Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉಡುಪಿ : ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆಯೋಜಿಸಲಾದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಇಂದು ಉಡುಪಿಗೆ ಆಗಮಿಸಿದ್ದಾರೆ
.ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಮೋದಿ ಅವರು, ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಉಡುಪಿಯತ್ತ ಪ್ರಯಾಣ ಬೆಳೆಸಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಉಡುಪಿ ಹೆಲಿಪ್ಯಾಡ್ಗೆ ಆಗಮಿಸಿದರು
ಉಡುಪಿಯ ಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಷ್ಟಮಠದ ಪ್ರಮುಖರು ಸ್ವಾಗತಿಸಿದ್ದು, ಬಳಿಕ ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟಿಸಿದ್ದಾರೆ. ಬಳಿಕ ನವಗ್ರಹ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.
ಉಡುಪಿ ಕೃಷ್ಣಮಠದಲ್ಲಿ 1 ತಿಂಗಳ ಕಾಲ ಬೃಹತ್ ಗೀತೋತ್ಸವ ನಡೆಯಲಿದ್ದು, ಇಂದಿನಿಂದ ಬರೋಬ್ಬರಿ 1 ಲಕ್ಷ ಭಕ್ತರಿಂದ ಲಕ್ಷ ಕಂಠ ಗೀತಾ ಉತ್ಸವ ಆಯೋಜನೆ ಮಾಡಲಾಗಿದೆ. 1 ಲಕ್ಷ ಭಕ್ತರ ಜೊತೆ ಶ್ಲೋಕ ಪಠಣ ಮಾಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದು, ಮೋದಿ ಕೊನೆಯ 10 ಶ್ಲೋಕ ಪಠಿಸಲಿದ್ದಾರೆ.