Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಲಂಡನ್‌ನಲ್ಲಿ ವಾಸಿಸುವ 30 ವರ್ಷದ ಕೆನ್ನಿ ಎಥಾನ್ ಜೋನ್ಸ್ ಮಾಡಿದ ಕೆಲಸವೊಂದ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ಹೌದು, ಕೆನ್ನಿಯ ಸಹೋದರಿ ಕಿಜ್ಜಿ ಜೋನ್ಸ್ ಹಲವು ವರ್ಷಗಳಿಂದ ತಾಯಿಯಾಗುವ ಕನಸು ಕಾಣುತ್ತಿದ್ದಳು. ಆದರೆ ಅವರ ವಯಸ್ಸು ಮತ್ತು ಆರೋಗ್ಯದ ಕಾರಣಗಳಿಂದಾಗಿ ಅವರು ಪದೇ ಪದೇ ಗರ್ಭಪಾತಕ್ಕೆ ಒಳಗಾಗಬೇಕಾಯಿತು. ಎಲ್ಲವೂ ಸರಿಯಾಗಿದೆ ಎಂದು ವೈದ್ಯರು ಹೇಳಿದರು, ಆದರೆ ಅವರ ಅಂಡಾಣುಗಳ ಗುಣಮಟ್ಟ ಸರಿಯಾಗಿಲ್ಲದ ಕಾರಣ ಅವರು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಅಂಡಾಣುಗಳ ದಾನಿಗಾಗಿ ಹುಡುಕಾಡುತ್ತಿದ್ದರು.
mom.com ವರದಿಯ ಪ್ರಕಾರ, ಕೆನ್ನಿ ಒಬ್ಬ ಟ್ರಾನ್ಸ್ಜೆಂಡರ್.. ಈತ ಕಳೆದ 10 ವರ್ಷಗಳಿಂದ ಹಾರ್ಮೋನ್ ಚಿಕಿತ್ಸೆಗೆ ಒಳಗಾಗುತ್ತಿದ್ದ. ಮಹಿಳೆಯಾಗಿ ಬದಲಾಗುತ್ತಿದ್ದ ಆತ ಸಂಪೂರ್ಣ ಪುರುಷನಾಗಿ ತನ್ನ ಗುರುತನ್ನು ಬಲಪಡಿಸಲು ಈ ಚಿಕಿತ್ಸೆಯು ಬಹಳ ಮುಖ್ಯವಾಗಿತ್ತು. ಆದರೆ ತನ್ನ ಸಹೋದರಿಗಾಗಿ ಹಿಂದೆ ಮುಂದೆ ಯೋಚಿಸದೇ ತನ್ನ ಚಿಕಿತ್ಸೆಯನ್ನು ನಿಲ್ಲಿಸಲು ನಿರ್ಧರಿಸಿದ. ‘ಜೆಂಡರ್ ಡಿಸ್ಫೋರಿಯಾ’ ಅಪಾಯವನೂ ಲೆಕ್ಕಸಿದೆ, ಕೇವಲ ತನ್ನ ತಂಗಿಯ ಸಂತೋಷಕ್ಕಾಗಿ ಅವರ ತಾಯ್ತತನದ ಆಸೆ ತೀರಿಸಲು ದೊಡ್ಡ ತ್ಯಾಗ ಮಾಡಲು ಮುಂದಾದರು.
ಇದಾದ ನಂತರ, ಕೆನ್ನಿ ಅಂಡಾಣು ದಾನ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಈ ಪ್ರಕ್ರಿಯೆಯು ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸವಾಲಿನದ್ದಾಗಿತ್ತು. ಆದರೆ ಅವರ ಧೈರ್ಯದಿಂದ ಎಲ್ಲವೂ ಸರಿಯಾಗಿ ನಡೆಯಿತು. ವೈದ್ಯರು ಕೆನ್ನಿಯ ದೇಹದಿಂದ 19 ಅಂಡಾಣುಗಳನ್ನು ಹೊರತೆಗೆದರು, ಅದರಿಂದ 6 ಆರೋಗ್ಯಕರ ಭ್ರೂಣಗಳು ಸೃಷ್ಟಿಯಾದವು. ಈಗ ಕೆನ್ನಿಯ ಸಹೋದರಿ ತಾಯಿಯಾಗಬಹುದು. ಕೆನ್ನಿಯ ಈ ಕಥೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಅವರನ್ನು ‘ಸೂಪರ್ ಬ್ರದರ್’ ಎಂದು ಕರೆಯುತ್ತಿದ್ದಾರೆ.
ಸ್ಕೀಯಿಂಗ್ ವೇಳೆ ಗಾಯಗೊಂಡಿದ್ದ ವೇದಾಂತ ಸಂಸ್ಥಾಪಕ ಅನಿಲ್ ಪುತ್ರ ಅಗ್ನಿವೇಶ್ ನಿಧನ