Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಂಬೈ: ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಗೋವಾದಲ್ಲಿ ಬಿಯರ್ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಸಾರಾ ತೆಂಡೂಲ್ಕರ್ ಗೋವಾದ ಆ್ಯರೋಸಿಮ್ ಬೀಚ್ ಬಳಿ ಸಾರಾ ತೆಂಡೂಲ್ಕರ್ ಫ್ರೆಂಡ್ಸ್ ಜೊತೆ ಮಸ್ತಿ ಮಾಡಿದ್ದಾರೆ. ಬಿಯರ್ ಬಾಟಲ್ಲಿ ಕೈಯಲ್ಲಿ ಹಿಡಿದುತೆರಳುತ್ತಿರುವ ವಿಡಿಯೋದಿಂದ ಇದೀಗ ಸಾರಾ ತೆಂಡೂಲ್ಕರ್ ನೆಮ್ಮದಿ ಇಲ್ಲದಾಗಿದೆ.
ಸಚಿನ್ ತೆಂಡೂಲ್ಕರ್‌ಗೆ ಇದ್ದ ಜನಪ್ರಿಯತೆಗೆ ಹಲವು ಉತ್ಪನ್ನಗಳು, ಕಂಪನಿಗಳು ಜಾಹೀರಾತು, ಪ್ರಾಯೋಜಕತ್ವಕ್ಕೆ ದುಂಬಾಲು ಬಿದ್ದಿತ್ತು. ಸಚಿನ್ ಹಲವು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ, ಪ್ರಚಾರ ಮಾಡಿದ್ದಾರೆ. ಆದರೆ ಯಾವತ್ತೂ ಮದ್ಯಪಾನ, ಗುಟ್ಕಾ, ಪಾನ್ ಮಸಾಲ, ಸಿಗರೇಟು ಸೇರಿದಂತೆ ಯಾವುದೇ ನಶೆ ವಸ್ತುಗಳ ಪ್ರಚಾರದಿಂದ ದೂರ ಉಳಿದಿದ್ದರು.
ಸಚಿನ್ ತೆಂಡೂಲ್ಕರ್ ಅವರು ನಾನು ಯಾವುದೇ ಕಾರಣಕ್ಕೂ ಮದ್ಯ ಮತ್ತು ತಂಬಾಕನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಪುತ್ರಿ ಬಹಿರಂಗವಾಗಿ ಮದ್ಯದ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.