https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಕೇರಳದ ಕೊಚ್ಚಿಯಲ್ಲಿ 70ನೇ ಫಿಲ್ಮಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು. 2024ರಲ್ಲಿ ತೆರೆಕಂಡ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದರು.
ಈ ಬಾರಿ ಫಿಲ್ಮಫೇರ್ ಪ್ರಶಸ್ತಿ ಪಡೆದ ಕನ್ನಡ ತಾರೆಯರ ವಿವರ ಈ ಕೆಳಕಂಡಂತಿದೆ.
ಅತ್ಯುತ್ತಮ ನಟ ಕ್ರಿಟಿಕ್ಸ್ – ಗೌರಿಶಂಕರ್(ಕೆರೆಬೇಟೆ)
ಅತ್ಯುತ್ತಮ ನಟಿ ಕ್ರಿಟಿಕ್ಸ್ – ಅಂಕಿತಾ ಅಮರ್(ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಚಿತ್ರ ಕ್ರಿಟಿಕ್ಸ್ – ಬ್ಲಿಂಕ್
ಅತ್ಯುತ್ತಮ ಸಂಗೀತ ನಿರ್ದೇಶಕ – ಅರ್ಜುನ್ ಜನ್ಯಾ (ಕೃಷ್ಣಂಪ್ರಣಯ ಸಖಿ)
ಅತ್ಯುತ್ತಮ ಡೆಬ್ಯೂ ನಟ – ಸಮರ್ಜಿತ್ ಲಂಕೇಶ್(ಗೌರಿ)
ಅತ್ಯುತ್ತಮ ಡೆಬ್ಯೂ ನಟಿ – ಬಿಂದು ಶಿವರಾಂ(ಕೆರೆಬೇಟೆ)
ಅತ್ಯುತ್ತಮ ಗೀತರಚನೆ – ವಿ. ನಾಗೇಂದ್ರಪ್ರಸಾದ್(ದ್ವಾಪರ ಹಾಡು)
‘ಶಾಖಾಹಾರಿ’ ಚಿತ್ರದ ನಿರ್ಮಾಪಕ ರಾಜೇಶ್ ಕಿಳಂಬಿ ವೇದಿಕೆ ಏರಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಕ್ಷತಾ ಪಾಂಡವಪುರ ಅವರಿಗೆ ನಿರ್ಮಾಪಕ ಕೆ. ಮಂಜು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅತ್ಯುತ್ತಮ ನಟ ಕ್ರಿಟಿಕ್ಸ್ ಪ್ರಶಸ್ತಿ ಪಡೆದ ನಟ ಗೌರಿಶಂಕರ್, ಅತ್ಯುತ್ತಮ ನಟಿ ಕ್ರಿಟಿಕ್ಸ್ ಪ್ರಶಸ್ತಿ ಪಡೆದ ನಟಿ ಅಂಕಿತಾ ಅಮರ್ ವೇದಿಕೆ ಏರಿ ಸಂಭ್ರಮಿಸಿದ್ದಾರೆ.
ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿಯನ್ನು ಬಿಂದು ಶಿವರಾಂ ವೇದಿಕೆ ಏರಿ ಸ್ವೀಕರಿಸಿದರು. ಕಲರ್ಫುಲ್ ಡ್ಯಾನ್ಸ್ ಪರ್ಫಾರ್ಮನ್ಸ್ಗಳು ಕಾರ್ಯಕ್ರಮ ರಂಗೇರುವಂತೆ ಮಾಡಿತ್ತು. ಇದೇ ರೀತಿ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ವಿಜೇತರನ್ನು ವೇದಿಕೆ ಕರೆದು ಪ್ರಶಸ್ತಿ ಪ್ರದಾನ ಮಾಡಲಾಯಿತು.
ತೆಲುಗಿನಲ್ಲಿ ‘ಪುಷ್ಪ- 2′ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಅದೇ ಚಿತ್ರಕ್ಕಾಗಿ ಸುಕುಮಾರನ್ ಅತ್ಯುತ್ತಮ ನಿರ್ದೇಶಕ, ಅಲ್ಲು ಅರ್ಜುನ್ ಅತ್ಯುತ್ತಮ ನಟ, ದೇವಿಶ್ರೀ ಪ್ರಸಾದ್ ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಪ್ರಶಸ್ತಿ ಲಭಿಸಿದೆ. ’35 ಚಿನ್ನ ಕತಕಾದು’ ಚಿತ್ರದ ನಟನೆಗಾಗಿ ನಿವೇತಾ ಥಾಮಸ್ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ತಮಿಳಿನಲ್ಲಿ ಅಮರನ್ ಚಿತ್ರದ ನಟನೆಯಾಗಿ ಶಿವಕಾರ್ತಿಕೇಯನ್ ಅತ್ಯುತ್ತಮ ನಟ ಫಿಲ್ಮ್ಫೇರ್ ಸೌತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅದೇ ಚಿತ್ರದ ನಟನೆಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಹಿಗ್ಗಿದ್ದಾರೆ. ‘ಮೇಯಳಗನ್’ ಚಿತ್ರದ ನಟನೆಗಾಗಿ ಕಾರ್ತಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ಮಲಯಾಳಂನಲ್ಲಿ ‘ಮಂಜುಮೇಲ್ ಬಾಯ್ಸ್’ ಅತ್ಯುತ್ತಮ ಸಿನಿಮಾ, ಮಮ್ಮುಟಿ ಅತ್ಯುತ್ತಮ ನಟ(ಭ್ರಮಯುಗಂ), ಊರ್ವಶಿ ಅತ್ಯುತ್ತಮ ನಟಿ (ಉಲ್ಲೋಳುಕ್ಕು) ಸೇರಿ ಹಲವರು ಪ್ರಶಸ್ತಿ ಸ್ವೀಕರಿಸಿದ್ದಾರೆ.