https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಚೆನ್ನೈ: ಡ್ರಗ್ಸ್ ಸಮೇತ ಯುವ ನಟಿ ಅಂಜು ಕೃಷ್ಣ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ಬಂಧಿತರಲ್ಲಿ ನಟಿ ಅಂಜು ಕೃಷ್ಣ, ತಮಿಳು ಚಿತ್ರರಂಗದ ಸಹಾಯಕ ನಿರ್ದೇಶಕಿ ವಿನ್ಸಿ ನಿವೇದಾ ಹಾಗೂ ಆರು ಯುವಕರು ಸೇರಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಈ ಎಂಟು ಮಂದಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದಾರೆ.
ನಟಿ ಅಂಜು ಕೃಷ್ಣ, ಮಲಯಾಳಂ ನಟ ಜೋಜು ನಾಯಕರಾಗಿದ್ದ ‘ಆರೋ’ ಸಿನಿಮಾದಲ್ಲಿ ನಟಿಸಿದ್ದರು.
ಪೊಲೀಸರು ರಾತ್ರಿ ಸಮಯದಲ್ಲಿ ರೂಟೀನ್ ಚೆಕಿಂಗ್ ನಡೆಸುತ್ತಿದ್ದಾಗ ಈ ಗುಂಪಿನ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದರು. ವಾಹನದೊಳಗೆ ಡ್ರಗ್ಸ್ ಇರುವುದು ಪತ್ತೆಯಾದ ತಕ್ಷಣ ಎಲ್ಲರನ್ನೂ ವಶಕ್ಕೆ ಪಡೆಯಲಾಯಿತು. ಈ ಪ್ರಕರಣದಲ್ಲಿ ಯಾವ ಮಾದಕ ವಸ್ತುಗಳು, ಎಷ್ಟು ಪ್ರಮಾಣದಲ್ಲಿ ಸಿಕ್ಕಿವೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಪ್ರಸ್ತುತ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇದರ ಹಿಂದಿನ ಜಾಲ, ಪೂರೈಕೆದಾರರು ಯಾರು ಎಂಬುದನ್ನು ಪತ್ತೆ ಮಾಡಲು ತನಿಖೆ ತೀವ್ರಗೊಂಡಿದೆ.