Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೈಸೂರು: ನಗರದ ಅರಮನೆ ಆವರಣದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ದೆಹಲಿ ಸ್ಫೋಟದ ಮತ್ತೊಂದು ಭಾಗವಾಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲೇ ಶುಕ್ರವಾರ ಮೈಸೂರಿಗೆ ಎನ್ ಐಎ ತಂಡ ಆಗಮಿಸಿ ತನಿಖೆಗಿಳಿದಿದ್ದು, ಶಂಕಿತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿರುವುದು ಆಕಸ್ಮಿಕ ಅಲ್ಲ, ಪೂರ್ವಯೋಜಿತ ಪ್ರಕರಣ ಎಂಬ ಅನುಮಾನಗಳು ಮೂಡಿದ್ದು ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಈ ಮಧ್ಯೆ, ಘಟನೆ ಸಂಬಂಧ ಮೈಸೂರು ಪೊಲೀಸರೂ ಎಫ್‌ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಿಲಿಂಡರ್ ಸ್ಫೋಟಕ್ಕೆ ಹೀಲಿಯಂ ಗ್ಯಾಸ್ ತುಂಬುವ ವೇಳೆ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆಯಾದರೂ ತನಿಖಾ ತಂಡಗಳ ಲೆಕ್ಕಾಚಾರ ಬೇರೆಯದೇ ಇರುವಂತಿದೆ.
ಮೈಸೂರು ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಪೋಟಗೊಂಡು ಬಲೂನ್ ವ್ಯಾಪಾರಿ ಸಲೀಂ ಮೃತಪಟ್ಟ ಘಟನೆಯ ಅಸಲಿ ಕಾರಣ ಈಗ ಬಹಿರಂಗವಾಗಿದೆ. ಸಲೀಂ ಸತತವಾಗಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುತ್ತಿದ್ದ. ಅಲ್ಲದೆ, ಸಿಲಿಂಡರ್ ಅನ್ನು ವೇಗವಾಗಿ ಆನ್-ಆಫ್ ಮಾಡಿದ್ದರಿಂದ ಒಳಭಾಗದಲ್ಲಿ ಹೀಟ್ ಉಂಟಾಗಿ ಒತ್ತಡ ಹೆಚ್ಚಾಗಿತ್ತು. ಇದರ ಪರಿಣಾಮ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬಲೂನು ಮಾರಾಟಗಾರ 15 ದಿನಗಳ ಹಿಂದೆ ಮೈಸೂರಿಗೆ ಆಗಮಿಸಿದ್ದು, ಲಷ್ಕರ್ ಮೊಹಲ್ಲಾದಲ್ಲಿರುವ ಷರೀಫ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ.
ಸದ್ಯಕ್ಕಂತೂ ಎನ್‌ಐಎ ಅಧಿಕಾರಿಗಳ ಭೇಟಿ ವಿಚಾರ ಕುತೂಹಲ ಮೂಡಿಸಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬುದರ ತನಿಖೆ ಹಾಗೂ ಸ್ಫೋಟ ಹಿಂದಿನ ರಹಸ್ಯ ಬೇಧಿಸಲು ಎನ್ಐಎ ಅಧಿಕಾರಿಗಳು ಮುಂದಾಗಿದ್ದಾರೆ.
ಉತ್ತರ ಪ್ರದೇಶದಿಂದ ಮೈಸೂರಿಗೆ ಬಂದಿದ್ದ ಸಲೀಂ ಕಳೆದ 15 ದಿನಗಳಿಂದ ಮೈಸೂರಲ್ಲಿ ವಾಸವಾಗಿದ್ದ. ಅಲ್ಲದೇ ಲಷ್ಕರ್ ಮೊಹಲ್ಲಾದಲ್ಲಿ ಸಲೀಂ ವಾಸವಿದ್ದ, ಮೈಸೂರು ಅರಮನೆ, ದೇವರಾಜ ಅರಸು ರಸ್ತೆ, ಕೆಆರ್ ಸರ್ಕಲ್, ಜಗನ್ಮೋಹನ ಅರಮನೆ, ಮೃಗಾಲಯ ಬಳಿ ವ್ಯಾಪಾರದ ನೆಪದಲ್ಲಿ ಅಡ್ಡಾಡುತ್ತಿದ್ದ ಎಂದು ತಿಳಿದುಬಂದಿದೆ.
ಸರ್ವಿಸ್ ಲಾಡ್ಜ್ ನಲ್ಲಿ ವಾಸವಿದ್ದ ಸಲೀಂ ಬೆಳಗ್ಗೆ ಲಾಡ್ಜ್ ಬಿಟ್ಟರೆ ತಡರಾತ್ರಿ ಲಾಡ್ಜ್ ಗೆ ಹಿಂತಿರುಗುತ್ತಿದ್ದ ಎಂಬುದು ಗೊತ್ತಾಗಿದೆ.
Yearly Horoscope ವರ್ಷದ ರಾಶಿ ಭವಿಷ್ಯ 2026: ಮೇಷ- ಸಾಲ ಮಾಡುವುದರಲ್ಲೇ ಖುಷಿ
ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿನಿ ರಶ್ಮಿಯ ಕನಸೆಲ್ಲ ನುಚ್ಚುನೂರು…