Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಭಾರತೀಯ BTS ಆರ್ಮಿಗಳಿಗೆ ಸಿಹಿ ಸುದ್ದಿಯೊಂದಿದೆ. ಕೆ-ಪಾಪ್ ದೈತ್ಯ ತಂಡ BTS ತಮ್ಮ ಕಡ್ಡಾಯ ಮಿಲಿಟರಿ ಸೇವೆಯನ್ನೂ ಪೂರ್ಣಗೊಳಿಸಿದ ನಂತರ ತಂಡವಾಗಿ ಮತ್ತೆ ಹೊಸ ಆಲ್ಬಂ ಬಿಡುಗಡೆ ಮಾಡುವುದರ ಜೊತೆಗೆ ವರ್ಲ್ಡ್ ಟೂರ್ ನಡೆಸಲು ಸಿದ್ದತೆ ನಡೆಸುತ್ತಿದೆ. ಸುಮಾರು 4 ವರ್ಷಗಳ ಬಳಿಕ ಮೊದಲ ಬಾರಿಗೆ BTS ವರ್ಲ್ಡ್ ಟೂರ್ ನಡೆಸುತ್ತಿದ್ದು, ವರ್ಲ್ಡ್ ಟೂರ್ ನಡೆಯುವ ತಾಣಗಳ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದ್ದು, ಈ ಬಾರಿ ಇತಿಹಾಸ ಸೃಷ್ಟಿಸಲಿದೆ ಎಂಬ ಮಾತುಗಳು ಜೋರಾಗಿದೆ. ಈ ಮಧ್ಯೆ BTS ಮೊದಲ ಬಾರಿಗೆ ಭಾರತಕ್ಕೆ ಬರಲಿವೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು.
ಆದರೆ, ಈ ಎಲ್ಲ ಊಹಾಪೋಹಗಳಿಗೂ BTS V ತೆರೆಎಳೆದಿದ್ದು, ಕಿಮ್ ತೆಹ್ಯೋಂಗ್ ನೀಡಿದ ಆ ಒಂದು ಮೆಸೇಜ್ BTS ಭಾರತದಕ್ಕೆ ಬರೋದು ಪಕ್ಕಾ ಎಂಬ ಸ್ಪೊಯ್ಲರ್ ಅಲರ್ಟ್ ನೀಡಿದ್ದಾರೆ. BTS ಭಾರತಕ್ಕೆ ಬರಬೇಕು ನಮ್ಮ ನೆಚ್ಚಿನ ಐಡಲ್‌ಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ಸಾಕಷ್ಟು ಆರ್ಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಎಲ್ಲಾ ಆರ್ಮಿಗಳಿಗೆ ಈ 2026 ಐತಿಹಾಸಿಕ ವರ್ಷವಾಗಲಿದ್ದು, ಮೊಟ್ಟಮೊದಲ ಬಾರಿಗೆ BTS ಭಾರತಕ್ಕೆ ಬರಲಿದ್ದಾರೆ.
V ಆರ್ಮಿಗಳೊಂದಿಗೆ ಸಂವಾದ ನಡೆಸಲು ಆಗಾಗ ವೀವರ್ಸ್ ಮೂಲಕ ಲೈವ್ ಬರುತ್ತಿರುತ್ತಾರೆ. ಅಂತಯೇ ಈಗಲೂ ಸಹ ಲೈವ್ ಬಂದಿದ್ದು, ಅದರಲ್ಲಿ “ನಮಸ್ತೆ, ನಮಸ್ತೆ ಭಾರತೀಯ ಆರ್ಮಿ. ಮುಂದಿನ ವರ್ಷ ಭೇಟಿಯಾಗೋಣ!” ಎಂಬ ಮೆಸೇಜ್ ನೀಡಿದ್ದು, ಇದು BTS 2026ರ ವರ್ಲ್ಡ್ ಟೂರ್ ಗೆ BTS ಭಾರತಕ್ಕೆ ಬಂದೇ ಬರುತ್ತದೆ ಎಂಬ ಆಸೆಯನ್ನು ಆರ್ಮಿಗಳಲ್ಲಿ ಮೂಡಿಸಿದೆ.