https://youtube.com/shorts/gtZudXyWr4w?si=JbCq5s1JvHZpv-YS
Subscribe ನ್ಯೂಸಿಕ್ಸ್ ಕನ್ನಡ
newsics.com
ಕಲಬುರಗಿ : ಭಕ್ತನೋರ್ವ ಧ್ಯಾನ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕಲಬುರಗಿಯ ಪ್ರಸಿದ್ಧ ದತ್ತಕ್ಷೇತ್ರ ದೇವಲಗಾಣಗಾಪುರದ ಭೀಮಾ ತೀರದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಅಣ್ಣಾರಾಯ (48) ಎಂಬುವವರೇ ಮೃತಪಟ್ಟ ದುರ್ದೈವಿ. ಇವರು ದತ್ತಾತ್ರೇಯನ ದರ್ಶನ ಪಡೆಯಲು ಗಾಣಗಾಪುರಕ್ಕೆ ಆಗಮಿಸಿದ್ದರು.
ದೇವಲಗಾಣಗಾಪುರದ ಸಂಗಮದ ಬಳಿಯ ಭೀಮಾ ತೀರದಲ್ಲಿ ಅಣ್ಣಾರಾಯ ಅವರು ಬೆಂಚ್ ಮೇಲೆ ಪದ್ಮಾಸನ ಹಾಕಿ ಧ್ಯಾನಕ್ಕೆ ಕುಳಿತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಧ್ಯಾನದ ಮೌನದಲ್ಲೇ ಜೀವ ಹೋಗಿದ್ದರೂ, ಅವರು ಕುಳಿತಿದ್ದ ಭಂಗಿ ಮಾತ್ರ ಬದಲಾಗಿರಲಿಲ್ಲ. ಪ್ರಾಣ ಹೋದರೂ ದೇಹ ಧ್ಯಾನಸ್ಥ ಸ್ಥಿತಿಯಲ್ಲೇ ಇದ್ದದ್ದು ನೆರೆದಿದ್ದವರಲ್ಲಿ ಅಚ್ಚರಿ ಮತ್ತು ನೋವನ್ನುಂಟು ಮಾಡಿದೆ.
https://www.newsics.com/2026/01/26/police-constable-arrested-for-sexually-harassing-college-student/