Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.comಮದುಮಗಳೊಬ್ಬಳು ಮದುವೆಗೆ ಎರಡು ಗಂಟೆಗಳ ಮೊದಲು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಹೋಗಿರುವ ವಿಡಿಯೊ ವೈರಲ್ ಆಗ್ತಿದೆ.ಹೌದು, ಕುಟುಂಬದ ಒತ್ತಡದಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಯುವತಿ, ಬೇರೆಯವರನ್ನು ಮದುವೆಯಾಗಲು ಒಪ್ಪಿಕೊಂಡರೂ, ಅವಳು ತನ್ನ ಪ್ರೇಮಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ,ಕೆಂಪು ಉಡುಗೆ ತೊಟ್ಟ ವಧು ತನ್ನ ಪ್ರೇಮಿಗೆ ಅಂತಿಮ ವಿದಾಯ ಹೇಳಲು ಹವಣಿಸಿದ್ದಾಳೆ ಎನ್ನುವುದು ಈ ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.ಕಾರಿನಿಂದ ಇಳಿದ ಅವಳು, ತಕ್ಷಣ ಮಾಜಿ ಪ್ರೇಮಿ ಬಳಿ ಹೋಗಿ ಅವನನ್ನು ಅಪ್ಪಿಕೊಂಡಳು. ಅಷ್ಟರಲ್ಲಿ, ಕಾರಿನಲ್ಲಿ ಕುಳಿತಿದ್ದ ಸ್ನೇಹಿತ ಇಡೀ ಘಟನೆಯನ್ನು ವೀಡಿಯೊದಲ್ಲಿ ವಿವರಿಸಿದ್ದಾನೆ.ಹುಡುಗಿ ತನ್ನ ಮದುವೆಗೆ ಎರಡು ಗಂಟೆಗಳು ಉಳಿದಿವೆ ಮತ್ತು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎಂದು ಸ್ನೇಹಿತ ಹೇಳಿದ್ದಾನೆ. ಈ ಹುಡುಗಿ ನನ್ನ ಸ್ನೇಹಿತೆ ಶ್ರೇಯಾ. ಕೊನೆಯ ಬಾರಿಗೆ ತನ್ನೊಂದಿಗೆ ಭೇಟಿಯಾಗಲು ವ್ಯವಸ್ಥೆ ಮಾಡುವಂತೆ ಅವಳು ಕೇಳಿಕೊಂಡಿದ್ದಳು. ಕುಟುಂಬದ ಒತ್ತಡದಿಂದಾಗಿ ಹುಡುಗಿ ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ಸ್ನೇಹಿತ ವಿವರಿಸಿದ್ದಾನೆ. ಅವಳು ಎಲ್ಲಿದ್ದಾಳೆಂದು ಅವಳ ಕುಟುಂಬಕ್ಕೂ ತಿಳಿದಿಲ್ಲ. ಇದು ನಿಜವಾದ ಪ್ರೀತಿ, ಇದನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದಿದ್ದಾನೆ.ಹೇಳಿ ಕೇಳಿ ಇದು ರೀಲ್ಸ್ ಜಮಾನಾ. ಇದು ಕೂಡ ಸ್ಕ್ರಿಪ್ಟೆಡ್ ಇರಬಹುದು ಎಂದು ಹಲವರು ಹೇಳುತ್ತಿದ್ದಾರೆ.https://www.instagram.com/reel/DSMyojhDP4D/?igsh=MXdvMmg5NzVnczl3Zw==