Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಣೇಶ್ ನಾಯಕಿಯ ಬ್ರೈನ್ ವಾಶ್ ಮಾಡಿ ಮದುವೆಯಾದ ಧರ್ಮ ಗುರು ಯಾರು?
ಕರ್ನಾಟಕಪ್ರಮುಖಮನರಂಜನೆ

ಗಣೇಶ್ ನಾಯಕಿಯ ಬ್ರೈನ್ ವಾಶ್ ಮಾಡಿ ಮದುವೆಯಾದ ಧರ್ಮ ಗುರು ಯಾರು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪ್ರೀತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಗೋಸ್ಕರ ತನ್ನ ವೃತ್ತಿಯನ್ನೇ ತ್ಯಾಗ ಮಾಡಿ ಮುಸ್ಲಿಂ ಧರ್ಮಗುರುವಿನ ಕೈಯನ್ನು ಹಿಡಿದವರು ಸನಾ ಖಾನ್.

ಸನಾ ಖಾನ್ ಅವರು ಮುಫ್ತಿ ಅನಾಸ್ ಸಯದ್ ಅವರನ್ನು ಮದುವೆಯಾದ ನಂತರ, ಅವರ ಪತಿ ಅವರನ್ನು “ಬ್ರೈನ್ ವಾಶ್” ಮಾಡಿ ಚಿತ್ರರಂಗದಿಂದ ಹೊರಬರುವಂತೆ ಮಾಡಿದ್ದಾರೆ ಎಂಬ ಗಾಸಿಪ್‌ಗಳು ಜೋರಾಗಿದ್ದವು. ಈಗ ಈ ಎಲ್ಲಾ ಆರೋಪಗಳಿಗೆ ಸನಾ ಖಾನ್ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಟಿ ರಶ್ಮಿ ದೇಸಾಯಿ ಅವರೊಂದಿಗೆ ಮಾತನಾಡಿದ ಸನಾ, ತಮ್ಮ ಜೀವನದ ಮಹತ್ವದ ತಿರುವುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ನಟಿ ಸನಾ ಖಾನ್ ಅವರಿಗೆ ಕನ್ನಡ ಚಿತ್ರರಂಗದ ನಂಟು ಕೂಡ ಇದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ‘ಕೂಲ್’ ಚಿತ್ರಕ್ಕೆ ಇದೇ ಸನಾ ಖಾನ್ ನಾಯಕಿಯಾಗಿದ್ದರು.ಹು

ಸನಾ ಖಾನ್ ತಮ್ಮ ಮದುವೆಯ ಬಗ್ಗೆ ಮಾತನಾಡುತ್ತಾ, ಆ ದಿನಗಳು ಎಷ್ಟು ರಹಸ್ಯವಾಗಿದ್ದವು ಎಂಬುದನ್ನು ನೆನಪಿಸಿಕೊಂಡರು. “ನಮ್ಮ ಮದುವೆ ನಿಶ್ಚಯವಾದಾಗ ಅದು ಕೇವಲ ನನ್ನ ತಂದೆ-ತಾಯಿಗೆ ಮಾತ್ರ ತಿಳಿದಿತ್ತು. ವರನ ಹೆಸರು ಕೂಡ ಯಾರಿಗೂ ಗೊತ್ತಿರಲಿಲ್ಲ. ನನ್ನ ಮೆಹೆಂದಿ ಕಾರ್ಯಕ್ರಮ ನಡೆಯುವಾಗ ಮೆಹೆಂದಿ ಹಚ್ಚುವ ಕಲಾವಿದೆ ವರನ ಹೆಸರನ್ನು ಕೇಳಿದರು. ಆದರೆ ನಾನು ಅದನ್ನು ಖಾಲಿ ಬಿಡಿ, ಮುಂದಿನ ಬಾರಿ ಬರೆಯೋಣ ಎಂದು ಹೇಳಿದ್ದೆ,” ಎಂದು ಅವರು ಅಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಅವರ ಸ್ವಂತ ಸೋದರ ಸಂಬಂಧಿಗಳಿಗೂ ಈ ಮದುವೆಯ ವಿಷಯ ತಿಳಿದಿರಲಿಲ್ಲವಂತೆ!

ತಮ್ಮ ಪತಿ ಅನಾಸ್ ಸಯದ್ ಅವರ ಬಗ್ಗೆ ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಸನಾ, “ಜನರು ಹೇಳುವಂತೆ ಯಾರೂ ಯಾರನ್ನೂ ಬ್ರೈನ್ ವಾಶ್ ಮಾಡಲು ಸಾಧ್ಯವಿಲ್ಲ. ಈ ಬದಲಾವಣೆ ನನ್ನ ಒಳಗಿನಿಂದ ಬಂದಿದ್ದು. ನಾನು ಚಿತ್ರರಂಗದಲ್ಲಿದ್ದಾಗಲೇ ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತಿದ್ದವು. ನಾನು ಸಂಪೂರ್ಣವಾಗಿ ಬೇರೆ ವ್ಯಕ್ತಿಯಾಗಿ ಬದಲಾಗುತ್ತಿದ್ದೆ. ಇದು ನನ್ನ ಪತಿ ಮಾಡಿದ ಬದಲಾವಣೆಯಲ್ಲ, ಬದಲಾಗಿ ನಾನು ನನಗಾಗಿ ಬಯಸಿದ ಹಾದಿ. ಅವರು ಕೇವಲ ನನಗೆ ಸರಿಯಾದ ಮಾರ್ಗದರ್ಶನ ನೀಡಿದರು ಅಷ್ಟೇ,” ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ತೊರೆಯಲು ಕಾರಣವೇನು ಎಂಬ ಪ್ರಶ್ನೆಗೆ ಸನಾ ಖಾನ್ ಅವರು ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ. “ಒಬ್ಬ ವ್ಯಕ್ತಿಗೆ ಹಣ, ಹೆಸರು, ಕೀರ್ತಿ ಮತ್ತು ಗೌರವ ಎಲ್ಲವೂ ಸಿಗಬಹುದು. ಆದರೆ ಅಂತಿಮವಾಗಿ ಪ್ರತಿಯೊಬ್ಬರೂ ಹುಡುಕುವುದು ಮನಸ್ಸಿನ ಶಾಂತಿಯನ್ನು (Inner Peace). ನನಗೆ ಆ ಶಾಂತಿ ಚಿತ್ರರಂಗದಲ್ಲಿ ಸಿಗಲಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರ ಸರಿಯಿಲ್ಲದಿದ್ದಾಗ ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕಾಲ ಕಳೆದಂತೆ ನನಗೆ ಜೀವನದ ಮೌಲ್ಯಗಳು ಅರ್ಥವಾದವು. ಅದಕ್ಕಾಗಿಯೇ ನಾನು ಈ ಹಾದಿಯನ್ನು ಆರಿಸಿಕೊಂಡೆ,” ಎಂದು ಸನಾ ಭಾವನಾತ್ಮಕವಾಗಿ ನುಡಿದರು.

2020ರ ಆಸು ಪಾಸು ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಚಿತ್ರೋದ್ಯಮ ಹೆಸರು, ಹಣ, ಗೌರವ ಎಲ್ಲವನ್ನು ನೀಡಿದೆ. ಆದರೆ ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದು ಗೊತ್ತಾಯ್ತು. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ ಎಂದು ಹೇಳಿ ಮೇಕಪ್ ಕಳಚಿದರು ಕನ್ನಡದಲ್ಲಿ ”ಕೂಲ್‌” ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿದ್ದ ಸನಾ.

ಟಾಪ್ 6ನಿಂದ ಎಲಿಮಿನೇಟ್ ಆಗಿದ್ದು ಇವರೇ; ಬಿದ್ದ ವೋಟ್ ಇಷ್ಟೇನಾ?

TAGGED:Who is the religious guru who brainwashed Ganesh's heroine and married her?
Share This Article
Facebook Twitter Copy Link Print
Previous Article ಟಾಪ್ 6ನಿಂದ ಎಲಿಮಿನೇಟ್ ಆಗಿದ್ದು ಇವರೇ; ಬಿದ್ದ ವೋಟ್ ಇಷ್ಟೇನಾ?
Next Article ಗಿಲ್ಲಿ ಗೆಲ್ಲದಿದ್ದರೆ ಸುದೀಪ್ ಈ ಜಿಲ್ಲೆಗೆ ಕಾಲಿಡುವಂತಿಲ್ಲ!

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?