https://youtube.com/shorts/s_4DpSB4DuI?si=4AZmgba8KEPzCEfP
Subscribe ನ್ಯೂಸಿಕ್ಸ್ ಕನ್ನಡ
newsics.com
ಹೋಟೆಲ್‌ಗೆ ಹೋದಾಗ ಕಾಫಿ ತಿಂಡಿ ತಿಂದು ಬಿಲ್ ಪೇ ಮಾಡಿ ಬರುವುದು ವಾಡಿಕೆ ಇನ್ನು ಗೆಳೆಯರೊಂದಿಗೆ ಕಾಫಿ ಕುಡಿದಾಗ ಒಂದೈದು ಹತ್ತು ಹದಿನೈದು ನಿಮಿಷ ನಗುನಗುತ್ತಾ ಮಾತನಾಡುತ್ತಾ ಕಾಫಿ ತಿಂಡಿ ತಿಂದು ಹರಟೆ ಹೊಡೆದು ಮರಳುತ್ತೇವೆ ಆದರೆ ಗಂಟೆ ಗಟ್ಟಲೆ ಹರಟೆ ಹೊಡೆಯುತ್ತಾ ಟೇಬಲ್ ಮುಂದೆ ಕುಳಿತರೆ ಅದು ಹೋಟೆಲ್ ಯಜಮಾನನಿಗೆ ಆರ್ಥಿಕ ನಷ್ಟವನ್ನುಂಟು ಮಾಡುವುದು ಖಂಡಿತ.
ಹೀಗಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಗ್ರಾಹಕರು ಗಂಟೆಗಟ್ಟಲೆ ಕೂತು ಕಾಲಹರಣ ಮಾಡುತ್ತಿದ್ದರೆ, ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಅದಕ್ಕೆ ದಂಡ ಅಥವಾ ಟೇಬಲ್ ಚಾರ್ಜ್ ವಿಧಿಸುವ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.ಇದು ಸರ್ಕಾರಕ್ಕೆ ಪತ್ರ ಬರೆದು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಹೊಸ ನಿಯಮದ ಬಗ್ಗೆ ನಗರದಲ್ಲಿ ಚರ್ಚೆ ಜೋರಾಗಿದೆ.
ಬೆಂಗಳೂರಿನಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಇವುಗಳಲ್ಲಿ ಬಹುತೇಕ ಸಣ್ಣ ಮತ್ತು ಮಧ್ಯಮ ವರ್ಗದ ಹೋಟೆಲ್‌ಗಳು. ಇಲ್ಲಿಗೆ ಬರುವ ಗ್ರಾಹಕರು ತಿಂಡಿ ಅಥವಾ ಕಾಫಿ ಆರ್ಡರ್ ಮಾಡಿ ಗಂಟೆಗಟ್ಟಲೆ ಕೂರುತ್ತಾರೆ. ಮೀಟಿಂಗ್, ರಾಜಕೀಯ ಚರ್ಚೆಗಳು, ಸ್ನೇಹಿತರೊಂದಿಗೆ ಹರಟೆ, ಇವೆಲ್ಲವೂ ಹೋಟೆಲ್ ಟೇಬಲ್‌ಗಳ ಮೇಲೆ ನಡೆಯುತ್ತವೆ. ಆದರೆ ಇದರಿಂದ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಟೇಬಲ್ ಆಕ್ರಮಣವಾಗಿ ಇತರ ಗ್ರಾಹಕರು ಬರಲು ಸಾಧ್ಯವಾಗದೆ ಇರುತ್ತದೆ. ವ್ಯವಹಾರ ಕಡಿಮೆಯಾಗುತ್ತದೆ ಎಂಬುದು ಅವರ ದೂರು ಆಗಿದೆ.
ಹೋಟೆಲ್ ಮಾಲೀಕರ ಸಂಘದ ಪ್ರಕಾರ, ಈ ಸಮಸ್ಯೆಗೆ ಪರಿಹಾರವಾಗಿ ಪಾರ್ಕಿಂಗ್ ಚಾರ್ಜ್ ನಂತೆ ಟೇಬಲ್ ಚಾರ್ಜ್ ವಿಧಿಸುವ ಯೋಚನೆ ಇದೆ. ಉದಾಹರಣೆಗೆ, ಒಂದು ಗಂಟೆಗಿಂತ ಹೆಚ್ಚು ಕೂತರೆ ಪ್ರತಿ ಗಂಟೆಗೆ 1000 ರೂಪಾಯಿ ದಂಡ ಅಥವಾ ಚಾರ್ಜ್. ಕೆಲವು ಹೋಟೆಲ್‌ಗಳಲ್ಲಿ ಈಗಾಗಲೇ “ಇಲ್ಲಿ ಮೀಟಿಂಗ್‌ಗಳಿಗೆ ಅವಕಾಶವಿಲ್ಲ. 1 ಗಂಟೆಗಿಂತ ಹೆಚ್ಚು ಕೂತರೆ 1000 ರೂ. ಶುಲ್ಕ” ಎಂಬ ಬೋರ್ಡ್ ಅಳವಡಿಸಲು ಚಿಂತನೆ ನಡೆಸುತ್ತಿದೆ. ಸಂಘವು ಇದನ್ನು ಎಲ್ಲಾ ಹೋಟೆಲ್‌ಗಳಲ್ಲಿ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಶೀಘ್ರದಲ್ಲೇ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಕೋರಲು ಸಿದ್ಧತೆ ಮಾಡುತ್ತಿದೆ.
https://www.newsics.com/2026/02/10/muda-scam-lokayukta-investigators-accused-of-accepting-bribes/