Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Dr Ashok Huggannavar ಬದುಕಿಗೆ ಭೈರವಿ ಹಾಡಿದ ಖ್ಯಾತ ಹಿಂದೂಸ್ತಾನಿ ಗಾಯಕ, ವಿದ್ವಾಂಸ ಡಾ.ಅಶೋಕ ಹುಗ್ಗಣ್ಣವರ ಗಾಯನ ಕೇಳಿ
ಕರ್ನಾಟಕದೇಶಪ್ರಮುಖಮನರಂಜನೆ

Dr Ashok Huggannavar ಬದುಕಿಗೆ ಭೈರವಿ ಹಾಡಿದ ಖ್ಯಾತ ಹಿಂದೂಸ್ತಾನಿ ಗಾಯಕ, ವಿದ್ವಾಂಸ ಡಾ.ಅಶೋಕ ಹುಗ್ಗಣ್ಣವರ ಗಾಯನ ಕೇಳಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಹುಬ್ಬಳ್ಳಿ: ಖ್ಯಾತ ಹಿಂದೂಸ್ತಾನಿ ಗಾಯಕ, ಸಂಗೀತ ವಿದ್ವಾಂಸ ಡಾ.ಅಶೋಕ ಹುಗ್ಗಣ್ಣವರ (64) ಹುಬ್ಬಳ್ಳಿಯಲ್ಲಿ ಕೊನೆಯುಸಿರೆಳೆದರು.

ಕೆಲ ಕಾಲದಿಂದ ವಯೋಸಹಜ ಅನಾರೋಗ್ಯಕ್ಕೊಳಗಾಗಿದ್ದ ಡಾ.ಅಶೋಕ ಹುಗ್ಗಣವರ ಬುಧವಾರ ರಾತ್ರಿ ವಿಧಿವಶರಾದರು. ಅವರಿಗೆ ಪತ್ನಿ ವೀಣಾ (ಶಿಕ್ಷಕಿ) ಹಾಗೂ ಪುತ್ರ ವಿನಾಯಕ (ವಿಜ್ಞಾನಿ ಮತ್ತು ಗಾಯಕ) ಇದ್ದಾರೆ. ಶುಕ್ರವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೂಲತಃ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಹುಗ್ಗಣ್ಣವರ, ಹೊನ್ನಾವರದ ಎಂಪಿಇ ಸೊಸೈಟಿಯ ಎಸ್‌.ಡಿ.ಎಂ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ, 2021ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿ ಬಳಿಕ ಹುಬ್ಬಳ್ಳಿಯ ಉಣಕಲ್‌ನಲ್ಲಿ ವಾಸವಾಗಿದ್ದರು.

ಹುಗ್ಗಣ್ಣವರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ, ಸಂಗೀತ ರತ್ನ ಡಿಪ್ಲೊಮಾ ಮತ್ತು ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದರು.

ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿದ ಶ್ರೇಷ್ಠ ಗುರುವಾಗಿದ್ದರು. ಕೇವಲ ಸಂಗೀತವಷ್ಟೇ ಅಲ್ಲದೆ ವಿಜ್ಞಾನ ಮತ್ತು ಸಂಗೀತ ಎರಡರಲ್ಲೂ ಡಾಕ್ಟರೇಟ್‌ ಪದವಿ ಪಡೆದಿದ್ದ ಅಪರೂಪದ ಪ್ರತಿಭೆ ಅವರದು. ಕಲೆಯೂ ವಿಜ್ಞಾನವೂ ಒಂದೇ ನಾಣ್ಯದ ಎರಡು ಮುಖಗಳೆಂಬುದನ್ನು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದವರು ಅವರು.

ಹಿಂದೂಸ್ತಾನಿ ಸಂಗೀತದ ವಿವಿಧ ರಾಗಗಳು, ಬಂಧಿಶ್‌ಗಳು ಹಾಗೂ ಶಾಸ್ತ್ರೀಯ ಗಾಯನ ಶೈಲಿಯಲ್ಲಿ ಅವರು ಅಪ್ರತಿಮ ಪಾಂಡಿತ್ಯ ಹೊಂದಿದ್ದರು.

ಪಂ.ಲಿಂಗರಾಜ ಬುವಾ ಯರಗುಪ್ಪಿ ಅವರ ಬಳಿ 12 ವರ್ಷ ಗ್ವಾಲಿಯ‌ರ್ ಪದ್ಧತಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರಿಗೆ, ಕರ್ನಾಟಕ ಕಲಾಶ್ರೀ, ಅನನ್ಯ ಮನ್ಸೂರ್ ಪ್ರಶಸ್ತಿ, ರಾಗಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

https://www.facebook.com/share/v/1BmYj1stks/

TAGGED:Renowned Hindustani singer and scholar Dr. Ashoka Huggannavar is no more.
Share This Article
Facebook Twitter Copy Link Print
Previous Article Health & Science ನಿಮ್ಮ ಹೆಂಡತಿಯ ಪಾದಗಳೇಕೆ ತಣ್ಣಗೆ? ನೀವೇಕೆ ಬಿಸಿ ಬಿಸಿ?
Next Article 4.7 ಮಹಿಳಾ ಸ್ನೇಹಿ ರೇಟಿಂಗ್ ಹೊಂದಿದ್ದ ಕಂಪನಿ ಸಿಇಒನಿಂದಲೇ ಉದ್ಯೋಗಿಯ ಗ್ಯಾಂಗ್‌ರೇ*ಪ್

Popular Posts

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

You Might Also Like

ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?