Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ಬಾಸ್ ಮನೆ ಒಳ್ಳೆಯವರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.. ಈ ವಾರ ಸಾಕಷ್ಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ಧ್ರುವಂತ್, ಧನುಶ್, ಸೂರಜ್, ಮಾಳು, ರಾಶಿಕಾ, ಸ್ಪಂದನಾ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಎಲ್ಲರೂ ಸೇಫ್ ಆಗಿ ಕೊನೆಯದಾಗಿ ಸೂರಜ್, ಮಾಳು ಮತ್ತು ಅಭಿಷೇಕ್ ಮಾತ್ರವೇ ಉಳಿದುಕೊಂಡರು. ಅವರು ಮೂವರನ್ನೂ ಆಕ್ಟಿವಿಟಿ ರೂಂಗೆ ಕಳಿಸಲಾಯ್ತು. ಮೂವರ ಮುಂದೆ ಸೂಟ್ಕೇಸ್ ಇಡಲಾಗಿತ್ತು. ಸೂಟ್ಕೇಸ್ನಲ್ಲಿ ಅವರ ಎವಿಕ್ಷನ್ಗೆ ಸಂಬಂಧಿಸಿದ ಬೋರ್ಡ್ ಇಡಲಾಗಿತ್ತು. ಅಭಿಷೇಕ್ ಅವರ ಸೂಟ್ಕೇಸ್ನಲ್ಲಿ ‘ದಿ ಎಂಡ್’ ಎಂದು ಬರೆದಿತ್ತು. ಅಲ್ಲಿಗೆ ಅಭಿಷೇಕ್ ಅವರ ಆಟ ಅಂತ್ಯವಾಯ್ತು.
ಅಭಿಷೇಕ್ ಅವರು ಬಿಗ್ಬಾಸ್ ಸೀಸನ್ 12ರ ಜಂಟಲ್ಮ್ಯಾನ್ ಆಗಿದ್ದರು. ಚೆನ್ನಾಗಿ ಟಾಸ್ಕ್ ಆಡುತ್ತಿದ್ದರು. ಮನೆಯ ನಿಯಮಗಳನ್ನು ಮೀರುತ್ತಿರಲಿಲ್ಲ. ಯಾರೊಟ್ಟಿಗೂ ಜಗಳ ಮಾಡುತ್ತಿರಲಿಲ್ಲ. ಯಾರ ಬಗ್ಗೆಯೂ ವಿನಾ ಕಾರಣ ಮಾತನಾಡುತ್ತಿರಲಿಲ್ಲ. ಯಾರ ಬೆನ್ನ ಹಿಂದೆಯೂ ನಿಂದನೆ ಮಾಡುತ್ತಿರಲಿಲ್ಲ. ದರ್ಪ ತೋರಿಸುತ್ತಿರಲಿಲ್ಲ, ಹಾಸ್ಯದ ಹೆಸರಲ್ಲಿ ತೇಜೋವಧೆ ಮಾಡುತ್ತಿರಲಿಲ್ಲ. ಒಟ್ಟಾರೆ ಒಬ್ಬ ಜಂಟಲ್ಮ್ಯಾನ್ ರೀತಿ ಬಿಗ್ಬಾಸ್ ಮನೆಯಲ್ಲಿದ್ದರು. ಆದರೆ ಅದೇ ಅವರಿಗೆ ಮುಳುವಾಯ್ತು. ಅಭಿಷೇಕ್ ಅವರು ಹೊರಗೆ ಬಂದ ಮೇಲೂ ಸಹ ಸುದೀಪ್ ಅವರು, ‘ನೀವೊಬ್ಬ ಒಳ್ಳೆಯ ವ್ಯಕ್ತಿ’ ಎಂದು ಬೆನ್ನುತಟ್ಟಿದರು. ಅಲ್ಲದೆ, ನೀವು ಹೊರಗೆ ಇದ್ದಂತೆ ಬಿಗ್ಬಾಸ್ ಮನೆಯಲ್ಲಿ ಇದ್ದಿರಿ ಬಹುಷಃ ಹಾಗೆ ಇರಬಾರದಿತ್ತೇನೋ ಎಂದರು. ಏನೇ ಆಗಲಿ ಒಬ್ಬ ಒಳ್ಳೆಯ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.