Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗೂಗಲ್‌ನಿಂದ ಶತಕೋಟಿ ಲೀಟರ್ ನೀರು ಬಳಕೆ! ಎಲ್ಲೆಡೆ ಇದೇ ಚರ್ಚೆ ಯಾಕೆ?
ದೇಶಪ್ರಮುಖ

ಗೂಗಲ್‌ನಿಂದ ಶತಕೋಟಿ ಲೀಟರ್ ನೀರು ಬಳಕೆ! ಎಲ್ಲೆಡೆ ಇದೇ ಚರ್ಚೆ ಯಾಕೆ?

Share
2 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

ಮಾಹಿತಿ ಒದಗಿಸಲು ಗೂಗಲ್ ಶತಕೋಟಿ ಲೀಟರ್‌ಗಳಷ್ಟು ನೀರನ್ನು ಬಳಕೆ ಮಾಡುತ್ತಿದೆ. ಆದ್ರೆ ಗೂಗಲ್‌ನ ಡೇಟಾ ಸೆಂಟರ್‌ಗಳಿಗೆ ಬಳಕೆಯಾಗುತ್ತಿರುವ ನೀರಿನ ಬಗ್ಗೆ ಜಾಗತಿಕವಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
2023ರಲ್ಲಿ ಗೂಗಲ್‌ನ ಡೇಟಾ ಸೆಂಟರ್‌ಗಳು ತಮ್ಮ ಸರ್ವರ್‌ಗಳನ್ನು ತಂಪಾಗಿಸಲು ಸುಮಾರು 6.1 ಬಿಲಿಯನ್ ಗ್ಯಾಲನ್‌ ಅಂದರೆ ಸುಮಾರು 23 ಶತಕೋಟಿ ಲೀಟರ್‌ ನೀರನ್ನು ಬಳಕೆ ಮಾಡಿದೆ. ಬೆಂಗಳೂರಿಗೆ ಹೋಲಿಸಿದರೆ 3 ದಿನ ಇಡೀ ನಗರಕ್ಕೆ ಪೂರೈಕೆಯಾಗುವ ನೀರಿನ ಪ್ರಮಾಣವಾಗಿದೆ. ಈ ನೀರಿನ ಬಳಕೆಯ ಪ್ರಮಾಣ ಪ್ರತಿವರ್ಷ ಶೇ 17 ರಿಂದ 20ರಷ್ಟು ಹೆಚ್ಚಾಗುತ್ತಿದೆ.
2024ರ ಹೊತ್ತಿಗೆ ಈ ಪ್ರಮಾಣ 6.4 ಬಿಲಿಯನ್ ಗ್ಯಾಲನ್‌ಗಳಿಗೆ ಏರಿಕೆಯಾಗಿದೆ ಎಂದು ‘ಗೂಗಲ್‌ ಎನ್ವಿರಾನ್‌ಮೆಂಟ್‌ ರಿಪೋರ್ಟ್‌ 2024-25’ರ ವರದಿ ತಿಳಿಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಮತ್ತು ಸರ್ಚ್‌ ಎಂಜಿನ್‌ ಪ್ರಕ್ರಿಯೆ, ಗೂಗಲ್‌ ಬಿಡುಗಡೆ ಮಾಡುತ್ತಿರುವ ಅನೇಕ ರೀತಿಯ ವೈಶಿಷ್ಟ್ಯಗಳು ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಸರ್ವರ್‌ಗಳು ಕೆಲಸ ಮಾಡುವಾಗ ವಿಪರೀತ ಶಾಖವನ್ನು ಬಿಡುಗಡೆ ಮಾಡುತ್ತವೆ. ಇವುಗಳನ್ನು ತಂಪಾಗಿಸಲು ನೀರು ಅತ್ಯಗತ್ಯ. ಅದು ಕೊಳಚೆ ನೀರೋ ಅಥವಾ ಮರುಬಳಕೆಯ ನೀರು ಅಲ್ಲ. ಶುದ್ಧವಾಗಿರುವ ನೀರೇ ಬೇಕಾಗುತ್ತದೆ. ಅಲ್ಲದೆ ಒಮ್ಮೆ ಉಪಯೋಗಿಸಿದ ನೀರು ಮರು ಉಪಯೋಗಕ್ಕೆ ಸಿಗದು. ಅದಕ್ಕೆ ಕಾರಣವೂ ಇದೆ.
ಡೇಟಾ ಸೆಂಟರ್‌ಗಳಲ್ಲಿ ಎವಾಪೊರೇಟಿವ್ ಕೂಲಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ. ಇಲ್ಲಿ ನೀರು ಆವಿಯಾಗುವ ಮೂಲಕ ಶಾಖವನ್ನು ಹೊರಹಾಕುತ್ತದೆ. ಡೇಟಾ ಸೆಂಟರ್‌ಗಳಲ್ಲಿ ಬಳಕೆಯಾಗುವ ಶೇ 80 ರಷ್ಟು ನೀರು ಆವಿಯಾಗಿ ಗಾಳಿಯನ್ನು ಸೇರಿಕೊಳ್ಳುತ್ತದೆ. ಹೀಗಾಗಿ ಮರುಬಳಕೆ ಸಾಧ್ಯವಾಗುವುದಿಲ್ಲ.
ಸ್ವಚ್ಛ ನೀರಿನ ಬಳಕೆಯೇ ಏಕೆ?
ಡೇಟಾ ಸೆಂಟರ್‌ಗಳಲ್ಲಿ ಸ್ವಚ್ಛ ನೀರನ್ನೇ ಬಳಸಲಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶ ಇರುತ್ತದೆ. ಒಮ್ಮೆ ಡೇಟಾ ಸೆಂಟರ್‌ಗಳಲ್ಲಿ ಬಳಸಿದ ನೀರಿನಲ್ಲಿ ಈ ಅಂಶಗಳು ಅಧಿಕವಾಗಿರುತ್ತವೆ. ಇದನ್ನು ಮತ್ತೆ ಬಳಸಿದರೆ ಆ ಅಂಶಗಳು ಸರ್ವರ್‌ಗಳ ಪೈಪ್‌ಗಳಲ್ಲಿ ‘ಲೈಮ್‌ಸ್ಕೇಲ್’ ಎಂಬ ಕಠಿಣವಾದ ಪದರವನ್ನು ಸೃಷ್ಟಿಸುತ್ತವೆ. ಈ ಪದರವು ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸುವುದರಿಂದ ಶಾಖವು ಹೊರಹೋಗಲು ಸಾಧ್ಯವಾಗದೆ ಸರ್ವರ್‌ಗಳು ಕರಗುವ ಅಪಾಯವಿರುತ್ತದೆ.
ಹಾಗೊಂದು ವೇಳೆ ಮರುಬಳಕೆಯ ನೀರು ಬೇಕೆಂದರೆ ಅದನ್ನು ಸ್ವಚ್ಛಗೊಳಿಸಲು ಶುದ್ಧೀಕರಣ ಘಟಕ, ಪ್ರತ್ಯೇಕ ಪೈಪ್‌ಲೈನ್ ವ್ಯವಸ್ಥೆ ಇರಬೇಕಾಗುತ್ತದೆ. ಇದು ದುಬಾರಿ ವೆಚ್ಚಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ನೀರನ್ನು ಮರುಬಳಕೆ ಮಾಡುತ್ತಿಲ್ಲ.
ಏರ್ ಕೂಲಿಂಗ್ ತಂತ್ರಜ್ಞಾನದತ್ತ ಹೆಜ್ಜೆ
ಡೇಟಾ ಸೆಂಟರ್‌ಗಳು ಈ ರೀತಿ ಲಕ್ಷಗಟ್ಟಲೇ ಲೀಟರ್‌ ನೀರನ್ನು ಬಳಕೆ ಮಾಡುವುದು ಪರಿಸರಕ್ಕೆ ಮಾರಕವಾಗುತ್ತದೆ. ಅಲ್ಲದೆ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಈಗಾಗಲೇ ನೀರಿನ ಅಭಾವ ಇರುವ ಕಾರಣ ಪರ್ಯಾಯ ವ್ಯವಸ್ಥೆ ಅಗತ್ಯವಾಗಿದೆ. ಅದಕ್ಕಾಗಿಯೇ ಗೂಗಲ್‌ 2030ರ ವೇಳೆಗೆ ‘Water Positive’ ಆಗುವುದಾಗಿ ಘೋಷಿಸಿದೆ. ಅಂದರೆ ತಾನು ಬಳಸುವುದಕ್ಕಿಂತ ಹೆಚ್ಚು ನೀರನ್ನು ಪರಿಸರಕ್ಕೆ ಮರಳಿಸುವ ಗುರಿ ಹೊಂದಿದೆ. ಇದಕ್ಕಾಗಿ ಗಾಳಿಯ ಮೂಲಕ ತಂಪು ಮಾಡುವ ಏರ್‌ ಕೂಲಿಂಗ್‌ ತಂತ್ರಜ್ಞಾನ ಮತ್ತು ಮುಚ್ಚಿದ ಪೈಪ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಗೂಗಲ್ ಹೇಳಿಕೊಂಡಿದೆ.

ನಿತ್ಯ ಬೆಳಿಗ್ಗೆ ಪ್ರಾಣಾಯಾಮ ಮಾಡೋದ್ರಿಂದ ಇಷ್ಟೆಲ್ಲಾ ಲಾಭಗಳಿವೆ?

TAGGED:Google uses billions of liters of water
Share This Article
Facebook Twitter Copy Link Print
Previous Article ನಿತ್ಯ ಬೆಳಿಗ್ಗೆ ಪ್ರಾಣಾಯಾಮ ಮಾಡೋದ್ರಿಂದ ಇಷ್ಟೆಲ್ಲಾ ಲಾಭಗಳಿವೆ?
Next Article 6 ರಿಂದ 9ನೇ ತರಗತಿ ಅಂತಿಮ ಪರೀಕ್ಷೆಗೂ ರಾಜ್ಯಮಟ್ಟದ ಪ್ರಶ್ನೆಪತ್ರಿಕೆ?

Popular Posts

ಸಾಗರದಲ್ಲಿ ಪೆಟ್ರೋಲ್ ಕದಿಯೋ ಗ್ಯಾಂಗ್: ಬಸ್, ರೈಲ್ವೆ ನಿಲ್ದಾಣದ ಬೈಕ್ ಗಳೇ ಕಳ್ಳರ ಟಾರ್ಗೆಟ್!

1 Min Read

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read

ಸೊಸೆ ಮೇಲೆ ಮಾವನಿಂದಲೇ ಪದೇ ಪದೇ ಅತ್ಯಾಚಾರ: ಫೋನ್ ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ

2 Min Read

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ : ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ

1 Min Read

You Might Also Like

ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ವಿದೇಶದೇಶಪ್ರಮುಖ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read
ದೇಶಕರ್ನಾಟಕಪ್ರಮುಖಮನರಂಜನೆ

ಜೂನ್ 12ಕ್ಕೆ ರಾಗಿಣಿ ದ್ವಿವೇದಿ, ವರಲಕ್ಷ್ಮೀ ನಟನೆಯ ಪೊಲೀಸ್ ಕಂಪ್ಲೈಂಟ್ ರಿಲೀಸ್

1 Min Read
ದೇಶಪ್ರಮುಖವಿದೇಶ

ICC ODI World Cup 2027ರ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?