Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವರದಕ್ಷಿಣೆಗೆ ಕಿರುಕುಳ ನೀಡಿ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಪತಿಗೆ ಬೆಳಗಾವಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 30000 ದಂಡ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಖಾನಾಪುರ ತಾಲ್ಲೂಕಿನ ಹಿರೇ ಅಂಗೊಳ್ಳಿ ಗ್ರಾಮದಲ್ಲಿ 2019ರ ನ.7ರಂದು ಮದ್ಯವ್ಯಸನಿಯಾಗಿದ್ದ ಜಗದೀಶ ಚಂದ್ರಪ್ಪ ಗೋಲಿಹಳ್ಳಿ(42) ಎಂಬುವನು ತನ್ನ ಪತ್ನಿ ಸರಸ್ವತಿಯನ್ನು ತವರಿನಿಂದ ವರದಕ್ಷಿಣೆ ತರುವಂತೆ ಒತ್ತಾಯಿಸಿ ಹೊಡೆಯುತ್ತಿದ್ದ. ಈ ವೇಳೆ ಪತಿಯಿಂದ ತಪ್ಪಿಸಿಕೊಂಡು ತವರಿಗೆ ಹೊರಟ ಸರಸ್ವತಿಯನ್ನು ಕೋಣೆಯಲ್ಲಿ ತಡೆದು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ಬೆಂಕಿಗೆ ಬೆಂದು ತೀವ್ರ ಗಾಯಗಳೊಂದಿಗೆ ಸರಸ್ವತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾರೆ. ತನ್ನ ಪುತ್ರಿಯನ್ನು ಅಳಿಯನೇ ಕೊಲೆ ಮಾಡಿದ್ದಾಗಿ ಮೃತ ಸರಸ್ವತಿಯ ತಾಯಿ ಚೆನ್ನವ್ವ ತಟ್ಟಿಮನಿ ನಂದಗಡ ಠಾಣೆಗೆ ದೂರು ದಾಖಲು ಮಾಡಿದ್ದರು. ಅಂದಿನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿದ್ದರು.