಪತಿ‌ಗಳು ಬದುಕೋದೇ‌ ಕಷ್ಟ, ಮತ್ತೊಮ್ಮೆ ಶುರುವಾಯ್ತು ದುಬಾರಿ ಬೆಂಗಳೂರು ಚರ್ಚೆ!

Share
3 Min Read
SHARE

newsics.com

ಬೆಂಗಳೂರಿನ ಖರ್ಚು, ಹಾಗೂ ಸಂಬಳದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಈ ಹಿಂದೆ ಐಟಿ ಉದ್ಯೋಗಿಗಳು ರಾಜಧಾನಿಯಲ್ಲಿ ಜೀವನ ವೆಚ್ಚದ ಬಗ್ಗೆ ಭಾರೀ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ದಂಪತಿಗಳು ಈ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ದಂಪತಿಗಳಿಬ್ಬರು ಎದುರಿಸುತ್ತಿರುವ ಆರ್ಥಿಕ ಒತ್ತಡಗಳನ್ನು ವಿವರಿಸುವ ಪೋಸ್ಟ್ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಅಭಿಷೇಕ್ ಸಿಂಗ್ ಎಂಬವವರು ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸ್ನೇಹಿತನ ಕಥೆಯನ್ನು ಮತ್ತು ಮದುವೆಯ ನಂತರ ಅವರು ಮಾಡಬೇಕಾದ ಆರ್ಥಿಕ ಹೊಂದಾಣಿಕೆಗಳ ಬಗ್ಗೆ ಇಲ್ಲಿ ಹೇಳಿದ್ದಾರೆ.

ನನ್ನ ಸ್ನೇಹಿತ ಇತ್ತೀಚೆಗೆ ಬೆಂಗಳೂರಿನಲ್ಲಿ ವಿವಾಹವಾದರು. ಮದುವೆಯಾದ ತಕ್ಷಣ, ಅವರ ಪತ್ನಿ ‘ನಾನು ಎಲ್ಲವನ್ನೂ ಬಿಟ್ಟು ಸರ್ಕಾರಿ ಪರೀಕ್ಷೆಗಳಿಗೆ ಪೂರ್ಣ ಸಮಯ ತಯಾರಿ ನಡೆಸುತ್ತೇನೆ.’ ಎಂದು ಹೇಳಿದ್ದಾರೆ. ಇದಕ್ಕೆ ಬೇಡ ಎಂದು ಹೇಳುವಂತಿಲ್ಲ, ಯಾಕೆಂದರೆ ಅದು ಅವರ ಕನಸು, ಅದನ್ನು ನನಸು ಮಾಡುವುದು ನನ್ನ ಸ್ನೇಹಿತನ ಕರ್ತವ್ಯ, ಮದುವೆಗೆ ಮೊದಲು ಆಕೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲಸವಿಲ್ಲ, ಕೇವಲ ತಯಾರಿ. ಆದ್ದರಿಂದ ಅವಳ ಕಡೆಯಿಂದ ಆದಾಯ ಅಕ್ಷರಶಃ ಶೂನ್ಯ. ಹಾಗಾಗಿ ಮದುವೆಯ ನಂತರ ಬೆಂಗಳೂರಿನಂತಹ ನಗರವು ಹಣ ಎಷ್ಟು ಬೇಗ ಖಾಲಿಯಾಗುತ್ತದೆ ಎಂಬುದಕ್ಕೆ ಇವರ ಜೀವನ ಉದಾಹರಣೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​​​ನಲ್ಲಿ ಹೇಳಿರುವ ಪ್ರಕಾರ ಬೆಂಗಳೂರಿನಂತಹ ನಗರದಲ್ಲಿ ಖರ್ಚುಗಳು ಎಷ್ಟು ಬೇಗನೆ ಹೆಚ್ಚಾಗಬಹುದು ಎಂಬುದನ್ನು ದಂಪತಿಗಳು ಬೇಗನೆ ಅರಿತುಕೊಂಡರು. ನನ್ನ ಗೆಳೆಯ ಮೊದಲು ಒಬ್ಬಂಟಿಯಾಗಿದ್ದ, ಆಗ ತುಂಬಾ ಆರಾಮದಾಯಕ ಜೀವನ ನಡೆಸುತ್ತಿದ್ದ, ಆದರೆ ಇದೀಗ ಆ ಪರಿಸ್ಥಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಇನ್ನು ಈ ಪೋಸ್ಟ್​​​ನಲ್ಲಿ ತಮ್ಮ ಸ್ನೇಹಿತನಿಗೆ ಮದುವೆಗೂ ಮೊದಲು ಆಗುತ್ತಿದ್ದ ಖರ್ಚು ಹಾಗೂ ಮದುವೆಯ ನಂತರದ ಖರ್ಚಿನ ಪಟ್ಟಿ ಹೇಳಿದ್ದಾರೆ. ಮದುವೆಗೂ ಮುನ್ನ ಅವರಿಗಿದ್ದ ಸಂಬಳ 1.15 ಲಕ್ಷ ರೂ. ಅವರ ಮಾಸಿಕ ಖರ್ಚುಗಳು ಬಾಡಿಗೆ ಅಥವಾ ಪಿಜಿ 16 ಸಾವಿರ ರೂ. ಊಟದ ಖರ್ಚು 7 ಸಾವಿರ ರೂ., ಇಂಧನ ಹಾಗೂ ಮೆಟ್ರೋ 3 ಸಾವಿರ ರೂ., ಇಂಟರ್ನೆಟ್ ಜೊತೆಗೆ ಫೋನ್ 1 ಸಾವಿರ ರೂ., ಜಿಮ್​​​​ ಖರ್ಚು 1,500 ರೂ., ಹೊರಗೆ ಊಟ 4 ಸಾವಿರ ರೂ., ಶಾಂಪಿಂಗ್ 2 ಸಾವಿರ ರೂ. ಒಟ್ಟು ತಿಂಗಳ ಖರ್ಚು 35 ಸಾವಿರ ರೂ. ಉಳಿತಾಯ 80 ಸಾವಿರ ರೂ.

ಆದರೆ ಇದೀಗ ಮದುವೆಯ ನಂತರ, ಜೀವನ ಬದಲಾವಣೆ ಆಗಿದೆ. ವೆಚ್ಚ ಕೂಡ ಬದಲಾವಣೆ ಆಗಿದೆ. ಒಬ್ಬನೇ ದುಡಿಯುವುದು ಎಷ್ಟೊಂದು ಕಷ್ಟ ಎಂಬುದಕ್ಕೆ ಇದೇ ಉದಾಹರಣೆ. ಇಬ್ಬರು ದುಡಿದ್ರೆ, ಈ ಖರ್ಚಿನ ಹೊರೆ ಒಬ್ಬರ ಮೇಲೆ ಬೀಳುತ್ತಿರಲಿಲ್ಲ. 1BHK ಬಾಡಿಗೆ 40 ಸಾವಿರ ರೂ., ದಿನಸಿ ಮತ್ತು ಅಡುಗೆಮನೆ 18 ಸಾವಿರ ರೂ., ಮನೆ ಸೇವಕಿಗೆ 7,000 ರೂ., ವಿದ್ಯುತ್, ವೈಫೈ ಜೊತೆಗೆ ಗ್ಯಾಸ್ 6,000 ರೂ., ಇಬ್ಬರಿಗೆ ಪ್ರಯಾಣದ ಖರ್ಚು 10,000 ರೂ., ಊಟ ಜೊತೆಗೆ ವಾರಾಂತ್ಯದ ಯೋಜನೆ 12,000 ರೂ., ಜತೆಗೆ ಶಾಪಿಂಗ್ 8 ಸಾವಿರ ರೂ., ಆರೋಗ್ಯ ವಿಮೆ ಮತ್ತು ಔಷಧಿಗಳು 5 ಸಾವಿರ ರೂ. ವಾಷಿಂಗ್ ಮೆಷಿನ್, ಹಾಸಿಗೆ ಮತ್ತು ಇತರ ವಸ್ತುಗಳಿಗೆ, ಪೀಠೋಪಕರಣಗಳು, ಜತೆಗೆ ಅದರ ಇಎಮ್​​​ಐ 15,000 ರೂ. ಒಟ್ಟು ತಿಂಗಳು ಖರ್ಚು 1,21,000 ರೂ.

ಇದೀಗ ಈ ಖರ್ಚು ಅವರಲ್ಲಿ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ. ಮೊದಲಿನಂತೆ ಈಗ ಉಳಿತಾಯಗಳು ಆಗುತ್ತಿಲ್ಲ ಎಂಬ ನೋವು ಅವರಲ್ಲಿ ಇದೆ. ದೊಡ್ಡ ನಗರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅನೇಕ ದಂಪತಿಗಳು ಎದುರಿಸಬಹುದಾದ ವಾಸ್ತವವನ್ನು ಇದು ಎತ್ತಿ ತೋರಿಸುತ್ತಿದೆ. ಈ ಪೋಸ್ಟ್ X ನಲ್ಲಿ 197,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಪ್ರಮುಖ ನಗರಗಳಲ್ಲಿನ ಹಣಕಾಸು ಯೋಜನೆ ಮತ್ತು ಜೀವನ ವೆಚ್ಚದ ಬಗ್ಗೆ ನೆಟ್ಟಿಗರು ಚರ್ಚಿಸಿದ್ದಾರೆ.

https://x.com/i/status/2029197521151467901

 

ಭಾಷಣ ಮಾಡುವಾಗ ಹೃದಯಾಘಾತದಿಂದ `B.Sc ವಿದ್ಯಾರ್ಥಿನಿ’ ಸಾವು : ವೈರಲ್ ವಿಡಿಯೋ ನೋಡಿ

ಭಾರತೀಯ ಇನ್‌ಫ್ಲುಯೆನ್ಸರ್ ಭೀಕರ ಹ*ತ್ಯೆ; ಮನೆಯೊಳಗೆ ನುಗ್ಗಿ ಚುಚ್ಚಿ ಚುಚ್ಚಿ ಮುಗಿಸೇಬಿಟ್ರು

ಜಗತ್ತಿನ ಅತ್ಯಂತ ಸೇಫ್ ದೇಶ ಯಾವುದು?

TAGGED:It's hard for newlyweds to live herethe expensive Bangalore debate has started again!
Share This Article
Facebook Twitter Copy Link Print
Previous Article ಜಗತ್ತಿನ ಅತ್ಯಂತ ಸೇಫ್ ದೇಶ ಯಾವುದು?
Next Article Relationship ಒತ್ತಡದ ಜೀವನದಲ್ಲಿ ಲೈಂಗಿಕ ಸುಖ ಮರೆತರೆ ಭಾರೀ ಆಪತ್ತು! 40 ವರ್ಷಕ್ಕೇ ವೃದ್ಧಾಪ್ಯ!

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?