https://youtube.com/shorts/Dd-eFU1bWK0?si=BoRbmdRbRABKEN5o
Subscribe ನ್ಯೂಸಿಕ್ಸ್ ಕನ್ನಡ
newsics.com
ಚಿಲ್ಲರೆ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ, ಬಸ್, ಆಟೋ ಹಾಗೂ ಅಂಗಡಿಗಳಲ್ಲಿ ಚಿಲ್ಲರೆ ಹಣಕ್ಕಾಗಿ ಒದ್ದಾಡುವ ಸ್ಥಿತಿ ಈಗಲೂ ಇದೆ. ಡಿಜಿಟಲ್ ಪೇಮೆಂಟ್ ಬಂದ ನಂತರವೂ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.ಆದರೆ ಇನ್ನು ಮುಂದೆ ಎಟಿಎಂಗಳಲ್ಲೇ ನಿಮಗೆ ಬೇಕಾದ ಚಿಲ್ಲರೆ ಹಣ ಕೂಡ ಸಿಗಲಿದೆ.
ಎಟಿಎಂ ಯಂತ್ರಗಳಲ್ಲಿ 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ಲಭ್ಯವಾಗುತ್ತಿದ್ದವು. ಇನ್ನು ಮುಂದೆ 10, 20, 50 ರೂ. ನೋಟುಗಳು ಕೂಡ ಲಭ್ಯವಾಗಲಿದೆ. ಅನೇಕ ಬ್ಯಾಂಕುಗಳು ಈಗಾಗಲೇ ತಮ್ಮ ಎಟಿಎಂ ಯಂತ್ರಗಳಲ್ಲಿ ಈ ಬದಲಾವಣೆ ತರಲು ತಾಂತ್ರಿಕ ಸಿದ್ಧತೆ ಕೈಗೊಂಡಿವೆ.
ವಿಶೇಷವಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಣ್ಣ ನೋಟುಗಳ ಬೇಡಿಕೆ ಹೆಚ್ಚಾಗಿರುವುದರಿಂದ ಬ್ಯಾಂಕುಗಳು ಈ ಕ್ರಮ ಕೈಗೊಂಡಿವೆ. ಇದರಿಂದ ಚಿಲ್ಲರೆಗೆ ಜನ ಪರದಾಡುವುದು ತಪ್ಪಲಿದೆ. ಈಗಿನ ಡಿಜಿಟಲ್ ಪಾವತಿ ಯುಗದಲ್ಲಿಯೂ ದೈನಂದಿನ ಸಣ್ಣಪುಟ್ಟ ವ್ಯವಹಾರಗಳಿಗೆ ನಗದು ಹಣ ಬೇಕಿದೆ. ಅದರಲ್ಲಿಯೂ ಚಿಲ್ಲರೆ ಸಮಸ್ಯೆ ಹೆಚ್ಚಾಗಿರುವುದರಿಂದ ಜನ ಸಾಮಾನ್ಯರು, ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಆರ್.ಬಿ.ಐ. ಇತ್ತೀಚೆಗೆ ಹೊರಡಿಸಿದ ಮಾರ್ಗಸೂಚಿಯಂತೆ ದೇಶಾದ್ಯಂತ ಎಟಿಎಂಗಳಲ್ಲಿ ಸಣ್ಣ ಮುಖಬೆಲೆಯ ನೋಟುಗಳ ಲಭ್ಯತೆ ಹೆಚ್ಚಿಸಲು ಬ್ಯಾಂಕುಗಳಿಗೆ ಸೂಚನೆ ನೀಡಿದ್ದು, ಇದರ ಭಾಗವಾಗಿ ಬ್ಯಾಂಕುಗಳು ಎಟಿಎಂಗಳಲ್ಲಿ ಸಣ್ಣ ನೋಟುಗಳ ತುಂಬಲು ಕ್ರಮ ಕೈಗೊಂಡಿದೆ.
https://www.newsics.com/2026/01/29/how-many-crores-did-border-2-earn-in-5-days-of-its-release/