Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುದ್ದು ಮರಿಯಾನೆಗಳ ಆಟ ತುಂಟಾಟವೇ ಚೆಂದ. ನೋಡಿದಷ್ಟು ಹಿತ ನೀಡುವ ಕ್ಷಣಗಳಿವು. ಆಗಷ್ಟೇ ಜಗತ್ತನ್ನು ಕುತೂಹಲದಿಂದ ನೋಡುತ್ತಿರುವ ಈ ಪುಟಾಣಿಗಳಿಗೆ ಎಲ್ಲವೂ ಅದ್ಭುತವೇ, ಎಲ್ಲಾ ಕ್ಷಣವೂ ಆನಂದದಾಯಕವೇ. ಹೀಗಾಗಿ, ಈ ಆನಂದದಾಯಕ ಕ್ಷಣಗಳನ್ನು ಈ ಪುಟಾಣಿಗಳು ಅಷ್ಟೇ ಅದ್ಭುತವಾಗಿ ಅನುಭವಿಸುತ್ತವೆ.
ಇಂತಹ ಪುಟಾಣಿಗಳ ಈ ಖುಷಿಯ ಕ್ಷಣಗಳನ್ನು, ಆಟದ ಸಡಗರವನ್ನು ನೋಡುವಾಗ ಹೊತ್ತು ಕಳೆದದ್ದೇ ಗೊತ್ತಾಗದು. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೀವು ನೋಡಿರುತ್ತೀರಿ. ಇದೀಗ ಪುಟಾಣಿ ಆನೆಯೊಂದು ಮಹಿಳೆಯೊಂದಿಗೆ ಸೇಬು ಹಣ್ಣಿಗಾಗಿ ಹಠ ಹಿಡಿದಿರುವ ವಿಡಿಯೋಯೊಂದು ವೈರಲ್ ಆಗಿದೆ.
tirthazoxo ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮರಿಯಾನೆಗೆ ತಿನ್ನಲು ಹಣ್ಣನ್ನು ನೀಡಿದ್ದಾಳೆ. ಬಾಳೆಹಣ್ಣು ತಿನ್ನಲು ನೀಡುತ್ತಿದ್ದಂತೆ ಬೇಡ ಎನ್ನುವಂತೆ ಸೊಂಡಿಲಿನಿಂದ ನೆಲಕ್ಕೆ ಎಸೆದಿದೆ. ಕೊನೆಗೆ ಎಸೆದ ಬಾಳೆಹಣ್ಣನ್ನೇ ತಿನ್ನುತ್ತಿರುವುದನ್ನು ನೋಡಬಹುದು. ಕೊನೆಗೆ ಈ ಮರಿಯಾನೆಗೆ ಆಪಲ್ ತಂದು ತಿನ್ನಲು ನೀಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.instagram.com/reel/DSTorwkD8aq/?igsh=OW40b2xuZ29wMzJw