https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಅಮೆರಿಕಾ ತನ್ನ ಆಮದು ಸುಂಕವನ್ನು ಶೇ.18ರಿಂದ ಶೇ.10ಕ್ಕೆ ಇಳಿಸಿರುವುದು ಭಾರತೀಯ ಚಿನ್ನದ ಆಭರಣ ಉದ್ಯಮಕ್ಕೆ ದೊಡ್ಡ ಉತ್ತೇಜನ ನೀಡಿದೆ. ಈ ನಿರ್ಧಾರ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಚಿನ್ನದ ಆಭರಣಗಳ ಬೆಲೆ ಸ್ಪರ್ಧಾತ್ಮಕವಾಗುತ್ತಿದ್ದು, ದೇಶೀಯ ಗ್ರಾಹಕರಿಗೂ ಚಿನ್ನ ಖರೀದಿಗೆ ಇದು ‘ಗೋಲ್ಡನ್ ಟೈಮ್’ ಆಗುವ ಸಾಧ್ಯತೆ ಇದೆ. ರಫ್ತು ಹೆಚ್ಚಳ, ರೂಪಾಯಿ ಬಲಗೊಳ್ಳುವಿಕೆ ಮತ್ತು ಜಾಗತಿಕ ಬೆಲೆ ಸ್ಥಿರತೆಯಿಂದ ಡಬಲ್ ಲಾಭದ ಅವಕಾಶ ತೆರೆದುಕೊಂಡಿದೆ.
ಜಾಗತಿಕ ಚಿನ್ನದ ಬೆಲೆಗಳ ಮೇಲೆ ಪರಿಣಾಮವನ್ನು ಗಮನಿಸಬೇಕು. ಅಮೆರಿಕದಂತಹ ದೊಡ್ಡ ಆರ್ಥಿಕತೆಯಲ್ಲಿ ಸುಂಕದ ಇಳಿಕೆ ಮಾರುಕಟ್ಟೆಯ ಅನಿಶ್ಚಿತತೆಯನ್ನು ಕಡಿಮೆ ಮಾಡುತ್ತದೆ. ವ್ಯಾಪಾರ ಸಂಬಂಧಗಳು ಸುಧಾರಿಸಿದಾಗ ಹೂಡಿಕೆದಾರರ ಮನೋಭಾವವೂ ಸ್ಥಿರವಾಗುತ್ತದೆ. ಇದರ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ತೀವ್ರ ಏರಿಳಿತ ಕಡಿಮೆಯಾಗುವ ಸಾಧ್ಯತೆ ಇದೆ. ಕೆಲ ವಿಶ್ಲೇಷಕರ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಮತ್ತು ಸರಬರಾಜು ಸಮತೋಲನ ಸಾಧಿಸಿದರೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬರಬಹುದು. ಇದರ ಲಾಭ ಭಾರತೀಯ ಗ್ರಾಹಕರಿಗೂ ತಲುಪಬಹುದು.
ಇನ್ನೂ ಮೂರನೆಯದಾಗಿ ಅಮೆರಿಕದೊಂದಿಗೆ ವ್ಯಾಪಾರ ಸಂಬಂಧಗಳು ಉತ್ತಮಗೊಂಡರೆ, ವಿದೇಶಿ ವಿನಿಮಯ ಹೆಚ್ಚಾಗಬಹುದು. ಇದರಿಂದ ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ಸ್ವಲ್ಪ ಮಟ್ಟಿಗೆ ಬಲಗೊಳ್ಳುವ ಸಾಧ್ಯತೆ ಇದೆ.
ಚಿನ್ನವನ್ನು ಭಾರತ ಡಾಲರ್ ಮೂಲಕ ಆಮದು ಮಾಡಿಕೊಳ್ಳುತ್ತದೆ. ಇದೇ ಡಾಲರ್ ಭಾರತದ ರೂಪಾಯಿ ಬದಲಾದ್ರೆ ಆಮದು ವೆಚ್ಚ ಕಡಿಮೆಯಾಗುತ್ತದೆ.
ಭಾರತ ಸರ್ಕಾರದ ಕ್ರಮವೂ ಸಹಾಯಕ ಇತ್ತೀಚೆಗೆ ಭಾರತ ಸರ್ಕಾರ ಚಿನ್ನದ ಆಮದು ಸುಂಕವನ್ನು ಶೇ.15ರಿಂದ ಶೇ.5ಕ್ಕೆ ಇಳಿಸಿದೆ. ಈಗ ಅಮೆರಿಕದ ಸುಂಕ ಇಳಿಕೆ ಸೇರಿಕೊಂಡರೆ ಒಟ್ಟಾರೆ 2ರಿಂದ 5%ರವರೆಗೆ ಚಿನ್ನದ ಬೆಲೆ ಇಳಿಕೆ ಸಾಧ್ಯ ಎಂದು ತಜ್ಞರು ಅಂದಾಜಿಸಿದ್ದಾರೆ. ಆದರೆ ಇದು ಜಾಗತಿಕ ಮಾರುಕಟ್ಟೆಯ ಚಲನೆಗಳ ಮೇಲೆ ಅವಲಂಬಿತವಾಗಿರುತ್ತದೆ.