https://youtube.com/shorts/meQfr5hOsT4?si=–SvccKUHgJJVjWK
Subscribe ನ್ಯೂಸಿಕ್ಸ್ ಕನ್ನಡ
newsics.com
ಹಾಸನ: ಜಿಲ್ಲೆಯಲ್ಲಿ ಎಟಿಎಂಗೆ ಹಣ ತುಂಬುವ ಖಾಸಗಿ ಸಂಸ್ಥೆಯಲ್ಲಿ ಭಾರೀ ಹಣ ದುರುಪಯೋಗ ಪ್ರಕರಣ ಬಯಲಾಗಿದ್ದು, ಮೂರು ಕೋಟಿಗೂ ಹೆಚ್ಚು ಹಣ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಪೆಬ್ರವರಿ 18 ಮತ್ತು 19ರಂದು ಸಂಸ್ಥೆಯಲ್ಲಿ ನಡೆಸಿದ ಮಾಸಿಕ ಆಡಿಟ್ ವೇಳೆ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ಹಾಸನ ಬಡಾವಣೆ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಂಪನಿಯ ಆಡಿಟ್ ವೇಳೆ ಈ ಭಾರಿ ಅವ್ಯವಹಾರ ಬಯಲಾಗಿದ್ದು, ಪ್ರಮುಖ ಸಿಬ್ಬಂದಿಗಳಾದ ನಂದೀಶ್ ಮತ್ತು ಮಧು ಎಂಬುವವರ ಮೇಲೆ ಶಂಕೆ ವ್ಯಕ್ತವಾಗಿದೆ. ಸದ್ಯ ಬೆಂಗಳೂರಿನಿಂದ ಆಗಮಿಸಿರುವ ಉನ್ನತ ಅಧಿಕಾರಿಗಳ ತಂಡ ಹಣದ ನಿಖರ ಲೆಕ್ಕಾಚಾರ ನಡೆಸುತ್ತಿದ್ದು, ಪ್ರಕರಣ ಪೊಲೀಸ್ ಮೆಟ್ಟಿಲೇರಲು ಸಜ್ಜಾಗಿದೆ.
ಹಾಸನ ನಗರದ ಎಟಿಎಂಗಳಿಗೆ ಹಾಕಬೇಕಿದ್ದ ಸುಮಾರು 2 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಿಎಂಎಸ್ (CMS) ಕಂಪನಿಯ ಸಿಬ್ಬಂದಿಯೇ ಲಪಟಾಯಿಸಿರುವ ಗಂಭೀರ ಆರೋಪ ಕೇಳಿಬಂದಿದೆ.ಕಂಪನಿಯ ಸಿಬ್ಬಂದಿಗಳಾದ ನಂದೀಶ್ ಮತ್ತು ಮಧು ಎಂಬುವವರು ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.ಹಾಸನದ ಗೌರಿಕೊಪ್ಪಲಿನಲ್ಲಿರುವ ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವಿಸಸ್ (CMS) ಕಚೇರಿಯು ನಗರದ ಕೆನರಾ ಬ್ಯಾಂಕ್, ಎಸ್ಬಿಐ ಸೇರಿದಂತೆ ಒಟ್ಟು 15 ಬ್ಯಾಂಕ್ಗಳ 28 ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊಂದಿತ್ತು.
ಫೆಬ್ರವರಿ 6 ರಂದು ನಡೆದ ಆಡಿಟ್ನಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಫೆಬ್ರವರಿ 18 ರಂದು ನಡೆದ ಮರು ಆಡಿಟ್ನಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸ ಕಂಡುಬಂದಿದೆ.ಸಿಬ್ಬಂದಿ ಎಟಿಎಂಗಳಿಗೆ ಹಣ ಹಾಕಲು ತೆರಳಿದಾಗ, ವಾಸ್ತವವಾಗಿ ಹಣ ಹಾಕದೆಯೇ ಮೆಷಿನ್ನಲ್ಲಿ ಹಣ ಹಾಕಿರುವುದಾಗಿ ಸುಳ್ಳು ಎಂಟ್ರಿ ಮಾಡಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ.
ಮುಂದಿನ ಕ್ರಮ: ಬೆಂಗಳೂರಿನಿಂದ ಬಂದಿರುವ ಕಂಪನಿಯ ಮೇಲಾಧಿಕಾರಿಗಳು ಮತ್ತೊಮ್ಮೆ ಸಂಪೂರ್ಣ ಆಡಿಟ್ ನಡೆಸುತ್ತಿದ್ದಾರೆ. ಇದು ಮುಗಿದ ನಂತರ ನಿಖರವಾದ ಮೊತ್ತ ತಿಳಿಯಲಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.