Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದುರ್ಘಟನೆಯ ಬೆನ್ನಲ್ಲೇ ಕಾಲೇಜಿನ ಅಧ್ಯಾಪಕರ ಕಿರುಕುಳವೇ ಮಗಳ ಸಾವಿಗೆ ಕಾರಣವೆಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಒಎಂಆರ್ ವಿಭಾಗದ ಲೆಕ್ಚರರ್ಸ್‌ಗಳಾದ ಡಾ.ಅನಿಮೋಲ್, ಡಾ.ಶಬಾನಾ, ಡಾ.ಫೈಕಾ, ಡಾ.ಸಿಂಧು, ಡಾ.ಸುಶ್ಮಿನಿ, ಡಾ.ಅಲ್ಬಾ ವಜಾಗೊಂಡ ಉಪನ್ಯಾಸಕರು.
ಕಣ್ಣು ನೋವಿನ ಕಾರಣಕ್ಕೆ ಯಶಸ್ವಿನಿ ಕಳೆದ ಬುಧವಾರ ಕಾಲೇಜಿಗೆ ಹೋಗಿರಲಿಲ್ಲ. ಮರುದಿನ ಕಾಲೇಜಿಗೆ ಹೋದ ವಿದ್ಯಾರ್ಥಿನಿಗೆ ಪ್ರಾಧ್ಯಾಪಕ, ಕಣ್ಣಿಗೆ ಯಾವ ಡ್ರಾಪ್ಸ್ ಹಾಕಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿದೆ? ಎಂದೆಲ್ಲಾ ಪ್ರಶ್ನಿಸಿ ಅವಮಾನಿಸಿದ್ದರು. ಇದರಿಂದ ನೊಂದು ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡು ಸಾವಿಗೆ ಶರಣಾಗಿದ್ದಾಳೆ.
ಐದು ಮಂದಿ ಅಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಯಶಸ್ವಿನಿಗೆ ನ್ಯಾಯ ನೀಡಬೇಕೆಂದು ಸಹಪಾಠಿಗಳು ಪ್ರತಿಭಟನೆ ನಡೆಸಿದ್ದರು. ವಜಾಗೊಂಡಿರುವವರು ಒಎಂಆರ್ ವಿಭಾಗದ ಲೆಕ್ಚರರ್ಸ್‌ಗಳಾದ ಡಾ. ಅನಿಮೋಲ್, ಡಾ. ಶಬಾನಾ, ಡಾ. ಫೈಕಾ, ಡಾ. ಸಿಂಧು, ಡಾ. ಸುಶ್ಮಿನಿ ಹಾಗೂ ಡಾ. ಅಲ್ಬಾ ಎಂದು ಗುರುತಿಸಲಾಗಿದೆ. ಸಹಪಾಠಿಗಳ ಮುಂದೆ ಯಶಸ್ವಿನಿಯ ಮೈಬಣ್ಣ ಹಾಗೂ ಉಡುಪಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಎಲ್ಲ ಬೆಳವಣಿಗೆಗಳು ಡೆಂಟಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಮತ್ತು ಶಿಸ್ತುಪಾಲನೆಯ ಹೆಸರಿನಲ್ಲಿ ನಡೆಯುವ ಕಿರುಕುಳದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.