Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸಿಎಂಗೆ ಆರ್.ಅಶೋಕ್ ನಿಮ್ ಥರ ನಾಟಿ ಕೋಳಿ ತಿನ್ನಲ್ಲ ಎಂದಿದ್ಯಾಕೆ?
ಕರ್ನಾಟಕಪ್ರಮುಖ

ಸಿಎಂಗೆ ಆರ್.ಅಶೋಕ್ ನಿಮ್ ಥರ ನಾಟಿ ಕೋಳಿ ತಿನ್ನಲ್ಲ ಎಂದಿದ್ಯಾಕೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಚಳಗಾವಿ ಚಳಿಗಾಲದ ಅಧಿವೇಶನದ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರನ್ನು ನೋಡಿ, ‘ಏನು ಅಶೋಕ್, ಸಣ್ಣಗಾಗಿದ್ಯಾ?’ ಎಂದು ತಕ್ಷಣ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ನಾಟಿ ಕೋಳಿ ತಿನ್ನುವುದು ಬಿಟ್ಟುಬಿಟ್ಟಿದ್ದೀನಿ ಸಾರ್’ ಎಂದು ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಸುವರ್ಣಸೌಧದ ಮೊಗಸಾಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಇತರ ಶಾಸಕರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೌಪಚಾರಿಕ ಮಾತುಕತೆಯಲ್ಲಿ ನಿರತರಾಗಿದ್ದರು. ಅಧಿವೇಶನದ ಅಜೆಂಡಾ ಮತ್ತು ಸದನ ಸಲಹಾ ಸಮಿತಿ ಸಭೆ ನಡೆಸುವ ಕುರಿತು ಸ್ಪೀಕರ್ ಅವರ ಜೊತೆ ಚರ್ಚೆ ನಡೆಸಿದ ನಂತರ, ಸಿಎಂ ಮತ್ತು ಅಶೋಕ್ ಅವರು ಉಭಯ ಕುಶಲೋಪರಿ ವಿಚಾರ ವಿನಿಮಯ ಮಾಡಿಕೊಂಡರು.
ಕುಶಲೋಪರಿ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರನ್ನು ನೋಡಿ, ‘ಏನು ಅಶೋಕ್, ಸಣ್ಣಗಾಗಿದ್ಯಾ?’ ಎಂದು ತಕ್ಷಣ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ನಾಟಿ ಕೋಳಿ ತಿನ್ನುವುದು ಬಿಟ್ಟುಬಿಟ್ಟಿದ್ದೀನಿ ಸಾರ್’ ಎಂದು ಹೇಳಿದ್ದಾರೆ.
ಇದಕ್ಕೆ ತಕ್ಷಣವೇ ಹಾಸ್ಯಮಿಶ್ರಿತ ಧ್ವನಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಏಯ್, ಅದೆಲ್ಲಾ ಬಿಡಬಾರದು. ನೀನು ತಿನ್ನಬೇಕು, ಏನೂ ಆಗಲ್ಲ’ ಎಂದು ಸಲಹೆ ನೀಡಿದ್ದಾರೆ. ಆಡಳಿತ ಮತ್ತು ವಿಪಕ್ಷ ನಾಯಕರು ಈ ರೀತಿ ಪರಸ್ಪರ ಹಗುರವಾಗಿ ಮಾತುಕತೆ ನಡೆಸಿ ನಕ್ಕಿದ್ದು, ಅಲ್ಲಿನ ವಾತಾವರಣವನ್ನು ನಗೆಗಡಲಲ್ಲಿ ತೇಲಿಸಿತು. ನಾಟಿ ಕೋಳಿ ತಿನ್ನುವ ಕುರಿತು ಸಿಎಂ ನೀಡಿದ ಸಲಹೆ ಅಲ್ಲಿ ನೆರೆದಿದ್ದ ಎಲ್ಲರ ಮುಖದಲ್ಲಿ ನಗು ತರಿಸಿತ್ತು.
ಈ ಮಾತುಕತೆಯ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಜೊತೆ ‘ಬಾ ಒಂದು ಫೋಟೋ ತೆಗೆದುಕೊಳ್ಳೋಣ’ ಎಂದು ಹೇಳಿ ಜೊತೆಯಾಗಿ ಪೋಟೋ ತೆಗೆಸಿಕೊಂಡರು. ಇವರಿಬ್ಬರ ಫೋಟೋ ಸೆಷನ್ ನಡೆಯುತ್ತಿದ್ದಾಗಲೇ, ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ತಕ್ಷಣ ಮಧ್ಯಪ್ರವೇಶಿಸಿ, ‘ಸಾರ್, ಇದೇ ಅಧಿವೇಶನ ಸಿಎಂ ಆಗಿ ನಿಮಗೆ ಕೊನೆಯದಾ?’ ಎಂದು ಕಾಲೆಳೆದರು.
ಈ ವೇಳೆ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದ್ದಾರೆ. ಈ ವೇಳೆ ಸಿಎಂ, ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಕಿಚಾಯಿಸಿದರು. ಇದಕ್ಕೆ ಇಬ್ಬರು ನಾಯಕರು ಯಾವುದೇ ಉತ್ತರ ನೀಡದೇ ನಕ್ಕಿದರು. ಆದರೆ, ಸುನೀಲ್ ಕುಮಾರ್ ಅವರ ಈ ರಾಜಕೀಯ ವ್ಯಂಗ್ಯದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೂ ಮಾತನಾಡದೇ ಸುಮ್ಮನಾದರು.

ಬಿಗ್‌ಬಾಸ್‌ಗೆ ಹೋಗಿದಕ್ಕೆ ನನ್ನ ಚಪ್ಪಲಿ ತೆಗೆದುಕೊಂಡು ನಾನೇ ಹೊಡ್ಕೋಬೇಕು”; ಬಿಗ್ ಬಾಸ್ ಮಾಜಿ ಸ್ಪರ್ಧಿ ಈ ರೀತಿ ಹೇಳಿದ್ಯಾಕೆ?

TAGGED:Why did R. Ashok tell the CM not to eat chicken like you?
Share This Article
Facebook Twitter Copy Link Print
Previous Article ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ನನ್ನ ಚಪ್ಪಲೀಲಿ ನಾನೇ ಹೊಡ್ಕೋಬೇಕು: ಬಿಗ್ ಬಾಸ್ ಮಾಜಿ ಸ್ಪರ್ಧಿ ಈ ರೀತಿ ಹೇಳಿದ್ಯಾಕೆ?
Next Article ಬೆಂಗಳೂರು ನಗರದಲ್ಲಿ ಖಾಲಿ ನಿವೇಶನಗಳಿಗೆ ಭಾರಿ ದಂಡ ವಿಧಿಸಲು ರೆಡಿಯಾದ ಬಿಡಿಎ

Popular Posts

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read

ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನಾಗುತ್ತೆ? ಜ್ಯೋತಿಷ್ಯ ಹೇಳುವುದೇನು?

2 Min Read

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

You Might Also Like

ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read
ಕರ್ನಾಟಕಪ್ರಮುಖ

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖ

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

Social Networks

Facebook-f Instagram Twitter
Welcome Back!

Sign in to your account

Lost your password?