Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಯಲ್ಲಿ ರಂಜಿತ್ ಅವರ ಜಗಳಗಳು ಸಹ ಸುದ್ದಿಯಾಗಿದ್ದವು. ಲಾಯರ್ ಜಗದೀಶ್ ಅವರೊಂದಿಗೆ ಗಲಾಟೆ ನಡೆದು, ಇಬ್ಬರೂ ಸ್ಪರ್ಧಿಗಳನ್ನ ಶೋನಿಂದ ಹೊರಹಾಕಲಾಯಿತು. ಇದೀಗ ನಟ ರಂಜಿತ್ ಅವರ ಕುಟುಂಬದಲ್ಲಿ ಗಲಾಟೆ ಸುದ್ದಿಯಾಗಿತ್ತು. ಇದೀಗ ಮತ್ತೊಂದು ಎಡವಟ್ಟು ಮಾಡಿದ್ದಾರೆ. ತಾವು ಪ್ರಯಾಣಿಸುವ ಕಾರಿನಲ್ಲಿ ಶಾಸಕರ ಸ್ಟಿಕ್ಕರ್ ಬಳಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಬಿಗ್ ಬಾಸ್ ಸ್ಪರ್ಧಿ ರಂಜಿತ್ ಹಾಗೂ ಪತ್ನಿ ಮಾನಸ ಮಹೀಂದ್ರ ಎಕ್ಸ್‌ಯುವಿ 500 ಕಾರಿನ ಮೂಲಕ ಆಗಮಿಸಿದ್ದಾರೆ. ಆದರೆ ಕಾರಿನ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಶಾಸಕರ ಪಾಸ್ ಗೋಚರಿಸುತ್ತಿದೆ. ಈ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಂಜಿತ್ ಶಾಸಕರ ಪಾಸ್ ದುರ್ಬಳಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಶಾಸಕರ ಬಿಟ್ಟು ಬೇರೆ ಯಾರು ಪಾಸ್ ಬಳಸುವಂತಿಲ್ಲ. ಈ ಕಾರು ಶಾಸಕರ ಹೊರತು ಬೇರೊಬ್ಬರು ಬಳಸವುದು ನಿಯಮ ಉಲ್ಲಂಘನೆಯಾಗಿದೆ
ಬಿಗ್ ಬಾಸ್ ಸ್ಪರ್ಧಿ ರಂಜಿತ್ ಕಾರಿನಲ್ಲಿ ಯಾವ ಶಾಸಕರ ಪಾಸ್ ಬಳಸಲಾಗಿದೆ ಅನ್ನೋ ಕುರಿತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ವಿಡಿಯೋ ಆಧರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
https://www.newsics.com/2025/11/28/people-drowned-many-injured/