Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಗಳೊಬ್ಬಳು ತಂದೆಯೊಂದಿಗೆ ಜಗಳವಾಡುತ್ತಿದ್ದಾಳೆ, ಅಷ್ಟೇ ಅಲ್ಲದೆ ಮಗಳು ಆವಾಚ್ಯ ಶಬ್ದಗಳಿಂದ ತಂದೆಯನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಮಾಡುತ್ತಿರುವ ಆಘಾತಕಾರಿ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.
ತಂದೆ ಕಷ್ಟಪಟ್ಟು ದುಡಿದ 18 ಲಕ್ಷ ಹಣವನ್ನು ತನ್ನ ದರಭ್ಯಾಸಗಳಿಗೆ ಖರ್ಚು ಮಾಡಿದ್ದೂ ಅಲ್ಲದೆ, ತಂದೆಯನ್ನೇ ನಪುಂಸಕನೆಂದು ನಿಂದಿಸಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಂದೆ ಹತಾಶರಾಗಿ ಕೂತಲ್ಲೇ ಕುಳಿತಿರುವುದು ಕಣ್ಣಂಚಲ್ಲಿ ನೀರು ತರಿಸದೇ ಇರದು.
ಆಕೆಯ ನಿರ್ದಯ ಮಾತು, ಆಕ್ರೋಶ, ಕೋಪ, ಹಲ್ಲೆ ತಂದೆಯನ್ನು ಮಾನಸಿಕವಾಗಿ ಕುಗ್ಗಿಸಿದೆ.ಹಣದ ವಿವಾದದಿಂದ ಆರಂಭವಾದ ಜಗಳ ಅವಮಾನವಾಗಿ ಬದಲಾಯಿತು. ಈ ವಿಡಿಯೋ ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ಹಲವರು ಈ ವಿಡಿಯೋ ಕುರಿತು ಕಮೆಂಟ್ ಮಾಡಿದ್ದಾರೆ.