Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಗನ ಸಾವಿನ ನೋವಿನಲ್ಲೇ 6 ಕೋಟಿ ಮೌಲ್ಯದ BMW ಕಾರು ನಾಶ ಮಾಡಿದ ತಂದೆ!
ದೇಶಪ್ರಮುಖವಿದೇಶ

ಮಗನ ಸಾವಿನ ನೋವಿನಲ್ಲೇ 6 ಕೋಟಿ ಮೌಲ್ಯದ BMW ಕಾರು ನಾಶ ಮಾಡಿದ ತಂದೆ!

Share
2 Min Read
SHARE

https://youtube.com/shorts/11hvM0bsJ2E?si=Q5TtqzkdIZKrnxiz

Subscribe ನ್ಯೂಸಿಕ್ಸ್ ಕನ್ನಡ

newsics.com

ಮಗನಿಗಾಗಿ ತಂದೆ ಪ್ರೀತಿಯಿಂದ ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ BMW ಕಾರು ಉಡುಗೊರೆಯಾಗಿ ನೀಡಿದ್ದಾರೆ.
ಆದರೆ ಈ ಕಾರು ಖರೀದಿಸಿದ ಕೆಲ ದಿನದಲ್ಲೇ ಮಗ ದುರಂತ ಅಂತ್ಯಕಂಡಿದ್ದ. ಮಗನ ಸಾವಿನ ಸೋವಿನಲ್ಲಿ ತಂದೆಗೆ ಕಾರನ್ನು ಕಣ್ಣೆತ್ತಿ ನೋಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಮಗ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡಿದ ಹೃದಯವಿದ್ರಾವಕ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ತಂದೆ ತಾಯಿ ಪ್ರೀತಿಯಿಂದಲೇ ಮಗನ ಬೆಳೆಸಿದ್ದಾರೆ. ಇತ್ತ ಮಗ ಕೂಡ ಪೋಷಕರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದ. ಹೀಗಾಗಿ ಮಗ ಏನು ಕೇಳಿದರೂ ಪೋಷರು ಇಲ್ಲ ಎಂದಿಲ್ಲ. ಹಾಗಂತ ದುಬಾರಿ ವಸ್ತುಗಳನ್ನು ಆತ ಕೇಳಿರಲಿಲ್ಲ. ತನಗೊಂದು ಕಾರು ಬೇಕು ಅನ್ನೋದು ಮಗನ ಬಯಕೆಯಾಗಿತ್ತು. ಅದು ತನ್ನ ಅಗತ್ಯಕ್ಕೆ ತಕ್ಕ ಕಾರಾಗಿದ್ದರೆ ಸಾಕು ಅನ್ನೋದು ಮಾತ್ರ ಮಗನ ಬಯಕೆಯಾಗಿತ್ತು. ದುಬಾರಿ, ಐಷಾರಾಮಿ ಕಾರಿನ ಬಗ್ಗೆ ಕನಸು ಕಂಡಿರಲಿಲ್ಲ. ಐಷಾರಾಮಿ ಕಾರು ಖರೀದಿ ಪೋಷಕರಿಗೆ ಕಷ್ಟದ ವಿಚಾರವೂ ಆಗಿರಲಿಲ್ಲ.

ಮಗನ ಹುಟ್ಟು ಹಬ್ಬಕ್ಕೆ ತಂದೆ ಬರೋಬ್ಬರಿ 6 ಕೋಟಿ ಪೂಪಾಯಿ ಮೌಲ್ಯದ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ವಿಶೇಷ ಅಂದರೆ ಮಗನಿಗೆ ಗೊತ್ತಿಲ್ಲದೆ ಈ ಕಾರು ಬುಕ್ ಮಾಡಲಾಗಿತ್ತು. ಹುಟ್ಟು ಹಬ್ಬದ ದಿನ ಅಚ್ಚರಿಯಾಗಿ ಕಾರು ಉಡುಗೊರೆ ನೀಡಿದ್ದರು. ತಂದೆ ನೀಡಿದ ವಿಶೇಷ ಉಡುಗೊರೆ ನೋಡಿ ಮಗನ ಕೂಡ ಅತೀವ ಸಂಭ್ರಮಿಸಿದ್ದ. ಈ ಕಾರಿನಲ್ಲಿ ಪೋಷಕರನ್ನು ಕೂರಿಸಿ ಸುತ್ತಾಡಿದ್ದ.
ಕಾರು ಬಂದ ಕೆಲವೇ ದಿನದಲ್ಲಿ ಮಗ ದುರಂತ ಸಾವು
ಕಾರು ಮನೆಗೆ ಬಂದ ಕೆಲವೇ ದಿನಗಳಲ್ಲಿ ಮಗ ದುರಂತ ಸಾವು ಕಂಡಿದ್ದಾನೆ. ಮಗನ ಕಳೆದುಕೊಂಡ ಪೋಷಕರು ಗೋಳಾಡಿದ್ದಾರೆ. ನೋವು, ದುಃಖ ತಡೆಯಲು ಸಾಧ್ಯವಾಗಲಿಲ್ಲ. ಮಗ ಇಲ್ಲದ ಮೇಲೆ ಪ್ರತಿ ದಿನ ಬೆಳಗ್ಗೆ ಆತನ ಕಾರು ನೋಡಿದಾಗ ತಂದೆ ದುಃಖ ಉಮ್ಮಳಿಸಿ ಬರುತ್ತಿತ್ತು. ಅದೆಷ್ಟೇ ನಿಯಂತ್ರಣ ಮಾಡಿದರೂ ಸಾಧ್ಯವಾಗಲಿಲ್ಲ. ಮಗನಿಲ್ಲದ ಮೇಲೆ ಆತನಿಗಾಗಿ ಕೊಡಿಸಿದ ಕಾರು ಯಾಕೆ ಎಂದು ತಂದೆ 6 ಕೋಟಿ ರೂಪಾಯಿ ಮೌಲ್ಯದ ಹೊಸ BMW ಕಾರನ್ನು ಸಮಾಧಿ ಮಾಡಲು ಮುಂದಾಗಿದ್ದಾರೆ.

ಹೊಸ BMW ಕಾರನ್ನು ಮಗನ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ. ಸಮಾಧಿ ಸ್ಥಳದಿಂದ ಮಗನ ಕಾರನ್ನು ಯಾರು ಕದಿಯಬಾರದು ಅಥವಾ ಹೊರತೆಗೆಯಬಾರದು ಎಂದು ತಂದೆ ಕಾರನ್ನುಹೂತು ಹಾಕಲು ಜೆಸಿಬಿ ಮೂಲಕ ಗುಂಡಿ ಅಗೆದಿದ್ದಾರೆ. ಬಳಿಕ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ತಂದು ಕಾರಿನ ಮೇಲೆ ಸುರಿದಿದ್ದಾರೆ. ಸಂಪೂರ್ಣ ಕಾಂಕ್ರಿಟ್‌ನಿಂದ ಗುಂಡಿಯಲ್ಲಿ ಕಾರನ್ನಿಟ್ಟು ಮುಚ್ಚಲಾಗಿದೆ. ಕೊನೆಯಲ್ಲಿ ಕಾರಿನ ಕೀಯನ್ನು ಇದೇ ಗುಂಡಿಗೆ ಎಸೆದು ಮತ್ತಷ್ಟು ಕಾಂಕ್ರೀಟ್‌ನಿಂದ ಮುಚ್ಚಿ ಮಣ್ಣು ಹಾಕಲಾಗಿದೆ.ಈ ವಿಡಿಯೋ ನೋಡಿ ಹಲವರು ಭಾವುಕರಾಗಿದ್ದಾರೆ.

TAGGED:Father buries Rs 6 crore BMW in grief over son's death
Share This Article
Facebook Twitter Copy Link Print
Previous Article ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!
Next Article Bus-car collision ಕೆಎಸ್ಆರ್‌ಟಿಸಿ ಬಸ್- ಕಾರು ಡಿಕ್ಕಿ: ಐವರ ಸಾವು

Popular Posts

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

You Might Also Like

ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read
ಕರ್ನಾಟಕಪ್ರಮುಖ

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read
ಪ್ರಮುಖ

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?