Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Kashmiri doctor detained ದೆಹಲಿ ಕಾರು ಸ್ಫೋಟ: ಮತ್ತೋರ್ವ ಕಾಶ್ಮೀರಿ ವೈದ್ಯ ವಶಕ್ಕೆ, ಸ್ಫೋಟದ ತೀವ್ರತೆ ಸಾರುವ ಮತ್ತೊಂದು ವಿಡಿಯೋ ಬಿಡುಗಡೆ
ದೇಶಪ್ರಮುಖ

Kashmiri doctor detained ದೆಹಲಿ ಕಾರು ಸ್ಫೋಟ: ಮತ್ತೋರ್ವ ಕಾಶ್ಮೀರಿ ವೈದ್ಯ ವಶಕ್ಕೆ, ಸ್ಫೋಟದ ತೀವ್ರತೆ ಸಾರುವ ಮತ್ತೊಂದು ವಿಡಿಯೋ ಬಿಡುಗಡೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕಾಶ್ಮೀರ: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟ ಪ್ರಕರಣ ಸಂಬಂಧ ಕಾಶ್ಮೀರದ ಮತ್ತೊಬ್ಬ ವೈದ್ಯನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಅಲ್ಲದೆ, ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಸ್ಫೋಟದಲ್ಲಿ ಈವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಪೈಕಿ ಎಂಟು ಜನರನ್ನು ಗುರುತಿಸಲಾಗಿದೆ

.
ದಕ್ಷಿಣ ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಡಾ.ತಜಮುಲ್ ಅಹ್ಮದ್ ಮಲಿಕ್ ಎಂಬಾತನೇ ವಶಕ್ಕೆ ಪಡೆಯಲಾದ ಆರೋಪಿ. ಈತ ಕಣಿವೆನಾಡಿನ ತೃತೀಯ ದರ್ಜೆ ಸರ್ಕಾರಿ ಆಸ್ಪತ್ರೆಯಾದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ (SMHS) ಕೆಲಸ ಮಾಡುತ್ತಿದ್ದ. ಪ್ರಕರಣದಲ್ಲಿ ಯಾವ ಕಾರಣ, ಹಿನ್ನೆಲೆಯ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಜೈಶ್-ಎ-ಮೊಹಮ್ಮದ್ ಜತೆ ಸಂಬಂಧ ಹೊಂದಿರುವ ‘ವೈಟ್ ಕಾಲರ್’ ಟ್ರಾನ್ಸ್-ಸ್ಟೇಟ್ ಭಯೋತ್ಪಾದನಾ ಘಟಕದಲ್ಲಿ ಹೆಸರು ಕೇಳಿಬಂದಿದೆ ಎನ್ನಲಾದ ಕಾಶ್ಮೀರದ ಐದನೇ ವೈದ್ಯ ಈತನಾಗಿದ್ದಾನೆ

.
ಈ ಸ್ಫೋಟದಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರತಾಗಿ, ಹರಿಯಾಣದ ಫರಿದಾಬಾದ್ ಮತ್ತು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಸೇರಿದಂತೆ ಡಾ. ಉಮರ್ ನಬಿ ಎಂಬಾತ ಕೂಡ ಸಾವನ್ನಪ್ಪಿರುವ ಶಂಕೆ ಇದೆ.

ಕಳೆದ ತಿಂಗಳಿಂದಲೂ ಸಹ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದರು
ಇದಕ್ಕೂ ಮುನ್ನ, ಫರಿದಾಬಾದ್‌ನ ಅಲ್ ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪುಲ್ವಾಮಾದ ಡಾ.ಮುಜಮ್ಮಿಲ್ ಶಕೀಲ್ ಮತ್ತು ಸಹರಾನ್‌ಪುರದ ಫೇಮಸ್ ಮೆಡಿಕೇರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅನಂತ್‌ನಾಗ್‌ನ ಡಾ.ಅದೀಲ್ ಅಹ್ಮದ್ ರಾಥರ್ ಅವರನ್ನು ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದರು.

ಕೆಂಪು ಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದ ಕ್ಷಣವನ್ನು ಸೆರೆಹಿಡಿದ ಸಿಸಿಟಿವಿ ದೃಶ್ಯಾವಳಿ ಬುಧವಾರ ಬೆಳಕಿಗೆ ಬಂದಿದೆ. ಕೆಂಪು ಕೋಟೆ ಕ್ರಾಸಿಂಗ್‌ನಲ್ಲಿ ಅಳವಡಿಸಲಾದ ಕಣ್ಗಾವಲು ಕ್ಯಾಮರಾದಲ್ಲಿ ದಾಖಲಾಗಿರುವ ಈ ದೃಶ್ಯವು, ಜನನಿಬಿಡ, ವಾಹನಗಳು ಸಂಚರಿಸುತ್ತಿರುವಾಗಲೇ ಹಠಾತ್ ಬೆಂಕಿಯ ಜ್ವಾಲೆ ಆವರಿಸಿರುವುದನ್ನು ಕಾಣಬಹುದು.

ಸೋಮವಾರ ಸಂಜೆ 6.50ರ ಸುಮಾರಿಗೆ ಸಂಭವಿಸಿದ ಈ ಸ್ಫೋಟದಲ್ಲಿ ಕೆಂಪು ಬಲೂನ್ ಸಿಡಿದಂತೆ ಗೋಚರಿಸುತ್ತಿದೆ. ಬಳಿಕ ಜನರು ರಕ್ಷಣೆಗಾಗಿ ಓಡುತ್ತಿದ್ದು, ಭಯಭೀತ ವಾತಾವರಣ ಸೃಷ್ಟಿಯಾಗಿರುವುದು ಸೆರೆಯಾಗಿದೆ.
ಮೂವರು ವೈದ್ಯರು ಸೇರಿದಂತೆ 8 ಜನ ಶಂಕಿತರನ್ನು ಬಂಧಿಸಿ, 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಭಯಾನಕ ಘಟನೆ ಸಂಭವಿಸಿತ್ತು.

ಜ.26ರಂದು ಭಾರೀ ದಾಳಿಗೆ ಸಂಚು ರೂಪಿಸಿದ್ದ ಉಗ್ರರು: ಕಾರು ಸ್ಫೋಟ ತನಿಖೆ ವೇಳೆ ಬಹಿರಂಗ

Actor Gaddappa is no more ಚಿತ್ರನಟ ಗಡ್ಡಪ್ಪ ಇನ್ನಿಲ್ಲ

TAGGED:Delhi car blast: Another Kashmiri doctor detained
Share This Article
Facebook Twitter Copy Link Print
Previous Article Actor Gaddappa is no more ಚಿತ್ರನಟ ಗಡ್ಡಪ್ಪ ಇನ್ನಿಲ್ಲ
Next Article ಸರ್ಕಾರಿ ಮಹಿಳಾ ಉದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ, ಸ್ಥಿತಿ ಗಂಭೀರ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?