https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ಮೈಸೂರು : ನಗರ ಹೊರವಲಯದ ಮನೆಯೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಮಾಡಿರುವ ಮೈಸೂರು ಜಿಲ್ಲಾ ಪೊಲೀಸರು, ಈ ಜಾಲದಲ್ಲಿದ್ದ ಐವರನ್ನು ಬಂಧಿಸಿದ್ದಾರೆ.
ಈ ಜಾಲದಲ್ಲಿರುವ ಇನ್ನೂ ಹೆಚ್ಚಿನ ಮಂದಿಯ ಬಂಧನಕ್ಕೆ ಜಿಲ್ಲಾ ಪೊಲೀಸರು ಗುಜರಾತಿನಲ್ಲಿ ಶೋಧ ಮುಂದುವರಿಸಿದ್ದಾರೆ. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ ಪತ್ತೆಯಾಗುತ್ತಿದ್ದಂತೆ ಅಲರ್ಟ್ ಆಗಿದ್ದ ಜಿಲ್ಲಾ ಪೊಲೀಸರು, ಕಳೆದ ಜ.28 ರಂದು ಮೈಸೂರು ತಾಲೂಕು ಯಾಂದಳ್ಳಿಯಲ್ಲಿನ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದರು.
ದಾಳಿ ವೇಳೆ ಆ ಮನೆಯಲ್ಲಿ ಹಲವು ರಾಸಾಯನಿಕ ವಸ್ತುಗಳು ಹಾಗೂ 10 ಬ್ಯಾರಲ್ ರಾಸಾಯನಿಕ ದ್ರವ್ಯ ಪತ್ತೆಯಾಗಿತ್ತು. ಇದು ಡ್ರಗ್ಸ್ ಎಂಬ ಅಂತಿಮ ತೀರ್ಮಾನ ಕೈಗೊಳ್ಳದ ಪೊಲೀಸರು, ಅಲ್ಲಿ ದೊರೆತ ರಾಸಾಯನಿಕ ವಸ್ತುಗಳು ಮತ್ತು ದ್ರವ್ಯಗಳ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಎಫ್ಎಸ್ಎಲ್ ವರದಿ ಈಗ ಪೊಲೀಸರ ಕೈ ಸೇರಿದ್ದು, ಮನೆಯಲ್ಲಿ ದೊರೆತ ರಾಸಾಯನಿಕ ವಸ್ತುಗಳು ಡ್ರಗ್ಸ್ ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ. ಆ ಮನೆಯಲ್ಲಿ ದೊರೆತ 1 ಕೇಜಿ ತೂಕದ ಮಾದಕ ವಸ್ತು ಹಾಗೂ ಡ್ರಗ್ಸ್ ತಯಾರಿಕೆಗೆ ಅವಶ್ಯವಿರುವ ಕಚ್ಚಾ ರಾಸಾಯನಿಕ ಡ್ರಗ್ಸ್ ತಯಾರಿಗೆ ಬಳಸುವ ವಸ್ತುಗಳು ಎಂಬುದು ಧೃಡಪಟ್ಟಿದೆ.
https://www.newsics.com/2026/02/24/sit-investigation-reveals-the-real-reason-for-c-j-roys-suicide/