Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗಂಡನ ಸಮಾಧಿ ಮೇಲೆಯೇ 8 ತಿಂಗಳು ಮಲಗುತ್ತಿದ್ದ ಪತ್ನಿ; ಆಗಿದ್ದೇನು?
ದೇಶಪ್ರಮುಖ

ಗಂಡನ ಸಮಾಧಿ ಮೇಲೆಯೇ 8 ತಿಂಗಳು ಮಲಗುತ್ತಿದ್ದ ಪತ್ನಿ; ಆಗಿದ್ದೇನು?

Share
2 Min Read
SHARE

https://youtube.com/shorts/2Z4I0oFUbOQ?si=GQh11tLqq7tz2UFd

Subscribe ನ್ಯೂಸಿಕ್ಸ್ ಕನ್ನಡ

newsics.com

ಸುಮಾರು 8 ತಿಂಗಳ ಕಾಲ ತನ್ನ ಗಂಡನ ಸಮಾಧಿ ಪಕ್ಕದಲ್ಲೇ ವಾಸವಿದ್ದ 55 ವರ್ಷದ ರಿಯಾ ಹೋಮ್ಸ್, ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಮತ್ತೆ ಹೊಸ ಜೀವನ ಆರಂಭಿಸಿರುವ ಘಟನೆ ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಲ್ಲಿ ನಡೆದಿದೆ.

2020ರಲ್ಲಿ ಪತಿ ಎಡ್ಡಿ ತೀರಿಕೊಂಡ ನಂತರ ರಿಯಾ ತೀವ್ರ ಖಿನ್ನತೆಗೆ ಜಾರಿದ್ದರು. ಕೆಲಸ ಕಳೆದುಕೊಂಡು, ಮನೆ ಬಾಡಿಗೆ ಕಟ್ಟಲಾಗದೆ ಮನೆಯಿಂದ ಹೊರಬಿದ್ದರು. ಹೋಗಲು ಬೇರೆ ಜಾಗವಿಲ್ಲದ ಕಾರಣ, ಕೊನೆಗೆ ಪತಿಯ ಸಮಾಧಿಯ ಮೇಲೆಯೇ ಪ್ಲಾಸ್ಟಿಕ್ ಶೀಟ್ ಹಾಸಿ ಮಲಗಲು ಶುರುಮಾಡಿದರು. ಹಗಲಿನಲ್ಲಿ ಚರ್ಚ್‌ ಮತ್ತು ಹೋಟೆಲ್‌ಗಳಲ್ಲಿ ಸ್ವಯಂಸೇವೆ ಮಾಡುತ್ತಿದ್ದ ರಿಯಾ, ರಾತ್ರಿಯಾಗುತ್ತಿದ್ದಂತೆ ಯಾರಿಗೂ ತಿಳಿಯದಂತೆ ಸ್ಮಶಾನಕ್ಕೆ ವಾಪಸ್ ಬರುತ್ತಿದ್ದರು. ಯಾರ ಬಳಿಯೂ ಸಹಾಯ ಕೇಳದೆ, ದೂರು ಹೇಳದೆ ಸುಮಾರು 8 ತಿಂಗಳು ಹೀಗೆಯೇ ಬದುಕು ಸಾಗಿಸಿದ್ದರು.
ಸತ್ಯ ತಿಳಿದ ತಕ್ಷಣ ಅಧಿಕಾರಿ ಜಾಮಿ, ಆಕೆಗಾಗಿ ಹೋಟೆಲ್‌ನಲ್ಲಿ ಒಂದು ರೂಮ್ ಬುಕ್ ಮಾಡಿದರು. ನಂತರ, ‘GoFundMe’ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದರು. ಇದರಲ್ಲಿ ಜನರು 27,000 ಡಾಲರ್‌ಗೂ ಹೆಚ್ಚು (ಸುಮಾರು 22 ಲಕ್ಷ ರೂಪಾಯಿ) ಹಣವನ್ನು ಸಂಗ್ರಹಿಸಿಕೊಟ್ಟರು. ಲೆಮೊಯ್ನ್ ಕಾಲೇಜಿನ ಅಧ್ಯಕ್ಷೆ ಲಿಂಡಾ ಲೆಮುರಾ ಅವರು ರಿಯಾಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಟ್ಟರು.
ಮನೆ ಇಲ್ಲದವರಿಗೆ ಸೂರು ಒದಗಿಸುವ ಸಂಸ್ಥೆಯೊಂದರ ಸಹಾಯದಿಂದ, 2026ರ ಜನವರಿ 5ರಂದು ರಿಯಾ ಸಂಪೂರ್ಣ ಸುಸಜ್ಜಿತವಾದ ತಮ್ಮ ಹೊಸ ಮನೆಗೆ ಕಾಲಿಟ್ಟರು. “ಇದೆಲ್ಲಾ ದೇವರೇ ನಿರ್ಧರಿಸಿದ್ದು. ನನಗೆ ಸಹಾಯ ಬೇಕಾದಾಗ ದೇವರು ಜಾಮಿಯನ್ನು ನನ್ನ ಬಳಿ ಕಳುಹಿಸಿಕೊಟ್ಟರು,” ಎಂದು ರಿಯಾ ಕೃತಜ್ಞತೆಯಿಂದ ಹೇಳುತ್ತಾರೆ. ಇಂದು ಅಧಿಕಾರಿ ಜಾಮಿ ಮತ್ತು ರಿಯಾ ಆತ್ಮೀಯ ಸ್ನೇಹಿತರಾಗಿದ್ದಾರೆ.

2025ರ ಡಿಸೆಂಬರ್ 13ರಂದು, ಸಿಕ್ಕಾಪಟ್ಟೆ ಚಳಿ ಇತ್ತು. ಆಗ ರಿಯಾ, ಕೈಯಲ್ಲಿ ಕೆಲವು ಸಾಮಾನುಗಳನ್ನು ಹಿಡಿದು ಒಂದು ಗುಡ್ಡ ಹತ್ತಲು ಕಷ್ಟಪಡುತ್ತಿದ್ದರು. ಇದನ್ನು ಸಿರಾಕ್ಯೂಸ್ ಪೊಲೀಸ್ ಅಧಿಕಾರಿ ಜಾಮಿ ಪಾಸ್ಟೊರೆಲ್ಲೊ ನೋಡಿದರು. ರಿಯಾಳನ್ನು ನೋಡಿ ಮರುಕಪಟ್ಟ ಜಾಮಿ, ತಮ್ಮ ಪೆಟ್ರೋಲಿಂಗ್ ವಾಹನದಲ್ಲಿ ಆಕೆಯನ್ನು ಸ್ಮಶಾನದವರೆಗೆ ಡ್ರಾಪ್ ಮಾಡಿದರು. ದಾರಿಯಲ್ಲಿ ರಿಯಾ, ತಮ್ಮ 26 ವರ್ಷಗಳ ದಾಂಪತ್ಯ ಮತ್ತು ಪತಿ ಎಡ್ಡಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಆದರೆ, ಆಕೆ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂಬ ಸತ್ಯ ಜಾಮಿಗೆ ಆಗ ತಿಳಿದಿರಲಿಲ್ಲ.
ಕ್ರಿಸ್‌ಮಸ್‌ಗೂ ಮುನ್ನ, ಪೊಲೀಸ್ ಇಲಾಖೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಜಾಮಿಯ ಜೊತೆಗಿನ ರಿಯಾಳ ಫೋಟೋ ಒಂದನ್ನು ಹಂಚಿಕೊಂಡಿತ್ತು. ಈ ಫೋಟೋ ನೋಡಿದ ಸ್ಮಶಾನದ ಸಿಬ್ಬಂದಿಯೊಬ್ಬರು, ರಿಯಾ ಅಲ್ಲಿಯೇ ವಾಸಿಸುತ್ತಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ನಂತರ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಹೊರಬಂದಿದೆ.

https://x.com/MrPitbull07/status/2015672279582277862?ref_src=twsrc%5Etfw%7Ctwcamp%5Etweetembed%7Ctwterm%5E2015672279582277862%7Ctwgr%5E6abf0b39a3beb4ee43263e7690b1e975580c7927%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ಆಯ್ಕೆ

TAGGED:Wife slept on husband's grave for 8 months; what happened?
Share This Article
Facebook Twitter Copy Link Print
Previous Article ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ಆಯ್ಕೆ
Next Article ದೋಷ ನಿವಾರಣೆಯ ಹೆಸರಿನಲ್ಲಿ ಹಲವು ಬಾರಿ ಅತ್ಯಾಚಾರ ಮಾಡಿದ್ದ ಅರ್ಚಕ ಅರೆಸ್ಟ್

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?