Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > Health care ನಿಮ್ಮ ಮುಖ ಫಳಫಳ ಹೊಳೆಯಬೇಕೇ? ರಾತ್ರಿ ಮಲಗುವ ಮೊದಲು ಇದನ್ನು ಮುಖಕ್ಕೆ ಹಚ್ಚಿ
ಪ್ರಮುಖಲೈಫ್‌ಸ್ಟೈಲ್ಸೌಂದರ್ಯ

Health care ನಿಮ್ಮ ಮುಖ ಫಳಫಳ ಹೊಳೆಯಬೇಕೇ? ರಾತ್ರಿ ಮಲಗುವ ಮೊದಲು ಇದನ್ನು ಮುಖಕ್ಕೆ ಹಚ್ಚಿ

Share
2 Min Read
SHARE

https://youtube.com/shorts/kv9in5qxZnE?si=K7cL1gM5boVuCw4n

Subscribe ನ್ಯೂಸಿಕ್ಸ್ ಕನ್ನಡ

newsics.com

ದಿನವಿಡೀ ಕೆಲಸ, ಧೂಳು ಮತ್ತು ಬೆವರು ನಮ್ಮ ಮುಖಗಳನ್ನು ಮಂದಗೊಳಿಸಬಹುದು. ವಿಶೇಷವಾಗಿ ಕೆಲಸದಿಂದ ಹಿಂತಿರುಗಿದ ನಂತರ ಅಥವಾ ದೀರ್ಘ ದಿನದ ಮನೆಕೆಲಸಗಳ ನಂತರ, ಕನ್ನಡಿಯಲ್ಲಿ ನೋಡಿದಾಗ ಆಗಾಗ್ಗೆ ಒಣ ಮತ್ತು ನಿರ್ಜೀವ ಮುಖವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ನಮ್ಮ ಚರ್ಮದ ಎಲ್ಲಾ ಹೊಳಪು ಮಾಯವಾಗಿದೆ ಎಂದು ಭಾಸವಾಗುತ್ತದೆ. ಆದ್ದರಿಂದ ಮಲಗುವ ಮುನ್ನ ನಮ್ಮ ಮುಖಕ್ಕೆ ಸ್ವಲ್ಪ ಹೆಚ್ಚುವರಿ ಆರೈಕೆ ನೀಡುವುದು ಅತ್ಯಗತ್ಯ.ಪ್ರತಿಯೊಂದು ದಿನವನ್ನು ಖುಷಿಯಾಗಿ ಕಳೆಯಬೇಕು ಎಂದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದಕ್ಕೆ ಬೇಕಾದ ತಯಾರಿ ಮಾಡಿ ಕೊಳ್ಳಬೇಕು ಅಷ್ಟೇ. ಹಾಗಾದರೆ ಏನು ಮಾಡಬಹುದು ಎಂದು ನೀವು ಕೇಳಬಹುದು.

ನಿಮಗಾಗಿ ಕೆಲವು ಟಿಪ್ಸ್ ಕೊಡುತ್ತೇವೆ. ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಮುಖ ಕೇವಲ ನೀವು ಮಾತ್ರವಲ್ಲ ಬೇರೆಯವರು ಕೂಡ ಇಷ್ಟಪಟ್ಟು ನೋಡುವಂತಿರ ಬೇಕು ಎಂದರೆ ಈ ಮೂರು ವಸ್ತುಗಳನ್ನು ನೀವು ಮರೆಯಬಾರದು.

ಅಲೋವೆರಾ ಜೆಲ್

ರಾತ್ರಿ ಮಲಗುವ ಮುಂಚೆ ಚೆನ್ನಾಗಿ ಮುಖ ತೊಳೆದುಕೊಂಡು ಅಲೋವೆರಾ ಜೆಲ್ ಅನ್ನು ಮುಖದ ಮೇಲ್ಭಾಗದಲ್ಲಿ ನಯವಾಗಿ ಹಚ್ಚಿ ಮಸಾಜ್ ಮಾಡಿ.

ಇಡೀ ರಾತ್ರಿ ಇದನ್ನು ಹಾಗೆ ಬಿಟ್ಟು ಚೆನ್ನಾಗಿ ನಿದ್ರಿಸಿ. ನಿಮ್ಮ ಮುಖದ ಚರ್ಮಕ್ಕೆ ಇದರಿಂದ ಅತ್ಯುತ್ತಮ ಮಾಯಿಶ್ಚರೈಸೇಷನ್ ಸಿಕ್ಕಂತಾಗುತ್ತದೆ ಮತ್ತು ಮುಖದ ಮೇಲಿನ ಮಚ್ಚೆಗಳು ಸಹ ದೂರವಾಗುತ್ತವೆ.

ಹಸಿಯಾದ ಹಾಲು

ಹಸಿಯಾದ ಹಾಲು ತನ್ನದೇ ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಇದರಲ್ಲಿ ಲ್ಯಾಕ್ಟಿಕ್ ಆಸಿಡ್ ಕೂಡ ಒಂದು. ಚರ್ಮದ ಹೊಳಪನ್ನು ನಿರೀಕ್ಷೆಗಿಂತ ಹೆಚ್ಚು ಕಾಪಾಡುವ ಕೆಲಸವನ್ನು ಹಸಿಹಾಲು ಮಾಡುತ್ತದೆ.

ಇದಕ್ಕಾಗಿ ನೀವು ಒಂದು ಟೇಬಲ್ ಚಮಚ ಹಸಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿ ಉಂಡೆಗಳನ್ನು ಡಿಪ್ ಮಾಡಿ ನಿಮ್ಮ ಮುಖದ ಚರ್ಮದ ಭಾಗದಲ್ಲೆಲ್ಲಾ ಇದನ್ನು ಅನ್ವಯಿಸಿಕೊಳ್ಳಬೇಕು.

ಸ್ವಲ್ಪ ಹೊತ್ತು ಬಿಟ್ಟು ಅದು ಒಣಗಿದ ನಂತರ ಮತ್ತೆ ಅನ್ವಯಿಸಿ. ರಾತ್ರಿ ಮಲಗುವ ಮುಂಚೆ ಮಾಡುವ ಈ ಪ್ರಕ್ರಿಯೆಯನ್ನು ಪ್ರತಿದಿನ ಮುಂದುವರೆಸಿ ಮತ್ತು ಬೆಳಗ್ಗೆ ಎದ್ದ ತಕ್ಷಣ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಬಾದಾಮಿ ಎಣ್ಣೆ

ಮುಖದ ಮೇಲೆ ಒಂದು ವೇಳೆ ಯಾವುದಾದರು ಕಪ್ಪು ಮಚ್ಚೆ ಇದ್ದರೆ ಸಾಕು ಅದು ನಿಮ್ಮ ಮುಖದ ಅಂದವನ್ನು ಸಾಧ್ಯವಾದಷ್ಟು ಹಾಳು ಮಾಡಿಬಿಡುತ್ತದೆ.

ಇನ್ನು ಕಣ್ಣುಗಳ ಕೆಳಭಾಗದಲ್ಲಿ ಒಂದು ವೇಳೆ ಡಾರ್ಕ್ ಸರ್ಕಲ್ಸ್ ಇದ್ದರಂತೂ ಮುಖದ ಅಂದ ಅಂದುಕೊಂಡಂತೆ ಇರುವುದಿಲ್ಲ.

ಹೀಗಾಗಿ ವಿಟಮಿನ್ ಇ ಅಂಶ ಹೆಚ್ಚಾಗಿರುವ ಬಾದಾಮಿ ಎಣ್ಣೆಯನ್ನು ಮೂರ್ನಾಲ್ಕು ತೊಟ್ಟು ಕೈಯಲ್ಲಿ ಹಾಕಿಕೊಂಡು ಮುಖಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ.

ಇದು ಸುಕ್ಕುಗಟ್ಟಿದ ಚರ್ಮವನ್ನು ಸರಿಪಡಿಸುವುದು ಮಾತ್ರವಲ್ಲ, ಮುಖದ ಅಂದವನ್ನು ವೃದ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

https://www.newsics.com/2026/02/07/6-people-died-on-the-spot-after-a-container-collided-with-a-bus/

TAGGED:Want your face to glow?: Apply this on your face before going to bed at night.
Share This Article
Facebook Twitter Copy Link Print
Previous Article ಬಸ್ ಗೆ ಕಂಟೇನರ್ ಡಿಕ್ಕಿಯಾಗಿ 6 ಮಂದಿ ಸ್ಥಳದಲ್ಲೇ ಸಾವು
Next Article ಗರ್ಭಪಾತ ಮಹಿಳೆಯ ವೈಯಕ್ತಿಕ ಹಕ್ಕು – ಸುಪ್ರೀಂಕೋರ್ಟ್

Popular Posts

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?