Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಅರೆಸ್ಟ್
ಕರ್ನಾಟಕಪ್ರಮುಖ

ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಅರೆಸ್ಟ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

2೦22ರಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನದ ಸಂಪತ್ತು ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಸಂಚು ರೂಪಿಸಲಾಗಿತ್ತು. ಅಂದು ನಿಧಿ ಶೋಧ ಮಾಡಿದ್ದ ಮಾಸ್ಟರ್ ಮೈಂಡ್ನನ್ನು ಇದೀಗ ಪೊಲೀಸರು ಅರೆಸ್ಟ್ (Arrest) ಮಾಡಿದ್ದು, ಆ ಮೂಲಕ ಚಿನ್ನದ ನಿಧಿಯ ಅಸಲಿ ಸತ್ಯ ಬಯಲಿಗೆಳೆದಿದ್ದಾರೆ.
ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನದ ನಿಧಿ ಸಿಕ್ಕಿದೆ. ಈ ವಿಚಾರ ದೇಶ ಸೇರಿದಂತೆ ವಿದೇಶದಲ್ಲಿ ಭಾರೀ ಸುದ್ದಿ ಮಾಡಿದೆ. ಇದೇ ವೇಳೆ ಹಳೆ ಪ್ರಕರಣವೊಂದು ಮರು ಜೀವ ಪಡೆದುಕೊಂಡಿದೆ. 2022ರಲ್ಲಿ ಧಾರವಾಡ ನಿವಾಸಿ ಬಸೀರಾಬೇಗಂ ಅವರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿಧಿ ಆಸೆ ತೋರಿಸಿ ವಂಚಿಸಿರುವುದಾಗಿ ದೂರು ನೀಡಿದ್ದರು. ಆಗ ಪೊಲೀಸರು ಆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕೈಬಿಟ್ಟಿದ್ದರು.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ, 2026 ಫೆಬ್ರವರಿ 11ರಂದು ಸಮಾಜ ಸೇವಕ ಪೀರಸಾಬ್ ಗೌತಾಳ ಎನ್ನುವವರು, ಸರ್ಕಾರಕ್ಕೆ ಸೇರಬೇಕಾದ ನಿಧಿ ಕಂಡವರ ಪಾಲಾಗಿದೆ ಎಂದು ದೂರು ನೀಡಿದ್ದರು. ಆಗ ಎಸ್ಪಿ ರೋಹನ್ ಜಗದೀಶ್ ತಂಡ ರಚನೆ ಮಾಡಿ ತನಿಖೆ ನಡೆಸಿದ್ದರು. ಆ ವೇಳೆ ಹಂಡೆಯಲಿ ಚಿನ್ನ ಇರುವ ವಿಡಿಯೋ ಕೂಡ ನೀಡಿದ್ರು. ಮತ್ತೊಮ್ಮೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಉತ್ತರಾಖಂಡದ ಹಜರತ್ ಎನ್ನುವವನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಅದು ನಕಲಿ ಚಿನ್ನ ಎನ್ನುವ ಸತ್ಯ ಬಹಿರಂಗವಾಗಿದೆ. 2022 ರಲ್ಲಿ ಗದಗ ನಗರದಲ್ಲಿ ಒಂದು ಹಂಡೆ ಖರೀದಿ ಮಾಡಿದ್ದಾನೆ, ನಂತರ ಮತ್ತೊಂದು ಅಂಗಡಿಯಲ್ಲಿ ಗೋಲ್ಡ್ ಬಣ್ಣದ ಬಿಸ್ಕೆಟ್ ಖರೀದಿ ಮಾಡಿ, ಇದೇ ನಿಧಿಯಂದು ತೋರಿಸಿದ್ದ. ಆ ವಿಡಿಯೋ ಇಟ್ಟುಕೊಂಡು ಸಾಕಷ್ಟು ಜನರಿಗೆ ಮೋಸ ಮಾಡಿದ್ದ ಎಂದು ಎಸ್ಪಿ ಹೇಳಿದ್ದಾರೆ.
22 ಲಕ್ಷ ರೂ. ಹಣ ಸುಲಿಗೆ
ಧಾರವಾಡ ನಿವಾಸಿಯಾದ ಬಸೀರಾಬೇಗಂ ಅವರು ವ್ಯಾಪಾರಸ್ಥರು. ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪ ಪಶು ಆಹಾರ ಖರೀದಿ ‌ಮಾಡಲು ಹೋಗಿದ್ದಾಗ, ಆ ಸಮಯದಲ್ಲಿ ಗ್ಯಾಸ್ ಹಾಕಿಸಿಕೊಳ್ಳಲು ಬಂದಿದ್ದ ಉತ್ತರಾಖಂಡದ ಹಜರತ್ ಪರಿಚಯ ಆಗುತ್ತೆ. ಈ ವೇಳೆ ಹಜರತ್ ನಾನು ನಿಧಿ ಶೋಧ ಮಾಡುತ್ತೇನೆ ಅಂತಾ ಹೇಳಿದ್ದಾನೆ. ಹಜರತ್ ನಿಧಿ ಸಿಕ್ಕ ಮೇಲೆ ಸಾಕಷ್ಟು ಹಣ ಬರುತ್ತದೆ ಎಂದು ನಂಬಿಸಿದ್ದ. ಹೀಗಾಗಿ ಪ್ರಮುಖ ಆರೋಪಿ ಹಜರತ್ ಉತ್ತರಾಖಂಡದಿಂದ ಬರಲು ಆತನ ಖರ್ಚು ವೆಚ್ಚ ಅಂತಾ ಮಹಿಳೆಯೊಬ್ಬರಿಂದ ಸುಮಾರು 22 ಲಕ್ಷ ರೂ. ಹಣ ಸುಲಿಗೆ ‌ಮಾಡಿದ್ದಾರೆ. ಇದು ಎಫ್ಐಆರ್ನಲ್ಲಿ ಕೂಡ ಉಲ್ಲೇಖವಾಗಿದೆ.
ಪ್ಲಾನ್ ಮಾಡಿ‌ ಒಂದು ದಿನ ಲಕ್ಕುಂಡಿ ಗ್ರಾಮಕ್ಕೆ ಹಜರತ್ ಬಂದು, ಗದಗನಲ್ಲಿ ಹಂಡೆ ಖರೀದಿ ಮಾಡಿ, ಗೋಲ್ಡ್ ಬಣ್ಣದ ನಕಲಿ ಬಿಸ್ಕೆಟ್ ಇಟ್ಟು, ಸಣ್ಣ ಬಸಪ್ಪ ಹಾಗೂ ದೊಡ ಬಸಪ್ಪ ಅವರ ಜಮೀನಿನಲ್ಲಿ ನಿಧಿ ಶೋಧ ಮಾಡಿದ ಹಾಗೇ ನಾಟಕ ಮಾಡಿದ್ದ. ಸಣ್ಣ ಬಸಪ್ಪನಿಗೆ 20 ಲಕ್ಷ ರೂ ಹಣ ಕೊಡು ಈ ನಿಧಿ ನಿನಗೆ ಕೊಡುತ್ತೇನೆ ಅಂತಾ ಹೇಳಿದ್ದ. ಆಗ ಸ್ವಲ್ಪ ವೈಮನಸ್ಸು ಉಂಟಾಗಿದೆ. ನಿಧಿ ಶೋಧ ಮಾಡಲು ಬಂದ ಹಜರತ್ ಅದನ್ನು ಕಾಲಿನಿಂದ ಒದ್ದು ಆಗ ಆ ಚಿನ್ನವು ಮಣ್ಣಾಗಿದೆ ಎಂದು ವಂಚನೆ ಮಾಡಿ‌ ಎಸ್ಕೇಪ್ ಆಗಿದ್ದಾನೆ. ಈವಾಗ ಪೊಲೀಸರು ಕಿಂಗ್ ಪಿನ್ನನ್ನ ಅರೆಸ್ಟ್ ಮಾಡಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಬೆತ್ತಲೆ ಮಹಿಳೆಯ ಶವ ಪತ್ತೆ!

TAGGED:Old case revived; cleric arrested
Share This Article
Facebook Twitter Copy Link Print
Previous Article ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ವಿನ್ನರ್; ಯಾವ ಪಕ್ಷ?
Next Article ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಬೆತ್ತಲೆ ಮಹಿಳೆಯ ಶವ ಪತ್ತೆ!

Popular Posts

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read

Indian Idol season 16 Winner ಇಂಡಿಯನ್ ಐಡಲ್ 16′ ವಿಜೇತೆ ಜ್ಯೋತಿರ್ಮಯಿ ನಾಯಕ್: ಒಡಿಶಾದ ಗಾಯಕಿಯ ಕನಸು ನನಸಾದ ಕ್ಷಣ

2 Min Read

PM on Foreign Policy ಒಂದೇ ತಿಂಗಳಲ್ಲಿ ಮೂರು ಜಾಗತಿಕ ಶೃಂಗಸಭೆಗಳು: ಪ್ರಧಾನಿ ಮೋದಿ ಅವರ ಜಾಗತಿಕ ರಾಜತಾಂತ್ರಿಕ ಅಭಿಯಾನಕ್ಕೆ ವೇಗ

3 Min Read

You Might Also Like

ದೇಶಪ್ರಮುಖವೈರಲ್

Girl embarrassed ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಸ್ಥಿತಿ ಈಗ ನಾಯಿಪಾಡಂತೆ! ಈಕೆ ಹೇಳಿದ್ದೇನು? ವಿಡಿಯೋ ನೋಡಿ

1 Min Read
ಕರ್ನಾಟಕಆರೋಗ್ಯಪ್ರಮುಖ

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read
ಪ್ರಮುಖದೇಶಮನರಂಜನೆ

Team India Records in cricket ಟೀಮ್ ಇಂಡಿಯಾದ ವಿಶ್ವದಾಖಲೆ ಇನ್ನಷ್ಟು ವಿಶೇಷ

2 Min Read
ದೇಶಕರ್ನಾಟಕಪ್ರಮುಖ

New Rules On August 1 ಆಗಸ್ಟ್ 1ರಿಂದ ದೇಶದಲ್ಲಿ ಜಾರಿಗೆ ಬರಲಿರುವ ಹೊಸ ನಿಯಮಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?