https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ರಿಯಾಲಿಟಿ ಶೋ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಬಾಡಿ ಬಿಲ್ಡರ್ ಮಯಾಂಕ್ ಪವಾರ್ (37) ಅವರು ಫೆಬ್ರವರಿ 24ರಂದು ನಿಧನರಾಗಿದ್ದಾರೆ.
ಅವರ ಸಾವಿನ ಸುದ್ದಿ ಅಭಿಮಾನಿಗಳಿಗೆ ಮತ್ತು ಕ್ರೀಡಾ ಲೋಕಕ್ಕೆ ದೊಡ್ಡ ಆಘಾತ ತಂದಿದೆ.ಮಯಾಂಕ್ ಪವಾರ್ ಅವರು ಬರೋಬ್ಬರಿ 7 ಬಾರಿ ‘ಮಿಸ್ಟರ್ ಇಂಡಿಯಾ’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಫಿಟ್ನೆಸ್ ಮತ್ತು ಶಿಸ್ತಿನ ಜೀವನಕ್ಕೆ ಅವರು ಹೆಸರಾಗಿದ್ದರು.
ಎಂಟಿವಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸ್ಪ್ಲಿಟ್ಸ್ವಿಲ್ಲಾ’ ಸೀಸನ್ 7ರಲ್ಲಿ (Splitsvilla 7) ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಅವರು ಮನೆಮಾತಾಗಿದ್ದರು.
ಕುಟುಂಬದವರು ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರಾದರೂ, ಹೆಚ್ಚಿನ ವಿವರಗಳನ್ನು ನೀಡಿಲ್ಲ. ಇತ್ತೀಚೆಗಷ್ಟೇ ಅಂದರೆ ಜನವರಿ 1ರಂದು ಅವರು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.ಮಯಾಂಕ್ ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
https://www.newsics.com/2026/02/25/government-bans-5-ott-platforms-for-streaming-pornography/