Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Car blast ಈ ಸ್ಫೋಟ ಆಕಸ್ಮಿಕವಲ್ಲ, 150 ಮೀಟರ್ ಎತ್ತರಕ್ಕೆ ಚಿಮ್ಮಿದ ಕಾರು, ಜೈಶ್‌ ಎ ಮೊಹಮ್ಮದ್‌ ಲಿಂಕ್‌?
ದೇಶಪ್ರಮುಖ

Car blast ಈ ಸ್ಫೋಟ ಆಕಸ್ಮಿಕವಲ್ಲ, 150 ಮೀಟರ್ ಎತ್ತರಕ್ಕೆ ಚಿಮ್ಮಿದ ಕಾರು, ಜೈಶ್‌ ಎ ಮೊಹಮ್ಮದ್‌ ಲಿಂಕ್‌?

Share
2 Min Read
SHARE

newsics.com

ದೆಹಲಿ ಕೆಂಪುಕೋಟೆ ಬಳಿ ಮೆಟ್ರೋ ಸ್ಟೇಷನ್‌ ಗೇಟ್‌ ನಂ.1ರ ಬಳಿ ಭಾರೀ ಪ್ರಮಾಣದಲ್ಲಿ ಸಂಭವಿಸಿದ ಸ್ಫೋಟ ಮೇಲ್ನೋಟಕ್ಕೆ ಇದು ಬಾಂಬ್‌ ಸ್ಫೋಟದಂತೆಯೇ ಗೋಚರಿಸುತ್ತಿದೆ. ನಿಂತಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು.

ಆದರೆ ಆ ಕಾರನ್ನು ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿರಲಿಲ್ಲ ಎಂಬ ವಿಷಯ ಬಹಿರಂಗಗೊಂಡಿದೆ. ಅಂದಹಾಗೆ, ಹ್ಯುಂಡಾಯಿ ಐ20 ಕಾರು ಸ್ಫೋಟಗೊಂಡಿದೆ. ಹರ್ಯಾಣ ರಿಜಿಸ್ಟರ್‌ ಸಂಖ್ಯೆ ಹೊಂದಿರುವ ಈ ಕಾರು ತುಂಬಾ ನಿಧಾನವಾಗಿ ರಸ್ತೆಯಲ್ಲಿ ಚಲಿಸುತ್ತಿತ್ತು. ಇದರಲ್ಲಿ ಮೂವರಿದ್ದರು. ರೆಡ್‌ಫೋರ್ಟ್‌ ಸಮೀಪದ ಮೆಟ್ರೋ ಸ್ಟೇಷನ್‌ ಬಳಿಯ ಕೆಂಪುದೀಪದ ಬಳಿ ನಿಂತಿತ್ತು. ಆಗ ಸುಮಾರು ಸಮಯ ಸಂಜೆ 6.52 ಆಗಿತ್ತು. ಕಾರು ನಿಂತ ಜಾಗಕ್ಕೆ ಗೌರಿ ಶಂಕರ ಮತ್ತು ಜೈನ ದೇಗುಲಗಳು ತುಂಬ ಹತ್ತಿರದಲ್ಲೇ ಇವೆ. ಕಾರು ದೇಗುಲಗಳಿಗೆ ಇನ್ನೂ ಸಮೀಪಕ್ಕೆ ಹೋಗುವ ಮೊದಲು ಸ್ಫೋಟಗೊಂಡಿದೆ. ಈ ಕಾರು ಸ್ಫೋಟಗೊಂಡ ತೀವ್ರತೆ ಎಷ್ಟಿತ್ತು ಅಂದರೆ, ಅಕ್ಕಪಕ್ಕದಲ್ಲಿ ಇದ್ದ ಇನ್ನೂ ಹಲವು ವಾಹನಗಳು ಸುಟ್ಟು ಭಸ್ಮಗೊಂಡಿವೆ. ಆರು ಕಾರುಗಳು, ಎರಡು ಇ-ರಿಕ್ಷಾಗಳು ಮತ್ತು ಒಂದು ಆಟೋರಿಕ್ಷಾ ಬೆಂಕಿಗೆ ಆಹುತಿಯಾಗಿವೆ.
ಸ್ಫೋಟಗೊಂಡ ಕಾರು 150 ಮೀಟರ್ ಎತ್ತರಕ್ಕೆ ಚಿಮ್ಮಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಜೈಶ್‌ ಎ ಮೊಹಮ್ಮದ್‌ ಲಿಂಕ್‌?

ದೆಹಲಿ ರೆಡ್‌ ಫೋರ್ಟ್‌ ಮೆಟ್ರೋ ಸ್ಟೇಷನ್‌ ಬಳಿ ನಡೆದ ಸ್ಫೋಟವು ಸಹಜವಲ್ಲ. ಇದು ಕಾರಿನಲ್ಲಿನ ದೋಷದ ಕಾರಣಕ್ಕೆ ಆಗಿದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಈ ಘಟನೆಯು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ದಾಳಿಯ ಲಕ್ಷಣಗಳನ್ನು ತೋರಿಸುತ್ತಿದೆ. ಹೀಗಾಗಿ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಕೃತ್ಯವೇ ಇದಾಗಿರಬಹುದು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದರೆ ಇದಿನ್ನೂ ದೃಢಪಡಬೇಕಾಗಿದೆ.

ಎನ್‌ಎಸ್‌ಜಿ, ಎನ್‌ಐಎ ಮತ್ತು ವಿಧಿವಿಜ್ಞಾನ ವಿಭಾಗದ ತಂಡಗಳನ್ನು ಸ್ಥಳಕ್ಕೆ ಧಾವಿಸಿದ್ದು ತೀವ್ರವಾಗಿ ಪರಿಶೀಲನೆ ನಡೆಸುತ್ತಿವೆ. ಸ್ಫೋಟದ ನಂತರ ಸ್ಥಳದ ಸುತ್ತಲಿನ ಸಂಚಾರ ಸ್ಥಗಿತಗೊಂಡಿತು. ಆ ರೋಡ್‌ನಲ್ಲಿ ವಾಹನ ಸಂಚಾರವೇ ಕಷ್ಟವಾಯಿತು. ಇದು ಬಾಂಬ್‌ ಆಗಿರಬಹುದು ಎಂದು ದೆಹಲಿ ಪೊಲೀಸರು ಈಗಾಗಲೇ ಹೇಳಿದ್ದಾರೆ.

ಸ್ಫೋಟಗೊಂಡ ಸಾಧನವು ANFO (ಅಮೋನಿಯಂ ನೈಟ್ರೇಟ್-ಇಂಧನ ತೈಲ) ಅನ್ನು ಒಳಗೊಂಡಿರಬಹುದು – ಇದು ಇಂಧನ ತೈಲದೊಂದಿಗೆ ಸರಂಧ್ರ ಅಮೋನಿಯಂ ನೈಟ್ರೇಟ್‌ನಿಂದ ತಯಾರಿಸಿದ ವಾಣಿಜ್ಯಿಕವಾಗಿ ಬಳಸಲಾಗುವ ಸ್ಫೋಟಕ ಮಿಶ್ರಣವಾಗಿದೆ. ANFO ಎಂಬುದು ಗಣಿಗಾರಿಕೆ ಮತ್ತು ನಿರ್ಮಾಣದಲ್ಲಿ ಸಾಮಾನ್ಯವಾಗಿ ಬಳಸುವ ಶಕ್ತಿಶಾಲಿ, ಆಮ್ಲಜನಕ-ಸಮತೋಲಿತ ಕೈಗಾರಿಕಾ ಸ್ಫೋಟಕವಾಗಿದೆ; ಇದರ ಸ್ಫೋಟ ತೀವ್ರವಾಗಿ ಇರುತ್ತದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.

ಛಿದ್ರ ಛಿದ್ರವಾದ ದೇಹಗಳು, ದೆಹಲಿ ಸ್ಫೋಟದ ಭೀಕರ ದೃಶ್ಯಗಳು

TAGGED:Jaish-e-Mohammed link?the car jumped 150 metersThis explosion was not accidental
Share This Article
Facebook Twitter Copy Link Print
Previous Article ಬೆಳಗ್ಗೆ ಎದ್ದಾಗ ಈ ವಸ್ತುಗಳನ್ನು ನೋಡಬೇಡಿ; ಸಮಸ್ಯೆಗಳು ಎದುರಾಗಬಹುದು ಎಚ್ಚರ
Next Article Delhi blast ಭಾರೀ ಸ್ಫೋಟಕ್ಕೆ ಬೆಚ್ಚಿದ ಜನ, ದಿಕ್ಕಾಪಾಲಾಗಿ ಓಡಿದರು… ವೀಡಿಯೊ ನೋಡಿ…

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?