Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ. ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. 2.25 ನಿಮಿಷದ ಟ್ರೇಲರ್ ಲಾಂಚ್ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರೇಮ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅರುಣ್ ಸಾಗರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.
ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರೇಮ್ ಅವರು ಸುದೀಪ್ ಅವರೊಟ್ಟಿಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ಈ ಘೋಷಣೆ ಸುದೀಪ್ ಅಭಿಮಾನಿಗಳಿಗೆ ತುಸು ಭಯ, ಆತಂಕ ತಂದಂತಿದೆ.
ಪ್ರೇಮ್ ಅವರು ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ‘ಜೋಗಿ’, ‘ಎಕ್ಸ್ಕ್ಯೂಸ್ ಮೀ’, ‘ಕರಿಯ’ ಅಂಥಹಾ ಕಲ್ಟ್ ಸಿನಿಮಾಗಳನ್ನು ಸಹ ಪ್ರೇಮ್ ನೀಡಿದ್ದಾರೆ. ಆದರೆ ಇತ್ತೀಚೆಗೆ ಅವರು ನಿರ್ದೇಶನ ಮಾಡಿರುವ ಸಿನಿಮಾಗಳು ಒಂದರ ಹಿಂದೊಂದರಂತೆ ವಿಫಲವಾಗುತ್ತಿವೆ. ಈಗ ಸುದೀಪ್ ಸಿನಿಮಾ ಬೇರೆ ಘೋಷಣೆ ಮಾಡಿದ್ದಾರೆ. ಇದು ಸಹಜವಾಗಿಯೇ ಸುದೀಪ್ ಅಭಿಮಾನಿಗಳಿಗೆ ಭಯ ಮೂಡಿಸಿದೆ.
ಅಸಲಿಗೆ ಈ ಹಿಂದೆ ‘ವಿಲನ್’ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾಕ್ಕೆ ಭಾರಿ ಪ್ರಚಾರ ನೀಡಲಾಗಿತ್ತು, ಭಾರಿ ನಿರೀಕ್ಷೆಗಳನ್ನು ಸಿನಿಮಾ ಮೇಲೆ ಇರಿಸಲಾಗಿತ್ತು. ಆದರೆ ಬಹಳ ವೀಕ್ ಆದ ಕತೆ, ನಿರೂಪಣೆಯಿಂದಾಗಿ ಸಿನಿಮಾ ಸೋತಿತು. ಹಾಡುಗಳು, ಸುದೀಪ್ ಮತ್ತು ಶಿವಣ್ಣನ ನಟನೆಯ ಹೊರತಾಗಿ ಸಿನಿಮಾನಲ್ಲಿ ಇನ್ಯಾವುದೂ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಸಿನಿಮಾದ ಬಗ್ಗೆ ಆಗ ವ್ಯಕ್ತವಾಗಿತ್ತು.