Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅಯೋಧ್ಯೆ:ಇಬ್ಬರು ಮಕ್ಕಳ ತಾಯಿ ಮಧ್ಯರಾತ್ರಿ ತನ್ನ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಿರುವ ಘಟನೆ ಅಯೋಧ್ಯೆಯ ಪುರ ಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ನಡೆದಿದೆ.
ಮಹಿಳೆಯ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಮಾವ ನಾಗ್ಪುರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅತ್ತೆ ಮೊಮ್ಮಕ್ಕಳೊಂದಿಗೆ ಮಲಗಿದ್ದು, ಸೊಸೆಯ ಕೋಣೆಯಿಂದ ಶಬ್ದ, ಪಿಸುಮಾತುಗಳು ಕೇಳಿ ಬರುತ್ತಿದ್ದು, ಇದರಿಂದ ಆಘಾತಕ್ಕೊಳಗಾದ ಅತ್ತೆ ಜನರನ್ನು ಒಗ್ಗೂಡಿಸಿದ್ದಾಳೆ. ಜನರು ಬಂದು ಸೊಸೆಯ ಕೋಣೆಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
30 ವರ್ಷದ ಮಹಿಳೆಯ 25 ವರ್ಷದ ಪ್ರಿಯಕರ ಹಾಸಿಗೆಯ ಕೆಳಗೆ ಪತ್ತೆಯಾಗಿದ್ದಾನೆ. ಕೂಡಲೇ ಈ ವಿಷಯವನ್ನು ಆಕೆಯ ಪತಿಗೆ ತಿಳಿಸಿದ್ದು, ಕೂಡಲೇ ಆತ ದುಬೈನಿಂದಲೇ ಆಕೆಗೆ ವಿಚ್ಛೇದನ ನೀಡಿದ್ದಾನೆ. ಈ ಬಳಿಕ ಸೊಸೆಗೆ ಪ್ರಿಯಕರನೊಂದಿಗೆ ಮದುವೆ ಮಾಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ಆಗಾಗ್ಗೆ ಮಧ್ಯರಾತ್ರಿ ಮಹಿಳೆಯ ಮನೆಗೆ ಆಕೆಯ ಪ್ರಿಯಕರ ಭೇಟಿಯಾಗಲು ಬರುತ್ತಿದ್ದ. ಘಟನೆಯ ಬಳಿಕ ಗ್ರಾಮಸ್ಥರು ಸಭೆ ಕರೆದು ಮಹಿಳೆ ಮತ್ತು ಪ್ರಿಯಕರ ಒಟ್ಟಿಗೆ ವಾಸಿಸಲು ಬಯಸಿದರೆ ಅವರು ಮದುವೆಯಾಗಬೇಕು ಎಂದು ಸೂಚಿಸಿದರು. ಸೊಸೆ ತನ್ನ ಪ್ರಿಯಕರನೊಂದಿಗೆ ವಾಸಿಸಲು ಮತ್ತು ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಈ ಘಟನೆಯಿಂದ ಯುವಕನ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.