Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್‌ಗೆ ಸುಪ್ರೀಂ ಚಾಟಿ
ದೇಶಪ್ರಮುಖ

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್‌ಗೆ ಸುಪ್ರೀಂ ಚಾಟಿ

Share
3 Min Read
SHARE

https://youtube.com/shorts/Z1cy8EQaCVE?si=-_cWMt02yPVoM0xd

Subscribe ನ್ಯೂಸಿಕ್ಸ್ ಕನ್ನಡ

newsics.com

ಇದೆಲ್ಲವನ್ನೂ ನೀವು ಕೇವಲ ಮಾಧ್ಯಮದಲ್ಲಿ ಪ್ರಚಾರಗಿಟ್ಟಿಸಿಕೊಳ್ಳಲು ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯರೂ ಆಗಿರುವ ಜೈರಾಮ್ ರಮೇಶ್ ವಿರುದ್ದ ಸರ್ವೋಚ್ಚ ನ್ಯಾಯಾಲಯ ಕಿಡಿಕಾರಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ, ತ್ರಿಸದಸ್ಯ ಪೀಠ, ಜೈರಾಮ್ ರಮೇಶ್ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದೆ.
ಸಿಜೆಐ ನ್ಯಾ.ಸೂರ್ಯಕಾಂತ್, ನ್ಯಾ. ಜಾಯ್’ಮಾಲ್ಯ ಬಾಗ್ಚಿ ಮತ್ತು ನ್ಯಾ.ಉಜ್ಜಲ್ ಭುಯಾನ್ ಅವರಿದ್ದ ತ್ರಿಸದಸ್ಯ ಪೀಠ, ಜೈರಾಮ್ ರಮೇಶ್ ಅವರ ರಿಟ್ ಅರ್ಜಿಯ ಸಂಬಂಧ ಮಾತನಾಡುತ್ತಾ, ಈ ಮೇಲಿನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆ. ಪರಿಸರ ಪರವಾನಿಗೆಯನ್ನು ಪೂರ್ವ ಅನ್ವಯವಾಗುವಂತೆ ನೀಡುವುದನ್ನು ಪ್ರಶ್ನಿಸಿ, ಜೈರಾಮ್ ರಮೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆಯ ವೇಳೆ, ಈ ಅರ್ಜಿಯು, ಕೇಂದ್ರ ಸರ್ಕಾರದ ಕುಂದುಕೊರತೆಯನ್ನು ಹೈಲೆಟ್ ಮಾಡುವ ಬದಲಾಗಿ, ಸಾರ್ವಜನಿಕರ ಗಮನವನ್ನು ಸೆಳೆಯುವ ಉದ್ದೇಶದಿಂದ ಕೂಡಿದಂತಿದೆ ಎಂದು ತ್ರಿಸದಸ್ಯ ಪೀಠ, ಅರ್ಜಿಯವನ್ನು ವಿಚಾರಣೆಗೆ ಸ್ವೀಕರಿಸಲು ಸರ್ವೋಚ್ಚ ನ್ಯಾಯಾಲಯ ಗುರುವಾರ (ಫೆ. 12) ನಿರಾಕರಿಸಿದೆ. ಪರಿಸರ ಪರವಾನಿಗೆಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್, ನವೆಂಬರ್ 2025ರಲ್ಲಿ ತೀರ್ಪನ್ನು ನೀಡಿತ್ತು. ಇದನ್ನು ಪ್ರಶ್ನಿಸುವ ರಿಟ್ ಅರ್ಜಿಯನ್ನು ಜೈರಾಮ್ ರಮೇಶ್ ಸಲ್ಲಿಸಿದ್ದರು. ಇದಕ್ಕೆ, ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ನೀವು ದಂಡ ಎದುರಿಸಲು ಸಿದ್ದರಾಗಿ ಎಂದ ಟಾಪ್ ಕೋರ್ಟ್
ತೀರ್ಪಿನ ವಿರುದ್ದ ರಿಟ್ ಅರ್ಜಿ ಸಲ್ಲಿಸುವ ಬದಲು, ನೀವ್ಯಾಕೆ ಮರುಪರಿಶೀಲನಾ ಅರ್ಜಿಯನ್ನು ( Review Petition) ಸಲ್ಲಿಸುತ್ತಿಲ್ಲಾ? ಅರ್ಜಿಯನ್ನು ಸಲ್ಲಿಸಲು ಯಾಕೆ ವಿಳಂಬ ಮಾಡುತ್ತಿದ್ದೀರಿ? ನೀವು ಹೇಳಿರುವ ಎಲ್ಲಾ ಅಂಶಗಳನ್ನು ರಿಟ್ ಅರ್ಜಿಯಲ್ಲಿ ಯಾಕೆ ಎತ್ತುತ್ತಿದ್ದೀರಿ? ರಿಟ್ ಅರ್ಜಿಯಲ್ಲಿ ತೀರ್ಪಿನ ಮರುಪರಿಶೀಲನೆಯನ್ನು ಮಾಡಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿಲ್ಲವೇ? ಹಾಗಾದರೆ, ದಂಡವನ್ನು ಎದುರಿಸಲು ಸಿದ್ದರಾಗಿರಿ ಎಂದು ನ್ಯಾ.ಸೂರ್ಯಕಾಂತ್, ಜೈರಾಮ್ ರಮೇಶ್ ಅವರಿಗೆ ಎಚ್ಚರಿಕೆಯನ್ನು ನೀಡಿದೆ.
ನ್ಯಾಯಾಲಯದ ವಾರ್ನಿಂಗ್ ನಂತರ ಜೈರಾಮ್ ರಮೇಶ್ ಪರ ವಕೀಲರು ಅರ್ಜಿಯನ್ನು ಹಿಂಪಡೆಯುವುದಾಗಿ ವಿನಂತಿಸಿಕೊಂಡರು. ಅದಕ್ಕೆ ಅನುಮತಿ ನೀಡಿದ ನ್ಯಾಯಪೀಠ, ಕಾನೂನಿನ ಪ್ರಕಾರ, ಲಭ್ಯವಿರುವ ಪರಿಹಾರವನ್ನು ಪಡೆದುಕೊಳ್ಳುವಂತೆ, ವಕೀಲರಿಗೆ ಸೂಚನೆಯನ್ನು ನೀಡಿತು.
ಜೈರಾಮ್ ರಮೇಶ್ ಪ್ರಕರಣದ ಹಿನ್ನಲೆ ಏನು?
ಯಾವುದೇ ಯೋಜನೆಗಳು ಆರಂಭಗೊಂಡ ನಂತರ ಪರಿಸರ ಪರವಾನಿಗೆ (Environmental Clearance) ಪಡೆಯುವ ಪದ್ದತಿಯನ್ನು ಜೈರಾಮ್ ರಮೇಶ್ ಪ್ರಶ್ನಿಸಿದ್ದರು. ಈ ರೀತಿ ಪರವಾನಿಗೆಯನ್ನು ನೀಡಿದರೆ, ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತದೆ. ಜೊತೆಗೆ, ಆರೋಗ್ಯಕ್ಕೆ ಹಾನಿಯಾಗುವಂತಹ ಮತ್ತು ನಮ್ಮ ಆಡಳಿತ ವ್ಯವಸ್ಥೆಗೆ ಮಾರಕವಾಗುವಂತಹ ಪ್ರಸಂಗಗಳು ಹೆಚ್ಚುತ್ತವೆ ಎನ್ನುವುದು ಜೈರಾಮ್ ರಮೇಶ್ ವಾದವಾಗಿತ್ತು.
ಅರಾವಳಿ ಪರ್ವತ ಶ್ರೇಣಿಯ ಕುರಿತಾದ ಹಳೆಯ ತೀರ್ಪನ್ನು ಡಿಸೆಂಬರ್ 25, 2025ರಂದು ಸುಪ್ರೀಂಕೋರ್ಟ್ ಮರುಪರಿಶೀಲಿಸಿತ್ತು. ಇದನ್ನು ಉದಾಹರಣೆಯಾಗಿ ತೆಗೆದುಕೊಂಡು, ಪರಿಸರ ಪರವಾನಿಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್’ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದು ಜೈರಾಮ್ ರಮೇಶ್ ಟ್ವೀಟ್ (ಎಕ್ಸ್) ಮಾಡಿದ್ದರು.
ಕೇಂದ್ರ ಸರ್ಕಾರ ರೂಪಿಸಿರುವ ಕಾನೂನು ಏನು ಹೇಳುತ್ತದೆ?

  • ಯಾವುದೇ ಯೋಜನೆ ಆರಂಭಿಸುವ ಮುನ್ನ ಪರಿಸರ ಪರವಾನಿಗೆ ಪಡೆಯುವುದನ್ನು ಕೇಂದ್ರ ಸರ್ಕಾರ, 2006ರಲ್ಲಿ ಕಡ್ಡಾಯ ಮಾಡಿತ್ತು. ಆದಾಗ್ಯೂ, 2017 ಮತ್ತು 2021ರ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಅನುಮತಿ ಇಲ್ಲದೇ ಆರಂಭವಾಗಿರುವ ಕೆಲವು ಯೋಜನೆಗಳಿಗೆ ಷರತ್ತುಬದ್ದ ಪೂರ್ವಾನ್ವಯ ಪರವಾನಿಗೆ ಪಡೆಯಲು ಕೇಂದ್ರ ಸರ್ಕಾರ ಅವಕಾಶವನ್ನು ನೀಡಿತ್ತು.
  • ಆದರೆ, ಮೇ 2025ರಲ್ಲಿ ಕೇಂದ್ರ ಸರ್ಕಾರದ ಪರಿಷ್ಕೃತ ಅನುಮೋದನೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಮುನ್ಸೂಚನೆಯಿಲ್ಲದೇ ಆರಂಭವಾಗುವ ಯಾವುದೇ ಯೋಜನೆಗಳು ಕಾನೂನುಬದ್ದವಾಗಿ ಇರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತ್ತು.
  • ನವೆಂಬರ್ 2025ರಲ್ಲಿ ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಮರುಪರಿಶೀಲಿಸಿತ್ತು. ಕ್ರೆಡಾಯ್ (CREDAI) ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಸುಪ್ರೀಂಕೋರ್ಟ್, ತನ್ನ ಹಿಂದಿನ ತೀರ್ಪನ್ನು ಸಡಿಸಿಲಿಸಿ ಪೂರ್ವಾನ್ವಯ ಪರವಾನಿಗೆ ಸಿಸ್ಟಂ ಅನ್ನು ಮತ್ತು ಜಾರಿಗೆ ತರಲು ಕೋರ್ಟ್ ಸೂಚಿಸಿತ್ತು. ಇದನ್ನು, ಜೈರಾಮ್ ರಮೇಶ್, ಪ್ರಶ್ನಿಸಿದ್ದರು.

ಗಿಲ್ಲಿ ನಟ ಜೊತೆ ಲವ್ ಬಗ್ಗೆ ಕಾವ್ಯಾ ಶೈವ ಹೇಳಿದ್ದೇನು? ;ವೈರಲ್ ವಿಡಿಯೊ ನೋಡಿ

TAGGED:Supreme Court whips Congress leader Jairam Ramesh
Share This Article
Facebook Twitter Copy Link Print
Previous Article ಗಿಲ್ಲಿ ನಟ ಜೊತೆ ಲವ್ ಬಗ್ಗೆ ಕಾವ್ಯಾ ಶೈವ ಹೇಳಿದ್ದೇನು? ;ವೈರಲ್ ವಿಡಿಯೊ ನೋಡಿ
Next Article ಮತಾಂತರದಿಂದ ಜಾತಿ ಬದಲಾಗಲ್ಲ : ಹೈಕೋರ್ಟ್ ತೀರ್ಪು

Popular Posts

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read

ಕಡ್ಡಾಯ ಗ್ರಾಮೀಣ ಸೇವೆಗೆ ಹಾಜರಾಗದ 450ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿಗೆ 15 ಲಕ್ಷ ರೂ. ದಂಡ!

1 Min Read

ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು ಮೋಟಾರ್ ಅಪಘಾತವಲ್ಲ : ಸುಪ್ರೀಂ ಕೋರ್ಟ್ ತೀರ್ಪು

1 Min Read

ಶಿಗೆಲ್ಲೋಸಿಸ್ ಸೋಂಕಿನ ಭೀತಿ: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್

1 Min Read

You Might Also Like

ದೇಶಪ್ರಮುಖ

ಅದೃಷ್ಟದ ಬಾಗಿಲು ತೆರೆದ ಲಾಟರಿ : ₹1,000 ಸಾಲ ಕೊಟ್ಟ ಸ್ನೇಹಿತನಿಗೆ ₹1 ಕೋಟಿ ಉಡುಗೊರೆ

2 Min Read
ದೇಶಪ್ರಮುಖ

ವರ್ಕ್ ಫ್ರಮ್ ಹೋಮ್’ ಓಕೆ, ಆದರೆ ಮನೆಯಲ್ಲಿ ಕೂತು ಕೆಲಸ ಮಾಡುವಂತಿಲ್ಲ ‘ಜಿಪಿಎಸ್ ನಿಯಮ’ಕ್ಕೆ ಉದ್ಯೋಗಿಗಳು ಶಾಕ್!

2 Min Read
ದೇಶಪ್ರಮುಖ

Jaspal Rana ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read

Social Networks

Facebook-f Instagram Twitter
Welcome Back!

Sign in to your account

Lost your password?