Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೈದರಾಬಾದ್: ತೆಲಂಗಾಣದ ಕೊಂಡಗಟ್ಟು ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮೇಲೆ ಹೈ ಟೆನ್ಷನ್ ವೈರ್ ಹಾದು ಹೋಗಿದ್ದು, ಈ ವೇಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಪವನ್ ಕಲ್ಯಾಣ್ ಶನಿವಾರ ಜಗ್ತಿಯಾಲ್ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಂಡಗಟ್ಟುವಿಗೆ ಭೇಟಿ ನೀಡಿದರು. ಅವರು ಹೆಲಿಕಾಪ್ಟರ್ ಮೂಲಕ ನಾಚುಪಲ್ಲಿಯಲ್ಲಿರುವ ಜೆಎನ್‌ಟಿಯು ಹೆಲಿಪ್ಯಾಡ್ ತಲುಪಿದರು.
ಪಕ್ಷದ ಕಾರ್ಯಕರ್ತರು ಮತ್ತು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ ಪವನ್ ಕಲ್ಯಾಣ್ ರಸ್ತೆ ಮಾರ್ಗವಾಗಿ ತೆರಳಿದರು. ಈ ವೇಳೆ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸುತ್ತಿದ್ದ ಪವನ್ ಕಲ್ಯಾಣ್ ಮೇಲಿದ್ದ ಹೈ ಟೆನ್ಷನ್ ವೈರ್ ಗಮನಿಸಿ ಕೂಡಲೇ ಅಲ್ಲಿಯೇ ಮಲಗಿದ್ದಾರೆ.ಈ ವೇಳೆ ವೈರ್ ಕಡಿಮೆ ಅಂತರದಲ್ಲಿ ಅವರನ್ನು ಹಾದು ಹೋಗಿದೆ.