Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಟಿಸಿಎಸ್ ಕಂಪನಿ ಬಿಟ್ಟು ಅರಣ್ಯ ಇಲಾಖೆ ಸೇರಿದ ಟೆಕ್ಕಿ; ಕಾರಣವೇನು?
ದೇಶಪ್ರಮುಖ

ಟಿಸಿಎಸ್ ಕಂಪನಿ ಬಿಟ್ಟು ಅರಣ್ಯ ಇಲಾಖೆ ಸೇರಿದ ಟೆಕ್ಕಿ; ಕಾರಣವೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜಾರ್ಖಂಡ್‌ನ ದುಮ್ಕಾ ಎಂಬ ಹಳ್ಳಿಯಿಂದ ಬಂದ ಮನೀಶ್ ಕುಮಾರ್ ಕೋಲ್ಕತ್ತಾದಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾದರು.ಆದ್ರೆ, ಟೆಕ್ಕಿಯಾಗಿದ್ದ ಮನೀಶ್ ಕುಮಾರ್ ಈಗ ಅರಣ್ಯ ಇಲಾಖೆಗೆ ಸೇರಿದ್ದಾರೆ.
ಮನೀಶ್ ಕುಮಾರ್ ತಂದೆ ಸ್ಥಳೀಯ ಅರಣ್ಯ ರಕ್ಷಕರೊಂದಿಗೆ ದಿನಗೂಲಿ ನೌಕರರಾಗಿದ್ದರು. ಮನೀಶ್ ಹೆಚ್ಚಾಗಿ ತಂದೆಯೊಂದಿಗೆ ಕಾಡಿನಲ್ಲಿ ಸಮಯ ಕಳೆದಿದ್ದರು. ಸಹಜವಾಗಿಯೇ ವನ್ಯಜೀವಿಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಬೆಳೆಸಿಕೊಂಡಿದ್ದರು.
ಮನೀಶ್ ಕುಮಾರ್ ಟಿಸಿಎಸ್ ಸೇರಿದ ಕೇವಲ ಒಂದು ತಿಂಗಳಲ್ಲೇ ಕೆಲಸಕ್ಕೆ ರಾಜೀನಾಮೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನು ಆರಂಭಿಸಿದ್ದರು. ಇದು ಯಾರೂ ಸಹ ನಿರೀಕ್ಷೆ ಮಾಡದ ನಡೆಯಾಗಿತ್ತು. ಈಗ ಸುಮಾರು 6 ವರ್ಷಗಳ ನಂತರ 30 ವರ್ಷದ ಮನೀಶ್ ತಮ್ಮ ಸ್ವಂತ ಜಿಲ್ಲೆಯಾದ ದುಮ್ಕಾ ಬಳಿ ಬೀಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿಯೂ ಇರುವಂತಾಗಿದೆ.
ಕೌಟುಂಬಿಕ ವಾತಾವರಣ, ನೆಮ್ಮದಿ, ಕಾಡಿನ ನಂಟನ್ನು ಮನೀಶ್ ಕೋಲ್ಕತ್ತಾ ನಗರದಲ್ಲಿ ಅವರು ಮಿಸ್ ಮಾಡಿಕೊಳ್ಳುತ್ತಿದ್ದರು. ಟಿಸಿಎಸ್ ಕೆಲಸ ಬಿಟ್ಟು ಅರಣ್ಯ ಇಲಾಖೆ ಸೇರಿರುವ ಬಗ್ಗೆ ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. “ತಂತ್ರಜ್ಞಾನ ಆಧಾರಿತ ಉದ್ಯೋಗದ ಜೀವನ ನನ್ನದಲ್ಲ ಎಂದು ನನಗೆ ಅರಿವಾಯಿತು. ಅಲ್ಲಿ ಮನಸ್ಸಿಗೆ ಶಾಂತಿ ಇರಲಿಲ್ಲ” ಎಂದು ಮನಿಕಂಟ್ರೋಲ್ ಜೊತೆ ಮನೀಶ್ ಕುಮಾರ್ ಮಾತನಾಡಿದ್ದಾರೆ.
ಒಂದು ತಿಂಗಳು ಕೆಲಸ: ಮನೀಶ್ ಪದವಿ ಬಳಿಕ ಶ್ರೀರಾಮ್ ಫೈನಾನ್ಸ್‌ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದರು. ನಂತರ ಟಿಸಿಎಸ್‌ನಲ್ಲಿ ಕೆಲಸಕ್ಕೆ ಸೇರಿದರು. “ಟಿಸಿಎಸ್‌ ಸೇರಿದ ಒಂದು ತಿಂಗಳಲ್ಲೇ ಇದು ನನಗಾಗಿ ಅಲ್ಲ ಎಂಬುದು ನನಗೆ ತಿಳಿಯಿತು. ಪ್ರಕೃತಿಯ ಹತ್ತಿರ ಇರಬೇಕೆಂಬ ಹಂಬಲ ಹೆಚ್ಚಾಯಿತು. ನಾನು ಒಂದು ತಿಂಗಳಲ್ಲೇ ರಾಜೀನಾಮೆ ನೀಡಿದೆ. ಕಡಿಮೆ ಸಂಬಳದ ಕೆಲಸ ಮತ್ತು ಇತರ ಆಯ್ಕೆಗಳನ್ನು ಹುಡುಕಿದೆ” ಎಂದು ಹೇಳಿದ್ದಾರೆ.
ಮನೀಶ್ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಯತ್ನಿಸುವಂತೆ ಸಲಹೆ ನೀಡಿದರು. ಅದಕ್ಕೆ ಒಪ್ಪಿದ ಕುಮಾರ್ ಸುಮಾರು ಆರು ತಿಂಗಳು ಪರೀಕ್ಷೆಗೆ ಸಿದ್ಧತೆ ನಡೆಸಿ, ಅಂತಿಮವಾಗಿ ಅರಣ್ಯ ರಕ್ಷಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
6 ವರ್ಷಗಳಿಂದ ಬೀಟ್ ಆಫೀಸರ್ ಆಗಿ ಮನೀಶ್ ಕುಮಾರ್ ಕೆಲಸ ಮಾಡುತ್ತಿದ್ದಾರೆ. ವನ್ಯಜೀವಿಗಳನ್ನು ರಕ್ಷಿಸುವುದು ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಯುವುದರ ಜೊತೆಗೆ, ದೂರದ ಪ್ರದೇಶಗಳ ಬುಡಕಟ್ಟು ಜನರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ.

ZELO scooter ದೇಶದ ಮಾರುಕಟ್ಟೆಗೆ ಬಂತು ಹೊಸ ಎಲೆಕ್ಟ್ರಿಕ್ ಸ್ಕೂಟರ್,‌ ಕಡಿಮೆ‌ ಬೆಲೆ!

TAGGED:Techie leaves TCS to join Forest Department; What is the reason?
Share This Article
Facebook Twitter Copy Link Print
Previous Article ZELO scooter ದೇಶದ ಮಾರುಕಟ್ಟೆಗೆ ಬಂತು ಹೊಸ ಎಲೆಕ್ಟ್ರಿಕ್ ಸ್ಕೂಟರ್,‌ ಕಡಿಮೆ‌ ಬೆಲೆ!
Next Article ಬ್ಯಾನರ್’ ತೆರವುಗೊಳಿಸಿದ್ದಕ್ಕೆ ಅಶ್ಲೀಲವಾಗಿ ನಿಂದಿಸಿ ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ : ಕಣ್ಣೀರಿಟ್ಟ ಪೌರಾಯುಕ್ತೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?