https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ತಂದೆಯೊಬ್ಬ ಹಸಿವಿನಿಂದ ಆಹಾರಕ್ಕಾಗಿ ಅಳುತ್ತಿದ್ದ 5 ವರ್ಷದ ಮಗಳಿಗೆ ತನ್ನ ಬಳಿಯಿದ್ದ ಆಲ್ಕೋಹಾಲ್ ಕುಡಿಸಿ, ಕೆತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಂಜಾಬ್ನ ಜಲಂಧರ್ನಲ್ಲಿ ನಡೆದಿದೆ.
ಆರೋಪಿ ಅರವಿಂದ್ನನ್ನು ಬಂಧಿಸಲಾಗಿದೆ. ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ಅರವಿಂದ್ ತನ್ನ ಹಸಿದ ಮತ್ತು ಅಳುತ್ತಿದ್ದ ಮಗಳ ಬಾಯಿಗೆ ಆಲ್ಕೋಹಾಲ್ ಸುರಿದು ಅವಳನ್ನು ಸುಮ್ಮನಾಗಿಸಲು ಪ್ರಯತ್ನಿಸಿದನು. ಆದರೂ ಆಕೆ ಅಳತೊಡಗಿದಾಗ ಕೋಪದಿಂದ ಆಕೆಯನ್ನು ನೆಲಕ್ಕೆ ಎಸೆದನು. ಆದರೂ ಅವಳು ಅಳುತ್ತಲೇ ಇದ್ದಾಗ, ಅವಳ ಕತ್ತು ಹಿಸುಕಿದನು. ಇದರಿಂದಾಗಿ ಅವಳು ತಕ್ಷಣವೇ ಸಾವನ್ನಪ್ಪಿದ್ದಾಳೆ.
ಆರೋಪಿಗೆ ಸರಿಯಾದ ಕೆಲಸವಿರಲಿಲ್ಲ. ಕುಡಿತದ ಅಮಲಿನಲ್ಲಿದ್ದಾಗ ಆಗಾಗ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ.
https://www.newsics.com/2026/02/06/8-people-including-young-actress-co-director-arrested-for-drugs/