Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬಡವರ ಬಗ್ಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು?
ಪ್ರಮುಖಮನರಂಜನೆ

ಬಡವರ ಬಗ್ಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌. ಬಿ ಶೆಟ್ಟಿ ನಟನೆಯ ’45’ ಸಿನಿಮಾ ಬಿಡುಗಡೆಯಾಗಿದೆ. ಮೂವರು ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಸಾಕಷ್ಟು ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ.
ಬಡವರ ಮಕ್ಕಳು ಎಂದ ಮಾತ್ರಕ್ಕೆ ಅವಕಾಶ ಕೊಡಬೇಕಾ? ಎಂದು ರಾಜ್‌. ಬಿ ಶೆಟ್ಟಿ ಕೇಳಿದ್ದಾರೆ.
‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ’ ಎಂದು ಈ ಹಿಂದೆ ನಟ ಧನಂಜಯ ಹೇಳಿದ್ದು ವೈರಲ್ ಆಗಿತ್ತು. ಇದೀಗ ರಾಜ್‌. ಬಿ ಶೆಟ್ಟಿ ಅದಕ್ಕೆ ಹೊಸ ವಿವರಣೆ ಕೊಟ್ಟಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ಗಾಗಿ ಅನುಶ್ರೀ ’45’ ತಂಡದ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಶಿವಣ್ಣ, ಉಪ್ಪಿ, ರಾಜ್ ಮೂವರು ಸಾಕಷ್ಟು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.
ಡಾ. ರಾಜ್‌ಕುಮಾರ್ ಮಗನಾಗಿದ್ದರೂ ಶಿವಣ್ಣ ಮೊದಲಿಗೆ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ ಸೇರಿ ನಟನೆಯ ಪಟ್ಟುಗಳನ್ನು ಕಲಿತಿದ್ದರು. ಇದೇ ವಿಚಾರವನ್ನು ರಾಜ್‌. ಬಿ ಶೆಟ್ಟಿ ಪ್ರಸ್ತಾಪಿಸಿದ್ದಾರೆ. “ಅಣ್ಣಾವ್ರ ಮಗ ಚಿತ್ರರಂಗಕ್ಕೆ ಬರಬೇಕು ಅಂದಾಗ ತಂದೆ ಆಕ್ಟಿಂಗ್ ಕ್ಲಾಸ್‌ಗೆ ಸೇರೋಕೆ ಹೇಳ್ತಾರೆ. ಆದರೆ ಈಗ ನಾನು ಹೀರೊ ಆಗಬಹುದಾ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡ್ತಾರೆ. ಅದು ತಪ್ಪಲ್ಲ. ಆದರೆ ಅಂತಹ ದಿಗ್ಗಜ ನಟ(ಡಾ. ರಾಜ್‌ಕುಮಾರ್) ನಾನು ಕಲಿಸಲ್ಲ, ಗುರುವಿನ ಮೂಲಕ ನಟನೆ ಕಲಿ ಎಂದು ಹೇಳ್ತಾರೆ. ಮುಂದೆ ಅದು ಶಿವಣ್ಣನಿಗೆ ಸಹಾಯವಾಗುತ್ತದೆ” ಎಂದು ರಾಜ್‌. ಬಿ ಶೆಟ್ಟಿ ಹೇಳಿದ್ದಾರೆ.
ನಮಗೆ ಯಾರಾದರೂ ಯಾಕೆ ಅವಕಾಶ ಕೊಡಬೇಕು. ಅವಕಾಶಕ್ಕೆ ನಾನು ಅರ್ಹನಾಗಬೇಕು ಅನ್ನೋದನ್ನು ಇದರಿಂದ ಗೊತ್ತಾಗುತ್ತದೆ ಎಂದು ರಾಜ್ ತಿಳಿಸಿದ್ದಾರೆ. “ಬಡವರ ಮಕ್ಕಳು ಬೆಳೆಯಬೇಕು ಎನ್ನುವುದು ಪ್ರಶ್ನೆಯಲ್ಲ. ಅರ್ಹತೆ ಮಾತ್ರ ಪ್ರಶ್ನೆ ಆಗುತ್ತೆ. ಒಬ್ಬ ಬಡವನ ಮನ ಪ್ರತಿಭೆ ಇರಲ್ಲ, ಒಬ್ಬ ಶ್ರೀಮಂತನ ಮಗ, ಬಹಳ ಪ್ರತಿಭಾವಂತನಾಗಿರುತ್ತಾನೆ. ಇದರಲ್ಲಿ ಬಡವ ಅಂತ ಅವನಿಗೆ ಅವಕಾಶ ಕೊಡಬೇಕಾ? ಪ್ರತಿಭಾವಂತ ಅಂತ ಇವನಿಗೆ ಕೊಡಬೇಕಾ? ಎಂದು ಪ್ರಶ್ನಿಸಿದ್ದಾರೆ.

ಬಡತನ ಎನ್ನುವುದು ತಲೆಯಲ್ಲಿ ಇರಬೇಕು, ನಾನು ಏನು ಕಲಿತ್ತಿಲ್ಲ, ಕಲಿಯಬೇಕು ಅನ್ನೋ ಬಡತನ ತಲೆಯಲ್ಲಿದ್ದರೆ ಅಂತಹ ಬಡವನಿಗೆ ಅವಕಾಶ ಕೊಡಬೇಕು ಎಂದು ರಾಜ್ ಹೇಳಿದ್ದು ಕೂಡಲೇ ಉಪೇಂದ್ರ ಕೈ ಮುಗಿದುಬಿಟ್ಟಿದ್ದಾರೆ. ಮಾತೇ ಬರ್ತಿಲ್ಲ ಎಂದು ಶಿವಣ್ಣ ಎರಡೂ ಕೈ ಮೇಲೆತ್ತಿಬಿಟ್ಟಿದ್ದಾರೆ. ಇದು ತಮಾಷೆ ಅಲ್ಲ, ಎಂದು ಶಿವಣ್ಣ, ಉಪೇಂದ್ರ ಇಬ್ಬರೂ ರಾಜ್ ಮಾತು ಮೆಚ್ಚಿಕೊಂಡಿದ್ದಾರೆ.

ಜಗನ್ ಹುಟ್ಟುಹಬ್ಬದಂದು ಗರ್ಭಿಣಿ ಹೊಟ್ಟೆಗೆ ಒದ್ದ ಕಾಂಗ್ರೆಸ್‌ ಕಾರ್ಯಕರ್ತ

TAGGED:Why did Shivanna get angry at Raj B Shetty's words? What did Raj B Shetty say about the poor?
Share This Article
Facebook Twitter Copy Link Print
Previous Article ಸೀರೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು?; ವೈದ್ಯರು ಏನು ಹೇಳುತ್ತಾರೆ?
Next Article ತೂಕ ಹೆಚ್ಚಿಸಿಕೊಳ್ಳಲೂ ಯಾವ ಆಹಾರ ಉತ್ತಮ?

Popular Posts

Dakshina Kannada Baby Died ದಕ್ಷಿಣ ಕನ್ನಡದಲ್ಲಿ ಭೀಕರ ದುರಂತ: ಶಾಲಾ ಬಸ್ ಮೇಲೆ ಮರ ಬಿದ್ದು 5 ವರ್ಷದ ಬಾಲಕಿ ಸಾವು

1 Min Read

C M Vijay Last Film Jananayagan Release ಬೆಂಗಳೂರಿನಲ್ಲೂ ‘ಜನ ನಾಯಕನ್’ ಜ್ವರ: ವಿಜಯ್ ಅವರ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

You Might Also Like

ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?