https://youtube.com/shorts/s_4DpSB4DuI?si=4AZmgba8KEPzCEfP
Subscribe ನ್ಯೂಸಿಕ್ಸ್ ಕನ್ನಡ
newsics.com
ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಅವರ ಮುದ್ದಿನ ಮಗಳು ಸೋನಂ ಕಪೂರ್, 2007ರಲ್ಲಿ ರಣ್‌ಬೀರ್ ಕಪೂರ್ ಜೊತೆಗೆ ಚಿತ್ರರಂಗಕ್ಕೆ ಪ್ರವೇಶಿಸಿದರು. ತಮ್ಮ ವಿಭಿನ್ನ ಶೈಲಿ, ಫ್ಯಾಷನ್ ಸೆನ್ಸ್ ಮತ್ತು ಅಭಿನಯದಿಂದ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. “ನೀರ್ಜಾ” ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಸಾಕಷ್ಟು ಪ್ರಶಂಸೆಗೂ ಪಾತ್ರರಾದರು.
ಆದರೆ 2017ರ ನಂತರ ಸೋನಂ ಕಪೂರ್ ಚಿತ್ರರಂಗದಿಂದ ಸ್ವಲ್ಪ ದೂರ ಸರಿದರು. 2018ರ ಮೇ 8ರಂದು ತಮ್ಮ ಜೀವನ ಸಂಗಾತಿ ಆನಂದ್ ಅಹುಜಾ ಅವರನ್ನು ವಿವಾಹವಾದ ಬಳಿಕ ಮುಂಬೈಗೆ ಗುಡ್‌ಬೈ ಹೇಳಿ ಲಂಡನ್‌ನಲ್ಲಿ ನೆಲೆಸಿದರು. ಲಂಡನ್ ಜೀವನದ ನಡುವೆ ಕೆಲವೊಮ್ಮೆ ಮಾತ್ರ ಸಿನಿಮಾಗಳಲ್ಲಿ ಕಾಣಿಸಿಕೊಂಡ ಸೋನಂ, ಹೆಚ್ಚಿನ ಸಮಯವನ್ನು ಕುಟುಂಬ ಜೀವನಕ್ಕೆ ಮೀಸಲಿಟ್ಟಿದ್ದಾರೆ.
2022ರಲ್ಲಿ ಸೋನಂ ಕಪೂರ್ ಅವರಿಗೆ ಗಂಡು ಮಗು ಜನಿಸಿತು. ಮಗುವಿಗೆ ಅವರು ವಾಯು ಎಂದು ನಾಮಕರಣ ಮಾಡಿದ್ದಾರೆ. ಈಗ ಎರಡನೇ ಬಾರಿಗೆ ಅವರು ತಾಯಿ ಆಗುತ್ತಿದ್ದಾರೆ.
ಈಗ ತಮ್ಮ 40ನೇ ವರ್ಷದಲ್ಲಿ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಸೋನಂ ಕಪೂರ್ ಅವರ ಸೀಮಂತ ಶಾಸ್ತ್ರ ನಿನ್ನೆ (ಫೆಬ್ರವರಿ 8) ನೆರವೇರಿದ್ದು ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸೀಮಂತ ಶಾಸ್ತ್ರದಲ್ಲಿ ನಿಂಬೆ ಹಸಿರು ಬಣ್ಣದ ಲೆಹೆಂಗಾ ಹಾಗೂ ಅದಕ್ಕೆ ಹೊಂದಿಕೆಯಾಗುವ ಬ್ಲೌಸ್ ಧರಿಸಿ ಸೋನಂ ಮಿಂಚಿದರು. ಚಿನ್ನದ ನೆಕ್ಲೇಸ್, ಭಾರದ ಕಿವಿಯೋಲೆ, ಭಾರವಾದ ಜುಮುಕಿಗಳು, ಆಕರ್ಷಕ ಕಾಕ್‌ಟೈಲ್ ರಿಂಗ್, ಚೈನ್ ರಿಂಗ್ ಹಾಗೂ ಚಿನ್ನದ ಬಳೆ ಧರಿಸಿ ಕಂಗೊಳಿಸುತ್ತಿದ್ದರು.
https://www.instagram.com/p/DUjJHUPgJnC/?img_index=4&igsh=MWJ1ZDh2cG91NnhzbQ==
https://www.newsics.com/2026/02/10/no-more-dakshina…ings-in-tirupati/