Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಆರ್.ಅಶ್ವಿನ್ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ನೀಲಿಚಿತ್ರ ತಾರೆ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಫೋಟೋ ಪೋಸ್ಟ್ ಮಾಡುವ ಮೂಲಕ ಗಮನಸೆಳೆದರು.
ಈ ಮೂಲಕ ತಮ್ಮ ಅಭಿಮಾನಿಗಳಿಗೆ ತಲೆಗೆ ಹುಳ ಬಿಡುವ ಕೆಲಸ ಮಾಡಿದರು. ಮಂಗಳವಾರ ತಮ್ಮ ಅಧಿಕೃತ ಎಕ್ಸ್ ಪೇಜ್‌ನಲ್ಲಿ ಅವರು ಸನ್ನಿ ಲಿಯೋನ್ ಫೋಟೋ ಪೋಸ್ಟ್ ಮಾಡುವ ಮೂಲಕ ಗಮನಸೆಳೆದರು. ಅನುಭವಿ ಕ್ರಿಕೆಟಿಗ ಎರಡು ಇಮೇಜ್‌ನ ಕೊಲಾಜ್‌ಅನ್ನು ಅವರು ಫೋಸ್ಟ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಸನ್ನಿ ಲಿಯೋನ್ ಇದ್ದರೆ, ಇನ್ನೊಂದು ಫೋಟೋದಲ್ಲಿ ಚೆನ್ನೈನ ಪ್ರಮುಖ ಸಾಧು ಸ್ಟ್ರೀಟ್ ಫೋಟೋ ಹಾಕಿದ್ದರು. ಆದರೆ ಅಶ್ವಿನ್ ಪೇಜ್‌ನಲ್ಲಿ ಸನ್ನಿ ಲಿಯೋನ್ ಫೋಟೋ ಬಂದಿದ್ದೇಕೆ ಎಂದು ಅಭಿಮಾನಿಗಳು ತಲೆ ಕೆರೆದುಕೊಳ್ಳಲು ಆರಂಭಿಸಿದ್ದರು. ಅದರಲ್ಲಿ ಕೆಲವೇ ಕೆಲವರು ಮಾತ್ರ 37 ವರ್ಷದ ಆರ್.ಅಶ್ವಿನ್ ಅವರು ಹೇಳಲು ಹೊರಟಿರುವ ವಿಚಾರವನ್ನು ಸರಿಯಾಗಿ ಗೆಸ್ ಮಾಡಿದ್ದಾರೆ.
ಅಶ್ವಿನ್ ಅವರು ಆ ಫೋಟೋ ಮೂಲಕ ತಮಿಳು ನಾಡು ಆಲ್ರೌಂಡರ್ ಸನ್ನಿ ಸಂಧು ಬಗ್ಗೆ ಗಮನಸೆಳೆಯುವ ಪ್ರಯತ್ನ ಮಾಡಿದ್ದರು. ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಪಾದಾರ್ಪಣೆ ಮಾಡಿ ಗಮನಸೆಳೆದಿದ್ದರು. 9 ಎಸೆತಗಳಲ್ಲಿ 30 ರನ್ ಬಾರಿಸಿದ್ದ ಸನ್ನಿ ಸಂಧು ಸೋಮವಾರ ನಡೆದ ಪಂದ್ಯದಲ್ಲಿ ಸನ್ನಿ ಸಂಧು ಸೌರಾಷ್ಟ್ರ ವಿರುದ್ಧ ಪಂದ್ಯದ ಗೆಲುವಿಗೆ ಕಾರಣವಾದ ಚಿಕ್ಕ ಹಾಗೂ ಚೊಕ್ಕ ಇನ್ನಿಂಗ್ಸ್ ಆಡಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ಪರ ಕೇವಲ 2ನೇ ಪಂದ್ಯವಾಡುತ್ತಿರುವ ಸನ್ನಿ ಸಂಧು, ಕೇವಲ 9 ಎಸೆತಗಳಲ್ಲಿ 30 ರನ್ ಬಾರಿಸಿದ್ದರು. ಅದರೊಂದಿಗೆ 55 ಎಸೆತಗಳಲ್ಲಿ ಅಜೇಯ 101 ರನ್ ಬಾರಿಸಿದ್ದ ಸಾಯಿ ಸುದರ್ಶನ್ ಅವರೊಂದಿಗೆ ಪ್ರಮುಖ 37 ರನ್ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾಗಿದ್ದರು.