https://youtube.com/shorts/4DdUNKT1F8Q?si=WqCYQodDieS5bX6t
Subscribe ನ್ಯೂಸಿಕ್ಸ್ ಕನ್ನಡ
newsics.com
ಎರಡು ದಶಕಗಳಿಂದ ಚಿತ್ರರಂಗವನ್ನು ಆಳುತ್ತಿರುವ ತ್ರಿಷಾ, 42 ನೇ ವಯಸ್ಸಿನಲ್ಲಿಯೂ ಒಂಟಿಯಾಗಿದ್ದಾರೆ. ಹಿಂದೆ ರಾಣಾ ಜೊತೆ ಡೇಟಿಂಗ್ ಮಾಡಿ, ಬಳಿಕ ನಿಶ್ಚಿತಾರ್ಥವನ್ನು ರದ್ದುಗೊಳಿಸುವಂತಹ ಘಟನೆಗಳು ಅವರ ವೈಯಕ್ತಿಕ ಜೀವನದಲ್ಲಿ ಹಲವು ತಿರುವುಗಳನ್ನು ತಂದಿವೆ. ಇತ್ತೀಚೆಗೆ, ದಳಪತಿ ವಿಜಯ್ ಅವರ ವಿಚ್ಛೇದನ ಪ್ರಕರಣದೊಂದಿಗೆ, ತ್ರಿಷಾ ಅವರ ಹೆಸರು ಮತ್ತೊಮ್ಮೆ ಜಾಲತಾಣಗಳಲ್ಲಿ ಹಾಟ್ ಟಾಫಿಕ್ ಆಗಿದೆ.
ತ್ರಿಶಾ ಕೇವಲ ತಮಿಳು ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ವಿಕ್ರಮ್, ಸೂರ್ಯ ಮತ್ತು ಧನುಷ್ ಅಂತಹ ದಿಗ್ಗಜರ ಜೊತೆ ನಟಿಸಿರುವ ಇವರು, ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ‘ಪವರ್’ ಚಿತ್ರದಲ್ಲಿ ನಾಯಕಿಯಾಗಿದ್ದರು. ದಕ್ಷಿಣ ಭಾರತದ ಪ್ರತಿಯೊಬ್ಬ ಸೂಪರ್ ಸ್ಟಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಹೆಗ್ಗಳಿಕೆ ಇವರದ್ದು.
ತ್ರಿಶಾ ಅವರ ಮದುವೆಯ ವಿಚಾರ ಸದಾ ಚರ್ಚೆಯಲ್ಲಿರುತ್ತದೆ. ಆರಂಭದಲ್ಲಿ ತೆಲುಗು ನಟ ರಾಣಾ ದಗ್ಗುಬಾಟಿ ಜೊತೆ ತ್ರಿಶಾ ಡೇಟಿಂಗ್ ಮಾಡುತ್ತಿದ್ದರು ಎಂಬ ಬಲವಾದ ವದಂತಿ ಇತ್ತು. ಆದರೆ ಕುಟುಂಬದ ಕಾರಣಗಳಿಂದ ಆ ಸಂಬಂಧ ಮುರಿದುಬಿತ್ತು ಎನ್ನಲಾಗುತ್ತದೆ. ನಂತರ ಉದ್ಯಮಿ ವರುಣ್ ಮಣಿಯನ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರೂ, ಮದುವೆಯ ಮಂಟಪ ಹತ್ತುವ ಮೊದಲೇ ಆ ಸಂಬಂಧವೂ ಅಂತ್ಯವಾಯಿತು. ಅಂದಿನಿಂದ ಇಂದಿನವರೆಗೆ ತ್ರಿಶಾ ಮದುವೆ ಎಂಬ ಹೆಸರನ್ನೇ ಎತ್ತಿಲ್ಲ.
ಇವೆಲ್ಲದರ ನಡುವೆ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಗಾಯಕಿ ಸುಚಿತ್ರಾ ಇತ್ತೀಚೆಗೆ ‘ಸಿನಿ ಬಝ್’ ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತ್ರಿಶಾ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುಚಿತ್ರಾ ಹೇಳುವ ಪ್ರಕಾರ, ವಿಜಯ್ ಅವರಿಗೆ ತ್ರಿಶಾ ಮೇಲೆ ಅತಿಯಾದ ಪ್ರೀತಿ ಇರಬಹುದು, ಆದರೆ ತ್ರಿಶಾ ಪ್ರೀತಿಸುತ್ತಿರುವುದು ಉದಯನಿಧಿ ಸ್ಟಾಲಿನ್ ಅವರನ್ನು! ಅಸಲಿಗೆ ತ್ರಿಶಾ ಮತ್ತು ವರುಣ್ ಮಣಿಯನ್ ಮದುವೆ ನಿಂತಿದ್ದೇ ಉದಯನಿಧಿ ಸ್ಟಾಲಿನ್ ಅವರಿಂದ. ಅವರಿಬ್ಬರ ಮದುವೆ ಆಗುವುದನ್ನು ಉದಯನಿಧಿಗೆ ಸಹಿಸಲಾಗಲಿಲ್ಲ, ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ನಟಿ ತ್ರಿಷಾ ಬೈ-ಸೆ*ಕ್ಸುವಲ್.. ತ್ರಿಶಾ ಅವರು ಪುರುಷರಲ್ಲಿ ಉದಯನಿಧಿ ಸ್ಟಾಲಿನ್ ಹಾಗೂ ಮಹಿಳೆಯರಲ್ಲಿ ನಟಿ ರಮ್ಯಾ ಕೃಷ್ಣನ್ ಅವರನ್ನೂ ಅತಿಯಾಗಿ ಹಚ್ಚಿಕೊಂಡಿದ್ದಾರೆ. ಅವರು ಎಲ್ಲಾ ಬಂಧನಗಳನ್ನು ಮೀರಿದ ಪ್ರೀತಿಯನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.
https://www.newsics.com/2026/03/01/iran-israel-conflict-england-pakistan-match-cancelled/