Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > New Year Celebration: ಹೊಸ ವರ್ಷಕ್ಕೆ ಕ್ಷಣಗಣನೆ – ಭದ್ರತೆಗೆ ಹೆಚ್ಚು ಮಹಿಳಾ ಪೊಲೀಸರ ನಿಯೋಜಿಸಿ : ಸಿಎಂ
ಕರ್ನಾಟಕಪ್ರಮುಖ

New Year Celebration: ಹೊಸ ವರ್ಷಕ್ಕೆ ಕ್ಷಣಗಣನೆ – ಭದ್ರತೆಗೆ ಹೆಚ್ಚು ಮಹಿಳಾ ಪೊಲೀಸರ ನಿಯೋಜಿಸಿ : ಸಿಎಂ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ರಾಜಧಾನಿಯಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ನಗರದೆಲ್ಲೆಡೆ ಬಿಗಿ ಪೊಲೀಸ್‌ ಭದ್ರತೆಗೆ ಸಿದ್ಧತೆಯಾಗಿದೆ.

ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಭದ್ರತೆಗಾಗಿ ನಿಯೋಜನೆಗೊಳ್ಳುವ ಪೊಲೀಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೈಗೊಳ್ಳಲಾಗುವ ಕ್ರಮಗಳ ಕುರಿತು ಮಾಹಿತಿ ಪಡೆದು, ಹಲವು ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೊಸ ವರ್ಷಾಚರಣೆ ಬಳಿಕ ಜನರು ಸುಲಭವಾಗಿ ಮನೆಗೆ ತೆರಳಲು ಮಧ್ಯರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಎಂ.ಜಿ. ರಸ್ತೆ. ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರ ಸೇರಿದಂತೆ ಜನರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಜನದಟ್ಟಣೆಯಿಂದ ಯಾವುದೇ ಅನಾಹುತ ನಡೆಯದಂತೆ ಕ್ರಮವಹಿಸಬೇಕು. ಅದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದರು.

ಈ ವೇಳೆ ಪೊಲೀಸ್‌ ಅಧಿಕಾರಿಗಳು, ಡಿ. 31ರ ರಾತ್ರಿ ನಗರದಲ್ಲಿ ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ 1,200 ಪೊಲೀಸರನ್ನು ಕರೆಸಿ ನಿಯೋಜಿಸಲಾಗುತ್ತಿದೆ. 4 ಕಂಟ್ರೋಲ್‌ ರೂಂ, 78 ಕಾವಲು ಗೋಪುರ, 164 ಮಹಿಳಾ ಸಹಾಯ ಡೆಸ್ಕ್‌ ಮತ್ತು 55 ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅದಕ್ಕೆ ಸಿದ್ದರಾಮಯ್ಯ ಅವರು, ನಿಯೋಜನೆಗೊಳ್ಳುತ್ತಿರುವ ಪೊಲೀಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಬೇಕು. ಚೆನ್ನಮ್ಮ ಪಡೆಗಳನ್ನು ಸಕ್ರಿಯವಾಗಿ ನಿಯೋಜಿಸಬೇಕು. ಕಿಡಿಗೇಡಿಗಳ ಮೇಲೆ ನಿರಂತರವಾಗಿ ನಿಗಾ ಇರಿಸಬೇಕು. ವ್ಹೀಲಿಂಗ್‌ ಮಾಡುವುದು ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಮಾದ ದ್ರವ್ಯ ಸೇವೆನೆ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಲೋಪ ಉಂಟಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

https://www.newsics.com/2025/12/30/is-there-a-huge-demand-for-kidneys-in-karnataka/

TAGGED:Deploy more female police officers for security: CM
Share This Article
Facebook Twitter Copy Link Print
Previous Article ಕರ್ನಾಟಕದಲ್ಲಿ ಕಿಡ್ನಿಗೆ ಭಾರೀ ಡಿಮಾಂಡ್? ಯಾಕೆ ಹೀಗೆ?
Next Article ವ್ಯಕ್ತಿಯ ಮೇಲೆ ದಾಳಿ ಮಾಡಿ, ಬಳಿಕ ಮಂಚದ ಮೇಲೆ ಮಲಗಿದ ಹುಲಿ

Popular Posts

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

You Might Also Like

ಪ್ರಮುಖ

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read
ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read
ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?