https://youtube.com/shorts/j6ilMdnEwVU?si=zmhmirtwo-4Y6IAU
Subscribe ನ್ಯೂಸಿಕ್ಸ್ ಕನ್ನಡ
newsics.com
ವಿದ್ಯೆ ಕಲಿಸುವ ಶಾಲೆಯನ್ನು ದೇಗುಲ ಅಂತಾನೂ ಕರೀತಾರೆ. ನಮ್ಮ ತಲೆಯಲ್ಲಿ ಜ್ಞಾನದ ಬೀಜ ಬಿತ್ತಿ, ಅಕ್ಷರ ಕಲಿಸುವ ಶಿಕ್ಷಕರು ಗುರು ಸಮಾನರು. ಅಂತಹ ಶಿಕ್ಷಣವನ್ನು ಬೋಧಿಸಲು ಇರುವ ಗೂಡು ಅಂದರೆ ಶಾಲೆ ದೇಗುಲಕ್ಕೆ ಸಮಾನ ಅನ್ನೋ ಮಾತಿದೆ. ಆದರೆ ಗುರು ಸಮಾನರಾದ ಶಿಕ್ಷಕ ದೇವಾಲಯಕ್ಕೆ ಸಮಾನವಾದ ಶಾಲೆಯಲ್ಲೇ ಮಾಡಬಾರದ ಕೆಲಸ ಮಾಡಿ ತಗ್ಲಾಕ್ಕೊಂಡಿರುವ ಘಟನೆ ನಡೆದಿದೆ.
ಅಂಥಹದೇ ಘಟನೆ ಸಾಗರದಲ್ಲಿ ನಡೆದಿದೆ. , ಆಶರ್ಶ್ ಎಂ ಆರ್ ಎನ್ನುವ ಅಧ್ಯಾಪಕರೊಬ್ಬರು ಈ ರೀತಿ ನಡೆದುಕೊಂಡಿದ್ದಾರೆ.ಈ ಹಿಂದೆ ಆದರ್ಶ್ ಎನ್ನುವವರು ಶಿರಸಿಯ ಕೊಳಗಿಬೀಸ್ ಕಾಲೇಜಿನ ವಿದ್ಯಾರ್ಥಿಯೊಂದಿಗೆ ಚಕ್ಕಂದವಾಡಿ ಸಿಕ್ಕಿಬಿದ್ದು ಹೊಡೆತ ತಿಂದಿದ್ದರು. ಆಗಲೂ ಇವರಿಗೆ ಥಳಿಸಲಾಗಿತ್ತು. ಆಗ ಅವರನ್ನು ಬೇರೆ ಕಾಲೇಜಿಗೆ ವರ್ಗಾಯಿಸಲಾಗಿತ್ತು. ಈಗ ಸಾಗರದ ಕಾಲೇಜುವೊಂದರಲ್ಲಿ ಮುಸ್ಲಿಂ ಯುವತಿ ಜೊತೆ ಚಕ್ಕಂದವಾಡಿದ್ದು, ಯುವಕರ ಗುಂಪೊಂದು ಹೊಡೆದ ವಿಡಿಯೋ ವೈರಲ್ ಆಗ್ತಿದೆ.
ಮಗಳ ವಯಸ್ಸಿನ ಹುಡುಗಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಒಂದಿಷ್ಟು ಯುವಕರು ಸಿಟ್ಟಿನಿಂದ ಆದರ್ಶ್ ಎಂ ಆರ್ ಎಂಬ ಅಧ್ಯಾಪಕನಿಗೆ ಹೊಡೆದಿದ್ದಾರೆ. ವಿಡಿಯೋದಲ್ಲಿ ಆದರ್ಶ್ ಮಾತ್ರ ಮುಖವನ್ನು ತೋರಿಸುತ್ತಿಲ್ಲ. ಯುವಕರು ಬಾಯಿಗೆ ಬಂದಹಾಗೆ ಬೈದಾಗಲೂ ಅವರು ಮುಖ ಮುಚ್ಚಿಕೊಂಡಿದ್ದಾರೆ. ಅವರ ಮುಖವನ್ನು ವಿಡಿಯೋದಲ್ಲಿ ಬರುವ ಹಾಗೆ ಮಾಡಬೇಕು ಎಂದು ಯುವಕರು ಒದ್ದಾಡಿದ್ದಾರೆ. ಆದರೂ ಕೂಡ ಆದರ್ಶ್ ಮಾತ್ರ ಮುಖವನ್ನು ತೋರಿಸಲು ಬಿಟ್ಟಿಲ್ಲ. ಸದ್ಯ ಈ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.