Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದೇಶದಲ್ಲಿ ಜಿಬಿಎಸ್ ಅಂದರೆ ಗುಯಿಲಿನ್-ಬಾರ್ ಸಿಂಡ್ರೋಮ್ ಆತಂಕ ಹುಟ್ಟಿಸಿದೆ.ಇದು ಬಹಳ ವೇಗವಾಗಿ ಅಲ್ಲಿನ ಜನರಿಗೆ ಹರಡುತ್ತಲಿದ್ದು, ಸದ್ಯ ನಮ್ಮ ದೇಶದಲ್ಲಿ ಅಲ್ಲಿಂದ ಬಂದವರ ಬಗ್ಗೆ ಆತಂಕ ಎದುರಾಗಿದೆ.
ರಾಜ್ಯ ಸರ್ಕಾರ ಕೂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೆ ತರಲಾಗಿದ್ದು, ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗುತ್ತಿದೆ.ಇದಕ್ಕೆ ತನ್ನದೇ ಆದ ಲಕ್ಷಣಗಳು ಇರಲಿದ್ದು, ಜನರು ತಮ್ಮ ಆರೋಗ್ಯದ ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಇರಬೇಕು.
ಸಾಮಾನ್ಯವಾಗಿ ಇದರಿಂದ ಮಾಂಸ ಖಂಡಗಳ ದುರ್ಬಲತೆ, ಕೈಕಾಲುಗಳಲ್ಲಿ ಕೆಳಭಾಗದಿಂದ ಶುರುವಾಗಿ ಮೇಲ್ಭಾಗದವರೆಗೆ ಮುಳ್ಳು ಚುಚ್ಚಿದ ಅನುಭವ ಉಂಟಾಗುವುದು, ಕಾಲುಗಳು ಹಿಡಿದು ಕೊಂಡಂತೆ ಆಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ.ಜಿ ಬಿ ಸೋಂಕಿನ ಪ್ರಕರಣಗಳು ಡಿಸೆಂಬರ್‌ನಿಂದ ಮಾರ್ಚ್ ಮತ್ತು ಜುಲೈನಿಂದ ಸೆಪ್ಟೆಂಬರ್‌ನಲ್ಲಿ ಹೆಚ್ಚಾಗಿ ವರದಿಯಾಗುತ್ತವೆ.
ಕಾಲುಗಳಲ್ಲಿ ಜುಮ್ ಎನಿಸುವ ಅನುಭವ, ನಿಶ್ಶಕ್ತಿ ಇವೆಲ್ಲವೂ ಇದರ ಆರಂಭಿಕ ಲಕ್ಷಣಗಳಾಗಿದ್ದು ಇದು ತೋಳುಗಲ್ಲಿ ಕಾಣಿಸಿಕೊಂಡು ದೇಹದ ವಿವಿಧ ಭಾಗಗಳಿಗೂ ಹರಡಬಹುದು. ಇದನ್ನು ಕಡೆಗಣಿಸಿದಲ್ಲಿ ರೋಗಿಯಲ್ಲಿ ಉಸಿರಾಟದ ಸಮಸ್ಯೆ ಕಂಡುಬರಬಹುದು ಹಾಗಾಗಿ ಈ ಸಮಯದಲ್ಲಿ ತುರ್ತು ವೈದ್ಯಕೀಯ ನೆರವು ಅತ್ಯಗತ್ಯವಾಗಿರುತ್ತದೆ.
ಜಿಬಿ ಸಿಂಡ್ರೋಮ್‌ನ್ನು ಪತ್ತೆಹಚ್ಚಲು ರೋಗಿಯ ನರ ಮಂಡಲ ಪರೀಕ್ಷೆ, ಸೆರೆಬ್ರೋ ಸ್ಪೈನಲ್ ದ್ರವ ಪರೀಕ್ಷೆ ಸೇರಿ ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಚಿಕಿತ್ಸೆ ವಿಧಾನವನ್ನು ಅನುಸರಿಸುತ್ತಾರೆ. 99% ಪ್ರಕರಣಗಳಲ್ಲಿ ಈ ರೋಗವನ್ನು ಗುಣಪಡಿಸಬಹುದು ಆದರೆ ರೋಗಿಯು ಗುಣಮುಖವಾಗುವ ಸಮಯ ರೋಗಿಯಿಂದ ರೋಗಿಗೆ ಬೇರೆ ಬೇರೆಯಾಗಿರುತ್ತದೆ. ರೋಗ ಕಾಣಿಸಿಕೊಂಡರೂ ಚಿಕಿತ್ಸೆಗೆ ತಡಮಾಡಿದರೆ ಈ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ.