Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಿಖ್‌ರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ಕೊಳದಲ್ಲಿ ಅನ್ಯಕೋಮಿನ ವ್ಯಕ್ತಿ ಕಾಲು ಮುಖ ತೊಳೆದು ಉಗುಳಿದ ವಿಡಿಯೋ ಕೋಲಾಹಲ ಸೃಷ್ಟಿಸಿದೆ.
ಸಿಖ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವಾಗ ಸಮುದಾಯದ ಪವಿತ್ರತೆ ಕಾಪಾಡಬೇಕು. ಕನಿಷ್ಠ ಮರ್ಯಾದೆ ಪಾಲಿಸಬೇಕು. ಯಾರಿಗೂ ನೋವಾಗುವಂತೆ ನಡೆದುಕೊಳ್ಳಬಾರದು ಎಂದು SGPC ಹರಿಂದರ್ ಸಿಂಗ್ ಧಮಿ ಹೇಳಿದ್ದಾರೆ.
ಇದೇ ವೇಳೆ ಅನ್ಯಕೋಮಿನ ವ್ಯಕ್ತಿಯ ನಡೆ ಹಾಗೂ ವಿಡಿಯೋ ಕುರಿತು ಆತಂರಿಕ ತನಿಖೆಗೆ ಸೂಚಿಸಿದ್ದಾರೆ. ತಪ್ಪೆಸಗಿ ಬಳಿಕ ಕ್ಷಮೆ ಕೇಳುವುದಲ್ಲ, ಪಾವಿತ್ರ್ಯತೆ ಹಾಳು ಮಾಡಿದರೆ ಪದೇ ಪದೇ ಕ್ಷಮಿಸಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡುವಾಗ ಅಲ್ಲಿನ ಆಚಾರ ವಿಚಾರ, ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಿ, ಅದರಂತೆ ನಡೆದುಕೊಳ್ಳಿ. ಅಲ್ಲಿ ನಿಮ್ಮತನ, ನಿಮ್ಮ ಸಂಪ್ರದಾಯ ಪಾಲಿಸಲು ಸಾಹಸ ಮಾಡಬೇಡಿ ಎಂದು ಹರಿಂದ್ರ ಸಿಂಗ್ ಧಮಿ ಎಚ್ಚರಿಸಿದ್ದಾರೆ.
ಸ್ವರ್ಣ ಮಂಡಳಿ ಆಡಳಿತ ಮಂಡಳಿ, ಸಿಖ್ ಸಮುದಾಯ ಸೇರಿದಂತೆ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಸ್ವರ್ಣಮಂದಿರದಲ್ಲಿ ಕೈ ಕಾಲು ಮುಖ ತೊಳೆದು ನಂಬಿಕೆಗೆ ಘಾಸಿ ಮಾಡಿದ ವ್ಯಕ್ತಿ ಕ್ಷಮೆ ಕೇಳಿದ್ದಾರೆ. ಕ್ಷೇತ್ರದ ಪಾವಿತ್ರ್ಯತೆ ಹಾಳುವ ಮಾಡುವ ಉದ್ದೇಶವಿರಲಿಲ್ಲ. ಭಕ್ತಿಯಿಂದ ಗುರುದ್ವಾರಕ್ಕೆ ಭೇಟಿ ನೀಡಿದ್ದೇನೆ. ಈ ವೇಳೆ ತನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಮನವಿ ಮಾಡಿದ್ದಾನೆ. ಇದೇ ವೇಳೆ ತಾನು ಮತ್ತೆ ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಕ್ಷಮಿಸುವಂತೆ ಕೋರುತ್ತೇನೆ ಎಂದು ಯುವಕ ಪ್ರತಿಕ್ರಿಯಿಸಿದ್ದಾನೆ.