Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪೊಲೀಸ್ ಪೇದೆ ಕಿರುಕುಳ : ಪತಿ ಸಾವಿನ 6 ದಿನಕ್ಕೆ ಪತ್ನಿ ಆತ್ಮ*ಹತ್ಯೆ
ಕರ್ನಾಟಕಪ್ರಮುಖ

ಪೊಲೀಸ್ ಪೇದೆ ಕಿರುಕುಳ : ಪತಿ ಸಾವಿನ 6 ದಿನಕ್ಕೆ ಪತ್ನಿ ಆತ್ಮ*ಹತ್ಯೆ

Share
2 Min Read
SHARE

https://youtube.com/shorts/meQfr5hOsT4?si=–SvccKUHgJJVjWK

Subscribe ನ್ಯೂಸಿಕ್ಸ್ ಕನ್ನಡ

newsics.com

ಪೊಲೀಸ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಆರು ದಿನಕ್ಕೆ ಪತ್ನಿಯು ಮತ್ತೊಬ್ಬ ಪೊಲೀಸ್ ಪೇದೆಯ ಕಿರುಕುಳ ಮತ್ತು ಬ್ಲಾಕ್ ಮೇಲ್ ಗೆ ಒಳಗಾಗಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ದಂಪತಿಯ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.

ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇವರ ಪತಿ ಜಗದೀಶ್ ಅವರು ಕೆಎಸ್ಐಎಸ್ಎಫ್ ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಜುಗುಪ್ಸೆಗೊಂಡು ಫೆಬ್ರವರಿ 14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.

ಸದಾ ಕುಡಿತದ ಚಟ ಅಂಟಿಸಿಕೊಂಡಿದ್ದ ಜಗದೀಶ್ ಕುಡಿತಕ್ಕ ಹೆಂಡತಿ ಮಕ್ಕಳು ಹಾಗೂ ತಾಯಿಯ ಜೊತೆ ಜಗಳವಾಡುತ್ತಿದ್ದ.

ಕೆಲವೊಮ್ಮೆ ಈತನ ಜಗಳದ ಪ್ರಕರಣಗಳು ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ನಂತರ ರಾಜಿ ಸಂಧಾನದ ಮೂಲಕ ಮುಕ್ತಾಯಗೊಳ್ಳುತ್ತಿತ್ತು. ಕುಡಿತದ ಅಮಲಿನಲ್ಲಿ ಮನೆಯವರನ್ನು ಹೆದರಿಸಲು ನಾನು ಸಾಯುತ್ತೇನೆ ಎಂದು ಹೇಳುತ್ತಿದ್ದ. ಹೀಗೆಯೇ ಹೆದರಿಸಲು ಹೋಗಿ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದನು.

ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದ ಅಕ್ಕಪಕ್ಕದ ಬೀದಿಗಳಲ್ಲಿ ಕೆಎಸ್‌ಆರ್‌ಪಿ ಪೇದೆ ಜಗದೀಶ್ ಮತ್ತು ಪೇದೆ ಮೋಹನ್ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಎರಡು ಕುಟುಂಬಗಳಿಗೂ ಪರಸ್ಪರ ಪರಿಚಯ ಕೂಡ ಇತ್ತು. ಪತಿ ಜಗದೀಶ್ ಆತ್ಮ*ಹತ್ಯೆಯ ನಂತರ ಪತ್ನಿ ಸ್ವಾತಿ ಇಡೀ ಕುಟುಂಬದ ಸ್ಥಿತಿ ನೆನೆದು ಮನನೊಂದಿದ್ದರು. ಇಂತಹ ಸಂದರ್ಭದಲ್ಲಿ ಸ್ವಾತಿಗೆ ಪೊಲೀಸ್ ಪೇದೆ ಮೋಹನ್ ನಿರಂತರವಾಗಿ ಫೇಸ್‌ಬುಕ್‌ ಮತ್ತು ವಾಟ್ಸಪ್ ಗಳ ಮೂಲಕ ಅಶ್ಲೀಲ ಸಂದೇಶ ಕಳಿಸುತ್ತಿದ್ದ.‌ ಅಲ್ಲದೆ ಗಂಡನ ಸಾವಿಗೆ ಆಕೆಯ ಕಾರಣ ಎಂಬಂತೆ ಅಪಪ್ರಚಾರವನ್ನು ಕೂಡ ನಡೆಸಿದ್ದ. ಇದರಿಂದ ಮಾನಸಿಕವಾಗಿ ಕುಗ್ಗಿದ ಸ್ವಾತಿ ತನ್ನ ತಾಯಿಗೆ ಮೋಹನ್ ನೀಡುತ್ತಿದ್ದ ಕಿರುಕುಳದ ಬಗ್ಗೆ ತಿಳಿಸಿದ್ದರು. ಸ್ವಾತಿ ತಾಯಿ ಭಾಗ್ಯಮ್ಮ ನಿನ್ನ ಗಂಡನ ತಿಥಿ ಕಾರ್ಯ ಮುಗಿದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡೋಣ ಸದ್ಯ ಧೈರ್ಯವಾಗಿ ಇರು ಎಂದೆಲ್ಲ ಸಾಂತ್ವಾನ ಹೇಳಿದ್ದರು.

ಫೆಬ್ರವರಿ 20ರ ಬೆಳಗ್ಗೆ ತಾಯಿ ಭಾಗ್ಯಮರ ಮೊಬೈಲಿಗೆ ಸ್ವಾತಿ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ.‌ ಪೊಲೀಸ್ ಪೇದೆ ಮೋಹನ್ ನೀಡುತ್ತಿದ್ದ ಮಾನಸಿಕ ಕಿರುಕುಳದ ಕುರಿತು ವಾಟ್ಸಾಪ್ ಸಂದೇಶದಲ್ಲಿ ಉಲ್ಲೇಖಿಸಿದ್ದಾತೆ. ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಯಾವುದೇ ಕಾರಣಕ್ಕೂ ಪೊಲೀಸ್ ಪೇದೆ ಮೋಹನ್‌ನನ್ನು ಬಿಡಬೇಡಿ ನನ್ನ ಇಬ್ಬರು ಪುಟ್ಟ ಕಂದಮ್ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಂದೇಶ ಕಳಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾನಸಿಕ ಕಿರುಕುಳ ಕೊಟ್ಟು ಬ್ಲಾಕ್ ಮೇಲ್ ಮಾಡಿದ ಪೊಲೀಸ್ ಪೇದೆ ಪರಾರಿಯಾಗಿದ್ದು ಆತನ ಬಂಧನಕ್ಕೆ ಭದ್ರಾವತಿಯ ನ್ಯೂ ಟೌನ್ ಪೊಲೀಸರು ಬಲೆ ಬೀಸಿದ್ದಾರೆ.

https://www.newsics.com/2026/02/21/the-groom-goes-missing-the-day-after-the-wedding/

TAGGED:Police Constable Harassment: Wife commits suicide 6 days after husband's death
Share This Article
Facebook Twitter Copy Link Print
Previous Article ಬಾಡೂಟದ ಮರುದಿನವೇ ಮದುಮಗ ನಾಪತ್ತೆ
Next Article 17 ಕಬ್ಬು ಕಾರ್ಮಿಕರಿದ್ದ ಟ್ರ್ಯಾಕ್ಟರ್ ಪಲ್ಟಿ; 2 ವರ್ಷದ ಮಗು ಸೇರಿ ನಾಲ್ವರು ಸಾವು

Popular Posts

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

2 Min Read

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read

Indian Idol season 16 Winner ಇಂಡಿಯನ್ ಐಡಲ್ 16′ ವಿಜೇತೆ ಜ್ಯೋತಿರ್ಮಯಿ ನಾಯಕ್: ಒಡಿಶಾದ ಗಾಯಕಿಯ ಕನಸು ನನಸಾದ ಕ್ಷಣ

2 Min Read

You Might Also Like

ದೇಶಪ್ರಮುಖವೈರಲ್

Girl embarrassed ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಸ್ಥಿತಿ ಈಗ ನಾಯಿಪಾಡಂತೆ! ಈಕೆ ಹೇಳಿದ್ದೇನು? ವಿಡಿಯೋ ನೋಡಿ

1 Min Read
ಕರ್ನಾಟಕಆರೋಗ್ಯಪ್ರಮುಖ

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read
ಪ್ರಮುಖದೇಶಮನರಂಜನೆ

Team India Records in cricket ಟೀಮ್ ಇಂಡಿಯಾದ ವಿಶ್ವದಾಖಲೆ ಇನ್ನಷ್ಟು ವಿಶೇಷ

2 Min Read
ದೇಶಕರ್ನಾಟಕಪ್ರಮುಖ

New Rules On August 1 ಆಗಸ್ಟ್ 1ರಿಂದ ದೇಶದಲ್ಲಿ ಜಾರಿಗೆ ಬರಲಿರುವ ಹೊಸ ನಿಯಮಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?