Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವಿಜಯಪುರ : ಮೂಢ ನಂಬಿಕೆಗೊಳಗಾಗಿದ್ದ ಪತಿ ಗಂಡು ಮಗುವಿಗಾಗಿ ಮಾಟಗಾತಿಯ ಮಾತನ್ನು ನಂಬಿ ಹೆಂಡತಿಯ ಕೂದಲು ಬಲವಂತವಾಗಿ ಕತ್ತರಿಸಿರುವ ಘಟನೆ ವಿಜಯಪುರದ ಹೊನ್ನುಟಗಿ ಗ್ರಾಮದಲ್ಲಿ ನಡೆದಿದೆ.
ಸುಮಾರು 8 ವರ್ಷಗಳ ಹಿಂದೆ ಜ್ಯೋತಿ ಮತ್ತು ಡುಂಡೇಶ್ ವಿವಾಹವಾಗಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಗಂಡು ಮಗು ಬೇಕೆಂಬ ಆಸೆ ಹೊಂದಿದ್ದ ದುಂಡೇಶ್ ಮತ್ತು ಆತನ ತಂದೆ ತಾಯಿ, ಜ್ಯೋತಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇನ್ನು, ಗಂಡು ಮಗುವಿನ ಆಸೆಗಾಗಿ ಮಾಟಗಾತಿಯೊಬ್ಬಳನ್ನು ಸಂಪರ್ಕಿಸಿದ್ದ ಕುಟುಂಬ ಆಕೆಯ ಮಾತಿನಂತೆ ಕೂದಲು ಕಟ್ ಮಾಡಿದ್ದಾರೆ. ಮಾಟಗಾತಿ ನಿನ್ನ ಪತ್ನಿಯ ಮೈಯಲ್ಲಿ ದೆವ್ವವಿದೆ. ಇದೇ ಕಾರಣದಿಂದ ನಿಮಗೆ ಗಂಡು ಮಗು ಪಡೆಯಲು ಸಾಧ್ಯವಾಗುತ್ತಿಲ್ಲ. ದೆವ್ವ ಬಿಡಿಸಬೇಕಾದರೆ ಆಕೆಯ ನೆತ್ತಿಯ ಭಾಗದಲ್ಲಿ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕೆಂದು ದುಂಡೇಶ್ಗೆ ಹೇಳಿದ್ದಳು ಎನ್ನಲಾಗಿದ್ದು.
ಇದನ್ನು ನಂಬಿದ್ದ ದುಂಡೇಶ್ ಕೂದಲು ಕಟ್ ಮಾಡಿದ್ದ. ಬಳಿಕ ರಕ್ತಸ್ರಾವದಿಂದ ಬಳಲಿದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ದೂರು ದಾಖಲಿಸಿದ್ದಾರೆ.ನೊಂದ ಸಂತ್ರಸ್ತ ಮಹಿಳೆ ಸದ್ಯ ದೂರು ನೀಡಿದ್ದಾರೆ.